Connect with us

Districts

ಆಸ್ಪತ್ರೆಯ ಹಾಸಿಗೆ ಮೇಲೆಯೇ ಕೊಳೆತು ವಾಸನೆ ಬಂದ ಅಜ್ಜಿಯ ಶವ- ಲಿಂಗಸಗೂರು ತಾಲೂಕಾಸ್ಪತ್ರೆಯಲ್ಲಿ ಘನಘೋರ ಘಟನೆ

Published

on

ರಾಯಚೂರು: ಇಲ್ಲಿನ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಅಪರಿಚಿತ ಅಜ್ಜಿಯೊಬ್ಬರ ಶವ ಗಬ್ಬು ನಾರುತ್ತಿದ್ದರೂ ಶುಕ್ರವಾರದಿಂದ ಹಾಸಿಗೆ ಮೇಲೆಯೇ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

75 ವರ್ಷದ ವೃದ್ಧೆ 15 ದಿನಗಳ ಹಿಂದೆ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಾವನಪ್ಪಿದ್ದಾರೆ. ಅಜ್ಜಿಯ ಸಾವನ್ನು ವೈದ್ಯರು ದೃಢಪಡಿಸಿದ್ದು, ಪೊಲೀಸರು ಪಂಚನಾಮೆಯನ್ನೂ ಮಾಡಿದ್ದಾರೆ.

 

ಇಷ್ಟಾದರೂ ಶವವನ್ನು ವಾರ್ಡ್‍ನಿಂದ ಸಾಗಿಸದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಕೆಟ್ಟ ವಾಸನೆ ತಡೆಯಲಾಗದೆ ಉಳಿದ ರೋಗಿಗಳು ಕೊಠಡಿ ಹೊರಗೆ ಮಲಗಿದ್ದಾರೆ. ಕೆಲ ರೋಗಿಗಳಿಗೆ ಶವದ ವಾಸನೆಯಿಂದ ವಾಂತಿಯಾಗಿದೆ. ತಾಲೂಕಾಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಶವ ಆಸ್ಪತ್ರೆ ಹಾಸಿಗೆ ಮೇಲೆ ಕೊಳೆಯುತ್ತಿದೆ.

ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ರೋಗಿಗಳು ಕಿಡಿಕಾರುತ್ತಿದ್ದಾರೆ.

https://www.youtube.com/watch?v=FNfJ7g11seg

Click to comment

Leave a Reply

Your email address will not be published. Required fields are marked *