ನವದೆಹಲಿ: ಮದುವೆಗೂ ಮುನ್ನ ಹುಡುಗಿಯರಿಗಿಂತ ಹದಿಹರೆಯದ ಹುಡುಗರು ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿದ್ದಾರೆ ಎಂದು ಸಮೀಕ್ಷೆಯೊಂದರ ಮೂಲಕ ತಿಳಿದುಬಂದಿದೆ.
ಕಳೆದ ವರ್ಷ ಮದುವೆಗೂ ಮುನ್ನ ಶೇ 13.4ರಷ್ಟು ಪುರುಷರು ಲೈಂಗಿಕ ಸಂಬಂಧ ಹೊಂದಿದ್ದರೆ, ಕೇವಲ ಶೇ. 2ರಷ್ಟು ಮಹಿಳೆಯರು ಲೈಂಗಿಕ ಸಂಬಂಧ ಹೊಂದಿದ್ದರು. ಆದರೆ ಇತ್ತೀಚೆಗೆ ಎನ್‍ಎಫ್‍ಎಚ್‍ಎಸ್-5 ನಡೆಸಿದ ಸಮೀಕ್ಷೆಯಲ್ಲಿ ಅದೇ ವಯಸ್ಸಿನ 95.3 ಶೇ. ಮಹಿಳೆಯರು ಲೈಂಗಿಕ ಸಂಬಂಧ ಹೊಂದಿದ್ದರೆ, 23-24 ವರ್ಷ ವಯಸ್ಸಿನ ಶೇ.77ರಷ್ಟು ಪುರುಷರು ಲೈಂಗಿಕ ಸಂಬಂಧವನ್ನು ಹೊಂದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಮುರುಘಾ ಶ್ರೀ ಪೀಠ ತ್ಯಾಗ ಮಾಡಲಿ: ಎಚ್. ವಿಶ್ವನಾಥ್ ಆಗ್ರಹ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-21)ರಲ್ಲಿ ಪುರುಷರಿಗಿಂತ ಹೆಚ್ಚು ಅವಿವಾಹಿತ ಮಹಿಳೆಯರ ಸೆಕ್ಸ್ ಜೀವನ ಸುರಕ್ಷಿತವಾಗಿದೆ. 15-24 ವರ್ಷ ವಯಸ್ಸಿನ ಒಂಟಿ ಪುರುಷರು ಮತ್ತು ಮಹಿಳೆಯರ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ 15-19 ವರ್ಷ ವಯಸ್ಸಿನ ಒಂಟಿ ಹುಡುಗಿಯರಲ್ಲಿ ಶೇ. 1.3ರಷ್ಟು ಮಂದಿ ಕಳೆದ 12 ತಿಂಗಳಿನಲ್ಲಿ ಲೈಂಗಿಕತೆಯನ್ನು ಹೊಂದಿದ್ದರೆ, ಶೇ. 4.4 ರಷ್ಟು ಇದೇ ವಯಸ್ಸಿನ ಪುರುಷರು ಲೈಂಗಿಕತೆಯನ್ನು ಹೊಂದಿದ್ದಾರೆ.
707 ಜಿಲ್ಲೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಸಮೀಕ್ಷೆ ಮಾಡಿದ್ದು, ಹುಡುಗಿಯರಿಗಿಂತ ಹದಿಹರೆಯದ ಹುಡುಗರು ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿದ್ದಾರೆ ಅಧ್ಯಯನ ತಿಳಿಸಿದೆ. ಇದನ್ನೂ ಓದಿ: ಮನೆಯೊಂದರಲ್ಲಿ ಸಾಮೂಹಿಕ ನಮಾಜ್ ಮಾಡಿದ್ದಕ್ಕೆ ಕೇಸ್ – ಪ್ರಕರಣ ರದ್ದುಗೊಳಿಸಿದ ಪೊಲೀಸರು