ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದ ಹಾಗೂ ದೀಪಕ್ ಮಧುವನಹಳ್ಳಿ ನಿರ್ದೇಶನದ `ಅನ್‌ಲಾಕ್ ರಾಘವ’ ಚಿತ್ರದ ಮೂಲಕ ಮಿಲಿಂದ್ (Milind) ನವ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.
ಈ ಚಿತ್ರದಲ್ಲಿ ನಟನೆ ಹಾಗೂ ನೃತ್ಯದ ಮೂಲಕ ಮಿಲಿಂದ್ ನಾಡಿನ ಜನರ ಮನ ಗೆದ್ದರು. ಅನ್‌ಲಾಕ್ ರಾಘವ (Unlock Raghava) ಚಿತ್ರ ನೋಡಿದ ಅಭಿಮಾನಿಗಳು ಕನ್ನಡಕ್ಕೆ ಮತ್ತೊಬ್ಬ ಸುರದ್ರೂಪಿ ನಟ ಸಿಕ್ಕ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದರು. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಹತ್ಯೆ
ವರಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ಮಿಲಿಂದ್, ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅನ್‌ಲಾಕ್ ರಾಘವ ಚಿತ್ರದ ನಂತರ ಸಾಕಷ್ಟು ಚಿತ್ರಗಳ ಕಥೆ ಕೇಳಿದೆ. ಅದರಲ್ಲಿ ನಾಲ್ಕು ಕಥೆಗಳು ಬಹಳ ಇಷ್ಟವಾಗಿದೆ. ಈ ನಾಲ್ಕು ಚಿತ್ರಗಳು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಾಗಿರುತ್ತದೆ. ನಾಲ್ಕು ಬೇರೆ ಬೇರೆ ನಿರ್ಮಾಣ ಸಂಸ್ಥೆಗಳು ನಿರ್ಮಿಸುತ್ತಿರುವ ಈ ಚಿತ್ರಗಳನ್ನು ನಾಲ್ಕು ಜನ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ ಹೊತ್ತಲ್ಲೇ ಸೀತಾ ಮಂದಿರಕ್ಕೆ ಪ್ಲ್ಯಾನ್ – 882 ಕೋಟಿಯ ದೇಗುಲಕ್ಕಿಂದು ಅಮಿತ್ ಶಾ ಶಂಕುಸ್ಥಾಪನೆ
ಈ ಚಿತ್ರಗಳ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇನೆ. ನನಗೆ ಮೊದಲಿನಿಂದಲೂ ತಾವು ನೀಡುತ್ತಿರುವ ಪ್ರೀತಿ ಹಾಗೂ ಸಹಕಾರ ಮುಂದೆಯೂ ಹೀಗೆ ಮುಂದುವರೆಯಲಿ ಎಂದು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಕನ್ನಡದ ಯುವ ನಟನೊಬ್ಬ ಒಟ್ಟಿಗೆ ನಾಲ್ಕು ಸಿನಿಮಾಗಳಿಗೆ ಸಹಿ ಮಾಡಿದ್ದು ವಿಶೇಷ. ಮಿಲಿಂದ್ ಈ ಕುರಿತು ತಾವು ಲಕ್ಕಿ ಬಾಯ್ ಅಂತಾನೇ ಕರೆದುಕೊಂಡಿದ್ದಾರೆ.