ಬೆಂಗಳೂರು: ನಗರದ ಖಾಸಗಿ ಹೊಟೇಲ್‍ನಲ್ಲಿ `ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಹೆಸರಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.
ರೈತರ ಸಾಲಮನ್ನಾ ಘೋಷಣೆ ಮಾಡಿರುವ ಪ್ರಣಾಳಿಕೆಯಲ್ಲಿ ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಹಲವು ವಲಯಗಳಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆ ಮುಖ್ಯಾಂಶಗಳು ಇಂತಿವೆ. ಇದನ್ನೂ ಓದಿ; ಬಿಜೆಪಿ ಪ್ರಣಾಳಿಕೆ ರಿಲೀಸ್: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಘೋಷಣೆ
Advertisement
ಬೆಂಗಳೂರಿಗೆ:
* ಬೆಂಗಳೂರಿಗರ ಅಗತ್ಯ ಪೂರೈಸಲು ನವ ಬೆಂಗಳೂರು ಕಾಯ್ದೆ ಹೊಸ ಕಾನೂನು
* ನಗರದ ಎಲ್ಲಾ ಭಾಗಕ್ಕೆ ಹಂತ ಹಂತವಾಗಿ ಮೆಟ್ರೋ ವಿಸ್ತರಣೆ
* ಉಪನಗರ ರೈಲ್ವೆ ಜಾಲ ಪೂರ್ಣಗೊಳಿಸಲು ಬಿ- ರೈಡ್ ಸ್ಥಾಪನೆ
* ಮಹಿಳೆಯರ ತೊಂದರೆಗೆ ಸ್ಪಂದಿಸಲು ಕಿತ್ತೂರು ರಾಣಿ ಚನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ರಚನೆ
* ಕೆಂಪೇಗೌಡ ನಿಧಿಯಡಿ ಕೆರೆ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕೆ 2500 ಕೋಟಿ ರೂ.
Advertisement
ರೈತರ ಕಲ್ಯಾಣ:
* ರೈತರ 1 ಲಕ್ಷದವರೆಗಿನ ಬೆಳ ಸಾಲ ಮನ್ನಾ
* ನೇಗಿಲಯೋಗಿ ಯೋಜನೆಯಡಿ 20 ಲಕ್ಷ ರೈತರಿಗೆ 10 ಸಾವಿರ ಆರ್ಥಿಕ ನೆರವು
* ರೈತಬಂಧು ಆವರ್ತ ನಿಧಿಯಡಿ ಬೆಂಬಲ ಬೆಲೆ ನೀಡಲು 5 ಸಾವಿರ ಕೋಟಿ ಮೀಸಲು
* ಸಿಎಂ ರೈತ ಸುರಕ್ಷಾ ವಿಮಾ ಯೋಜನೆಯಡಿ 2 ಲಕ್ಷ ರೂ.ಗಳ ರೆಗೆ ಉಚಿತ ಅಪಘಾತ ವಿಮೆ
* ನೀರಾವರಿ ಯೋಜನೆಗಳು 1.5 ಲಕ್ಷ ಕೋಟಿ ಮೀಸಲು
* ರೈತರ ಪಂಪ್ ಸೆಟ್ ಗೆ 10 ಗಂಟೆ ತ್ರೀ ಫೇಸ್ ವಿದ್ಯುತ್
* ರೈತ ಬಂಧು ವಿದ್ಯಾರ್ಥಿ ವೇತನದಡಿ 100 ಕೋಟಿ
* ಸಿಎಂ ಕೃಷಿ ಫೆಲೋಶಿಪ್ ಅಡಿ ಸಾವಿರ ರೈತರಿಗೆ ಇಸ್ರೇಲ್,ಚೀನಾ ಪ್ರವಾಸ
* ಗೋಹತ್ಯ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ 2012ಕ್ಕೆ ಮರುಚಾಲನೆ
* ರೈತ ಬಂಧು ಕಚೇರಿ ಸ್ಥಾಪನೆ
* ನೀರಾವರಿ ಯೋಜನೆ ಪೂರ್ಣಗೊಳಿಸಲು ಒಂದೂವರೆ ಲಕ್ಷ ಕೋಟಿ ಅನುದಾನ
* ರೈತರಿಗೆ ಚೀನಾ, ಇಸ್ರೇಲ್ ಪ್ರವಾಸ
Advertisement
