ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಅವರನ್ನು ಸಾಕಷ್ಟು ಜನ ಸೂಪರ್ ಕಾಪ್, ಸಿಂಗಂ ಎಂದು ಕರೆಯುತ್ತಾರೆ. ಅವರು ಕೂಡ ದಕ್ಷ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಬಗ್ಗೆ ಗೊತ್ತಿರದ ವಿಷಯಗಳ ಮಾಹಿತಿ ಇಲ್ಲಿದೇ;
1. ಸಿವಿಲ್ ಡ್ರೆಸ್‍ನಲ್ಲಿ ಕಳ್ಳರನ್ನು ಹಿಡಿದುಕೊಂಡು ಬರುವಾಗ ಕಾರಿಗೆ ಕಾರು ಟಚ್ ಆಯಿತ್ತೆಂದು ಗ್ರಾಮಾಂತರ ಪಿಎಸ್‍ಐ ಮೇಲೆ ಕೆಲ ಯುವಕರು ಹಲ್ಲೆ ಮಾಡಿದ್ದರು. ಯುವಕರು ಪಿಎಸ್‍ಐಗೆ ಕಾಲಿನಿಂದ ಒದ್ದು ಬಟ್ಟೆ ಹರಿದಿದ್ದರು. ನಂತರ ಸ್ಥಳಕ್ಕೆ ಬಂದ ಎಸ್‍ಪಿ ಅಣ್ಣಾಮಲೈ ಪೊಲೀಸ್ ಮೇಲೆ ಹಲ್ಲೆ ಮಾಡಿದ ಯುವಕರ ವಿರುದ್ಧ ಫುಲ್ ಗರಂ ಆಗಿದ್ದರು. ಅಲ್ಲದೇ ಸ್ಥಳೀಯರು ರಸ್ತೆ ಬಂದ್ ಮಾಡಿದ್ದರೆಂದು ಫುಲ್ ರೆಬಲ್ ಆಗಿದ್ದರು. ನಿಮಗೆ ಟಿಪಿಕಲ್ ಪೊಲೀಸ್ ಪವರ್ ತೋರಿಸಬೇಕಾ. ರೇಷನ್ ಕಾರ್ಡ್ ಸಿಗದಂತೆ ಮಾಡ್ತೇನೆ, ಕೈ-ಕಾಲು ರಿಮೂವ್ ಮಾಡ್ತೇನೆಂದು ಫುಲ್ ಆವಾಜ್ ಹಾಕಿದ್ದರು. ಅಲ್ಲದೇ ನನ್ನ ಮೇಲೆ ಗೌರವ ಇದ್ದಿದ್ದೆ ಆಫೀಸ್‍ಗೆ ಬರಬೇಕಿತ್ತು. ರೋಡ್ ಬಂದ್ ಮಾಡಿದ್ಯಾಕೆಂದು ಸ್ಥಳೀಯರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು.
Advertisement
Advertisement
2. ದತ್ತ ಜಯಂತಿ ವೇಳೆ ದತ್ತಪೀಠದಲ್ಲಿ ಗಲಾಟೆಯಾಗಿ ಗೋರಿಗಳು ನಾಶವಾಗಿತ್ತು. ಪೊಲೀಸ್ ವೈಫಲ್ಯ ಎಂದು ಸ್ಥಳೀಯರು ಎಸ್‍ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಗೋರಿಗಳಿಗೆ ಏನಾದರೂ ಆದರೆ ಸರಿ ಮಾಡಬಹುದು. ನನ್ನ ಪೊಲೀಸರಿಗೆ ಏನಾದರೂ ಆದರೆ ಜವಾಬ್ದಾರಿ ಯಾರು? ಅವರ ಮನೆಯವರಿಗೆ ಉತ್ತರ ಏನ್ ಹೇಳೋದು ಎಂದು ಪೊಲೀಸರ ಪರ ಅಣ್ಣಾಮಲೈ ನಿಂತರು. ಇದರಿಂದ ಪೊಲೀಸರಿಗೆ ಅಣ್ಣಾಮಲೈ ಮೇಲಿನ ಗೌರವ ಹೆಚ್ಚಾಯಿತು.
Advertisement
Advertisement
3. ತಂದೆ- ತಾಯಿ ಇಲ್ಲದ ಮಹಿಳಾ ಪೇದೆಯೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರ ತನ್ನ ತಮ್ಮ-ತಂಗಿಯನ್ನು ನಾನು ನೋಡಿಕೊಳ್ಳುವುದಿಲ್ಲ ಎಂದಾಗ, ಅಣ್ಣನ ಸ್ಥಾನದಲ್ಲಿ ನಿಂತು ಅಣ್ಣಾಮಲೈ ಆ ಹೆಣ್ಣು ಮಗುವಿನ ಜವಾಬ್ದಾರಿ ಹೊತ್ತರು. ಸದ್ಯ ಆಕೆಯ ಓದಿನ ಖರ್ಚನ್ನು ಅಣ್ಣಾಮಲೈ ಭರಿಸುತ್ತಿದ್ದಾರೆ.
