ನವದೆಹಲಿ: ಮದುವೆಯಾಗದೇ (Marriage) ಮಗುವಿಗೆ ಜನ್ಮ ನೀಡಿದ 20 ವರ್ಷದ ಯುವತಿ ಸಾಮಾಜಿಕ ಕಳಂಕಕ್ಕೆ ಹೆದರಿ ಅಪಾರ್ಟ್ಮೆಂಟ್ನ ಬಾತ್ರೂಮ್ ಕಿಟಕಿಯಿಂದ ಮಗುವನ್ನು ಎಸೆದು ಕೊಂದಿರುವ ಘಟನೆ ಪೂರ್ವ ದೆಹಲಿಯ ನ್ಯೂಅಶೋಕ್ ವಿಹಾರದಲ್ಲಿ ನಡೆದಿದೆ.
ನೋಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿ, ಸೋಮವಾರ ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಸಾಮಾಜಿಕ ಕಳಂಕಕ್ಕೆ (Social Stigma) ಹೆದರಿ ಮಗುವನ್ನು ತಾನು ವಾಸಿಸುತ್ತಿದ್ದ ಜೈ ಅಂಬೆ ಅಪಾರ್ಟ್ಮೆಂಟ್ನ ಬಾತ್ರೂಮ್ ಕಿಟಕಿಯಿಂದ ಎಸೆದು ಕೊಂದಿದ್ದಾಳೆ. ಇದೀಗ ಪೊಲೀಸರಿಗೆ (Police) ಸಿಕ್ಕಿಬಿದ್ದಿದ್ದಾಳೆ. ಇದನ್ನೂ ಓದಿ: ಮುದ್ದಿನ ಶ್ವಾನ ಹುಡುಕಿಕೊಡಿ- 10 ಸಾವಿರ ಬಹುಮಾನ ಘೋಷಿಸಿದ ಕುಟುಂಬ!
ಮಗು ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡು ಸ್ಥಳೀಯರು ನೋಯ್ಡಾದ ಮೆಟ್ರೋ ಆಸ್ಪತ್ರೆಗೆ (Metro Hospital) ಕರೆದೊಯ್ದರು, ಹೆಚ್ಚಿನ ಚಿಕಿತ್ಸೆಗಾಗಿ ಎಲ್ಬಿಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಷ್ಟರಲ್ಲಿ ಮಗು ಮೃತಪಟ್ಟಿದ್ದು. ನಂತರ ಶಿಶು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸ್ ಉಪ ಆಯುಕ್ತ (ಪೂರ್ವ) ಅಮೃತ ಗುಗುಲೋತ್, ರಕ್ತದ ಕಲೆಗಳ ಜಾಡು ಹಿಡಿದು ಆರೋಪಿ ಯುವತಿಯನ್ನ ಬಂಧಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ದಿಢೀರ್ ಉರುಳಿದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ – ತಾಯಿ, ಮಗು ದುರ್ಮರಣ
ಬಳಿಕ ತನಿಖೆಯಲ್ಲಿ ತಾನು ಅವಿವಾಹಿತೆ, ಸಾಮಾಜಿಕ ಕಳಂಕಕ್ಕೆ ಹೆದರಿ ಮಗುವನ್ನು ಬಾತ್ರೂಮಿನ ಕಿಟಕಿಯಿಂದ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆರೋಪಿ ಯುವತಿ ವಿರುದ್ಧ ಐಪಿಸಿ (IPC) ಸೆಕ್ಷನ್ 302 (ಕೊಲೆ), 201 ಅಪರಾಧದ ಸಾಕ್ಷಿಗಳನ್ನು ಮರೆಮಾಚುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವತಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪೊಲೀಸರು ಕಣ್ಗಾವಲು ಇರಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k