ಮಹಿಳಾ ಸಬಲೀಕರಣ:
* ಸ್ತ್ರೀ ಉನ್ನತಿ ನಿಧಿಯಡಿ 10 ಸಾವಿರ ಕೋಟಿ ಮೀಸಲು
* ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರಿಗೆ ಶೇ.1 ರ ಬಡ್ಡಿದರದಲ್ಲಿ 2 ಲಕ್ಷ ಸಾಲ ಸೌಲಭ್ಯ
* ಹೈನುಗಾರಿಕೆ ಕ್ಷೇತ್ರದಲ್ಲಿ 100 ಕೋಟಿ
* ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಸಿಎಂ ಸ್ಮಾರ್ಟ್ ಫೋನ್ ಯೋಜನೆಯಡಿ ಉಚಿತ ಸ್ಮಾರ್ಟ್ ಫೋನ್ ನೀಡಿಕೆ
* ಸ್ತ್ರೀ ಸುವಿಧಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರು ವಿದ್ಯಾರ್ಥಿನಿಯರಿಗೆ ಉಚಿತ ಹಾಗು ಉಳಿದವರಿಗೆ 1 ರೂ.ಗೆ ಸ್ಯಾನಿಟರಿ ನ್ಯಾಪ್ ಕಿನ್ ನೀಡಿಕೆ
* ಭಾಗ್ಯಲಕ್ಷ್ಮೀ ಯೋಜನೆ ಮೊತ್ತ 3 ಲಕ್ಷಕ್ಕೆ ಹೆಚ್ಚಳ
* ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ 25 ಸಾವಿರ ನಗದು, 3 ಗ್ರಾಂ ಚಿನ್ನದ ತಾಳಿ
Advertisement
LIVE : BJP releases manifesto for Karnataka assembly elections 2018. #BJPVachana4Karnataka https://t.co/rGZW2yRiHc
— BJP (@BJP4India) May 4, 2018
ಯುವಜನತೆಗೆ:
ಸಿಎಂ ಲ್ಯಾಪ್ ಟಾಪ್ ಯೋಜನೆಯಡಿ ಕಾಲೇಜು ಸೇರುವ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ
ಎಲ್ಲರ ವಿಕಾಸ:
* 300 ಕ್ಕೂ ಹೆಚ್ಚು ಸಿಎಂ ಅನ್ನಪೂರ್ಣ ಕ್ಯಾಂಟೀನ್ ಆರಂಭ
* ಮದಕರಿ ನಾಯಕ ವಸತಿ ಯೋಜನೆಯಡಿ ಎಸ್ಟಿ ಸಮುದಾಯಗಳ ವಸತಿ ನಿರ್ಮಿಸಲು 6500 ಕೋಟಿ
* 8,500 ರೂ. ವೆಚ್ಚದಲ್ಲಿ ಮಾದಾರ ಚನ್ನಯ್ಯ ವಸತಿ ಯೋಜನೆಯಡಿ ಎಸ್ಸಿ ಸಮುದಾಯದವರಿಗೆ ಆಧುನಿಕ ಮನೆ ನಿರ್ಮಾಣ
* ನೇಕಾರರ 1 ಲಕ್ಷ ಸಾಲ ಮನ್ನಾ
* ಅಮರಶಿಲ್ಪಿ ಜಕಣಾಚಾರಿ ಜಯಂತಿ
ಬಿಜೆಪಿ ಪ್ರಣಾಳಿಕೆಯ ಪಿಡಿಎಫ್ ಕಾಪಿಯನ್ನು ಓದಲು ಕ್ಲಿಕ್ ಮಾಡಿ: BJP Karnataka 2018 Manifesto Kannada
ಶಿಕ್ಷಣ:
* ಶುಲ್ಕ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ
* 1300 ಕೋಟಿ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆ
* ಕುವೆಂಪು ಜ್ಞಾನ ಯೋಜನೆಯಡಿ 70 ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿ ತಮಾಣ ಹಾಗು ಇರುವ ಕಾಲೇಜು ಮೇಲ್ದರ್ಜೆಗೆ 3 ಸಾವಿರ ಕೋಟಿ
