ಕೊಲಂಬೋ: ಆಕಸ್ಮಿಕವಾಗಿ ಚರಂಡಿಯಲ್ಲಿ 100 ರೂ. ಬೀಳಿಸಿದ ಬಾಲಕನಿಗೆ ಅಪರಿಚಿತ ವ್ಯಕ್ತಿಯೊಬ್ಬರು ಸಹಾಯ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಶ್ರೀಲಂಕಾದಲ್ಲಿ ಸೆರೆ ಹಿಡಿಯಲಾಗಿದೆ. ವಿಡಿಯೋದಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ 100 ರೂ. ಚರಂಡಿಯಲ್ಲಿ ಬೀಳಿಸಿದ್ದನು. ಅಲ್ಲದೆ ಅದನ್ನು ತೆಗೆಯಲು ತುಂಬಾ ಪ್ರಯತ್ನ ಮಾಡುತ್ತಾನೆ. ಆದರೆ ಹಣವನ್ನು ತೆಗೆಯಲು ಆಗಲಿಲ್ಲ. ಬಳಿಕ ಬೇಸರದಿಂದ ಬಾಲಕ ಅಲ್ಲಿಂದ ಹೊರಟು ಹೋಗಿದ್ದಾನೆ.
Advertisement
This happened right in front of my store today. The kid who comes with Cricket Kit Bag mistakenly dropped his Rs 100 in to the drain and tried to take it back, but he failed and walked away. The guy who came in two wheeler saw it and gave Rs 100 to that kid from his pocket. ???????? ???? pic.twitter.com/8Os0UIEorO
— Nibraz Ramzan (@nibraz88cricket) December 7, 2019
Advertisement
ಇದನ್ನು ಗಮನಿಸಿದ ಬೈಕ್ ಸವಾರರೊಬ್ಬರು ಬಾಲಕನ ಬಳಿ ಹೋಗಿ ತಮ್ಮ ಬಳಿಯಿದ್ದ 100 ರೂ. ಅನ್ನು ಕೊಟ್ಟು ಅಲ್ಲಿಂದ ಹೊರಟು ಹೋಗುತ್ತಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ಬೈಕ್ ಸವಾರನಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
ನಿಬ್ರಾಜ್ ರಂಜಾನ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಇದುವರೆಗೂ 14 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 3 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ವ್ಯಕ್ತಿಗೆ, ‘ಹೀರೋ’, ‘ನಿಮಗೆ ಸೆಲ್ಯೂಟ್’ ಎಂದು ಹೊಗಳುವ ಮೂಲಕ ರೀ-ಟ್ವೀಟ್ ಮಾಡಿದ್ದಾರೆ.
Advertisement
The guy is a true real hero…..salute him …..????????????
— Anup kohar (@AnoopKohar) December 8, 2019