Connect with us

Bengaluru City

ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು

Published

on

ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಟೆಕ್ಕಿ ವಿರುದ್ಧ ಛತ್ತೀಸ್‌ಗಡದ ರಾಯಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗ ಪ್ರಕರಣ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

ಛತ್ತೀಸ್‍ಗಡದ ಮೂಲದ ಹುಡುಗಿ ಆರು ವರ್ಷದ ಹಿಂದೆ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಮದುವೆಯಾಗಿದ್ದರು. ಈಜೀಪುರದಲ್ಲಿ ದಂಪತಿ ನೆಲೆಸಿದ್ದು, ಆರಂಭದಲ್ಲಿ ಸಂತೋಷದಲ್ಲಿದ್ದ ಪತ್ನಿಗೆ ನಂತರ ಪತಿಯ ವಿಕೃತ ಮನಸ್ಥಿತಿ ಗೊತ್ತಾಗಿದೆ.

ಪ್ರತಿ ದಿನ ಬ್ಲೂ ಫಿಲ್ಮ್ ವೀಕ್ಷಿಸುವ ಚಟವನ್ನು ಹೊಂದಿದ್ದ ಈತ  ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿ ನೀನು ಈ ರೀತಿಯಾಗಿ ಸಹಕರಿಸು ಎಂದು ಪೀಡಿಸುತ್ತಿದ್ದ. ಆರಂಭದಲ್ಲಿ ಒಂದೆರಡು ಬಾರಿ ನಾನು ಒಪ್ಪಿ ಸಹಕರಿಸಿದ್ದೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಸಿಕೊಂಡಿದ್ದ ಪತಿ  ನಂತರ ಪ್ರತಿ ಬಾರಿಯೂ ಈ ರೀತಿಯಾಗಿ ಸಹಕರಿಸು ಎಂದು ಒತ್ತಾಯಿಸುತ್ತಿದ್ದ.  ನಾನು ಒಲ್ಲೆ ಎಂದಿದ್ದಕ್ಕೆ ನಮ್ಮಿಬ್ಬರ ಲೈಂಗಿಕ ಕ್ರಿಯೆಯ ವಿಡಿಯೋವನ್ನು ನಿನ್ನ ತಂದೆಗೆ ವಾಟ್ಸಪ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ

ಕಿರುಕುಳದ ಬಗ್ಗೆ ಮಾವನ ಹತ್ತಿರ ಹೇಳಿಕೊಂಡಿಲ್ಲ . ಆತ್ತೆ ಬಳಿ ಹೇಳಿದಾಗ ಅವರು ಅದನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ಕೊನೆಗೆ ವಿಕೃತ ಪತಿಯ ಕಾಟ ತಡೆಯಲಾರದೆ ಗಂಡನನ್ನು ಬಿಟ್ಟು ಪತ್ನಿ ತಂದೆಯ ಮನೆಯಾದ ಛತ್ತೀಸ್‍ಗಡದ ರಾಯಭಾಗಕ್ಕೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣ ಈಗ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

ಟೆಕ್ಕಿ ವಿರುದ್ಧ ಅಸ್ವಾಭಾವಿಕ ಲೈಂಗಿಕಕ್ರಿಯೆ (ಐಪಿಸಿ377), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಹಾಗೂ 67ರ (ಅಶ್ಲೀಲ ದೃಶ್ಯ ರವಾನೆ) ಅಡಿ ಹಾಗೂ ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ

ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ಮನೆಯಿಂದ ಟೆಕ್ಕಿ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

Click to comment

Leave a Reply

Your email address will not be published. Required fields are marked *