* ವೃತ್ತಿಪರ ಕೋರ್ಸ್ ಹೊರತುಪಡಿಸಿ ಎಲ್ಲರಿಗೂ ಪದವಿ ಮಟ್ಟದವರೆಗೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ
ಕನ್ನಡಿಗರ ಆಸೆ ಆಕಾಂಕ್ಷೆಗಳ ಈಡೇರಿಕೆಗೆ @BJP4Karnataka ಬದ್ದವಾಗಿದ್ದು ಮುಂದಿನ ಮುಖ್ಯಮಂತ್ರಿ ಶ್ರೀ @BSYBJP ರವರ ನೇತೃತ್ವದಲ್ಲಿ ನಾವೆಲ್ಲರೂ ಹಗಲಿರುಳು ದುಡಿಯುತ್ತೇವೆ.#BJPVachana4Karnataka pic.twitter.com/FxPthsHsna
— C T Ravi ???????? ಸಿ ಟಿ ರವಿ (@CTRavi_BJP) May 4, 2018
ಆರೋಗ್ಯ:
* ದೆಹಲಿಯ ಏಮ್ಸ್ ಮಾದರಿ ಎರಡು ಕರ್ನಾಟಕ ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆ
* ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಕೇಂದ್ರ ಸ್ಥಾಪನೆ
* ಆಯುಷ್ಮಾನ್ ಕರ್ನಾಟಕ ಯೋಜನೆಯಡಿ ಬಡ ದುರ್ಬಲರ ಚಿಕಿತ್ಸೆಗೆ 5 ಲಕ್ಷ ವಿಮೆ
* ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಗುರಿ
ಮೂಲಸೌಕರ್ಯ:
* ಸೌಭಾಗ್ಯ ಯೋಜನೆಯಡಿ ಮನೆಗಳಿಗೆ ದಿನವಿಡೀ ವಿದ್ಯುತ್
* 20 ಸಾವಿರ ಮೆಗಾವ್ಯಾಟ್ ಗೆ ವಿದ್ಯುತ್ ಉತ್ಪಾದನಾ ಸಾಮಥ್ರ್ಯ ಹೆಚ್ಚಳ, ಸೌರಶಕ್ತಿ 4 ಸಾವಿರ ಹೆಚ್ಚುವರಿ ಉತ್ಪಾದನೆ ಕ್ರಮ
* ಎಲ್ಲಾ ಜಿಲ್ಲೆ ಸಂಪರ್ಕಿಸುವ ಷಟ್ಪಥ ಯೋಜನೆ ಕರ್ನಾಟಕ ಮಾಲಾ ಹೆದ್ದಾರಿ ಯೋಜನೆಯಡಿ ಅನುಷ್ಠಾನ
* 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳಿಗೆ ಕೊಳವೆ ಮೂಲಕ ಅನಿಲ ಪೂರೈಕೆ ಸೌಕರ್ಯ
* ಇಂದಿರಾ ಕ್ಯಾಂಟೀನ್ ಬದಲು ಅನ್ನಪೂರ್ಣ ಕ್ಯಾಂಟೀನ್
* ಜಿಲ್ಲೆಗೆ ಮೂರು, ತಾಲೂಕಿಗೆ ಒಂದು ಕ್ಯಾಂಟೀನ್
ಕಾರ್ಯಕ್ರಮಕ್ಕೂ ಮೊದಲು ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸುರೇಶ್ ಕುಮಾರ್, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದ ಪಿ.ಸಿ ಮೋಹನ್ ಮತ್ತಿರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
'ನಮ್ಮ ಕರ್ನಾಟಕಕ್ಕೆ ನಮ್ಮ ವಚನ'
ರೈತರ ಕಲ್ಯಾಣ ರಾಜ್ಯದ ಕಲ್ಯಾಣ.#BJPVachana4Karnataka pic.twitter.com/PSwGfaW3eX
— B.S.Yediyurappa (@BSYBJP) May 4, 2018