ಧಾರವಾಡ: ಹುಬ್ಬಳ್ಳಿಯ (Hubballi) ವಿವಿಧ ಮಸೀದಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಹೇಳಿದ್ದಾರೆ.
ಹುಬ್ಬಳ್ಳಿಯ ವಿವಿಧ ಮಸೀದಿಗಳಲ್ಲಿ (Mosque) ಇರುವವರು ನಮ್ಮ ದೇಶದ ವ್ಯಕ್ತಿಗಳಂತೆ ಕಾಣುತ್ತಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಮುಸ್ಲಿಂ ಮುಖಂಡರೇ ನನ್ನ ಬಳಿ ಹೇಳಿ ಏನಾದರೂ ಆಗಬಹುದು ಎಂಬ ಅಂತಂಕವನ್ನು ಹೊರಹಾಕಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮ್ಯಾನೇಜರ್ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ
ಈ ಬಗ್ಗೆ ಗೃಹ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹುಬ್ಬಳ್ಳಿ ಬಹಳಷ್ಟು ಸೂಕ್ಷ್ಮ ಪ್ರದೇಶದ ಮುಂದೆ ಏನಾದರೂ ಅನಾಹುತ ಆದರೆ ಅದಕ್ಕೆ ಗೃಹ ಇಲಾಖೆಯೇ ಕಾರಣ ಎಂದರು.
ಇಲ್ಲಿನ ಅಧಿಕಾರಿಗಳು ಅತ್ಯುತ್ತಮ ಕಾರ್ಯ ಮಾಡತ್ತಾರೆ.ಆದರೆ ಸರ್ಕಾರ ಅವರ ಕೈ ಕಟ್ಟಿಹಾಕಿದ್ದಾರೆ ಅಂತ ಶಾಸಕ ಮಹೇಶ್ ಟೆಂಗಿನಕಾಯಿ ಸಹ ಬೆಲ್ಲದ ಆರೋಪಕ್ಕೆ ಧ್ವನಿಗೂಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ನಿಂದ ದಾಳಿ – ಅಮೃತಸರದ ಗೋಲ್ಡನ್ ಟೆಂಪಲ್ ರಕ್ಷಿಸಿದ್ದ ಆಕಾಶ್ ಮಿಸೈಲ್!