4. ಭಾರೀ ಮಳೆಯಿಂದ ಚಾರ್ಮಾಡಿ ಫುಲ್ ಬಂದ್ ಆದಾಗ ಸ್ಥಳಕ್ಕೆ ಬಂದ ಎಸ್‍ಪಿ ಅಣ್ಣಾಮಲೈ ಮೊಣಕಾಲುದ್ದದ ಕೆಸರಿನಲ್ಲಿ, ಮಳೆಯಲ್ಲಿ ಸಂಪೂರ್ಣ ನೆನೆದು ಮರದ ಟೊಂಗೆ, ಕೊಂಬೆಗಳನ್ನು ಎತ್ತಿ ಹಾಕಿ ಟ್ರಾಫಿಕ್ ಕ್ಲಿಯರ್ ಮಾಡಿದರು.
5. ಗಣಪತಿ ವಿಸರ್ಜನೆ ವೇಳೆ, ಲಾಠಿ ಚಾರ್ಜ್ ಆಗಿ ಪೇದೆಗಳು ಆಸ್ಪತ್ರೆಯಲ್ಲಿ ಮಲಗಿದ್ದಾಗ, ರಾತ್ರಿ 11 ಗಂಟೆಗೆ ಸ್ಟೇಷನ್‍ಗೆ ಬಂದು ಮಾಹಿತಿ ಪಡೆದು ಆಸ್ಪತ್ರೆಗೆ ಹೋಗಿ ತನ್ನ ಸಿಬ್ಬಂದಿಗಳ ಯೋಗ ಕ್ಷೇಮ ವಿಚಾರಿಸಿ, ವೈದ್ಯರಂತೆ ತಮ್ಮ ಮೊಬೈಲ್ ಟಾರ್ಚ್ ನಿಂದ ಪೇದೆಗಳ ಕಿವಿಯೊಳಗೆ ಬೆಳಕು ಬಿಟ್ಟು ಚೆಕ್ ಮಾಡಿ ಅವರಿಗೆ ಧೈರ್ಯ ಹೇಳಿದರು.
6. ಕೊಪ್ಪದಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಎಸ್‍ಪಿ ಅಣ್ಣಾಮಲೈ ರಸ್ತೆಯಲ್ಲಿ ಪ್ರವಾಸಿಗರ ಕಾರಿನ ಟೈರ್ ಪಂಚರ್ ಆಗಿತ್ತೆಂದು, ಮೊಬೈಲ್ ಟಾರ್ಚ್‍ನಲ್ಲಿ ಬೇರೆ ಟೈರ್ ಹಾಕಿಕೊಟ್ಟಿದ್ದರು. ಮತ್ತೊಂದು ಗಾಡಿ ಕೆಟ್ಟಿದ್ದು ಅದನ್ನೂ ಸರಿ ಮಾಡಿಕೊಟ್ಟಿದ್ದರು.
7. 5 ತಿಂಗಳಲ್ಲಿ 5 ಕೆ.ಜಿ ತೂಕ ಇಳಿಸಿ ನಿಮಗೆ ಕೇಳಿದ ಕಡೆ ಟ್ರಾನ್ಸ್ ಫರ್ ಕೊಡುತ್ತೇನೆಂದು ಪೊಲೀಸರಿಗೆ ಆಫರ್ ನೀಡಿದರು. ಜಿಲ್ಲೆಯ 28 ಠಾಣೆಗಳಲ್ಲಿ 34 ಜನ ಹೆಸರು ನೊಂದಾಯಿಸಿದ್ದರು. ಕೊನೆಗೆ 23 ಜನ ಐದು ತಿಂಗಳಲ್ಲಿ ಐದು ಕೆ.ಜಿ. ತೂಕ ಇಳಿಸಿ. ಬೇಕಾದ ಕಡೆ ಟ್ರಾನ್ಸ್ ಫರ್ ತೆಗೆದುಕೊಂಡರು. ಎಸ್‍ಪಿ ಕೂಡ 23 ಜನರಿಗೂ ವರ್ಗಾವಣೆ ಮಾಡಿ ನಾನು ಮಾತು ತಪ್ಪದ ಮಗ ಎಂದು ಹೇಳಿದರು.
ಸದ್ಯ ಎಸ್‍ಪಿ ಅಣ್ಣಮಲೈ ಅವರನ್ನು ಈಗಾಗಲೇ ಬೆಂಗಳೂರಿನ ಸೌತ್ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ರಿಯಲ್ ಎಸ್ಟೇಟ್ ದಂಧೆ ಮತ್ತು ಭೂ ಮಾಫಿಯಾದವರನ್ನು ಟಾರ್ಗೆಟ್ ಮಾಡಿರುವ ಸಿಎಂ ಕುಮಾರಸ್ವಾಮಿ, ಅದಕ್ಕೆ ಅಂತಾನೇ ಅಣ್ಣಮಲೈ ರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಪ್ರಮುಖವಾಗಿ ನಗರದ ರೌಡಿಸಂ ಮಾಡಿ, ಬಡ ಬಗ್ಗರ ಆಸ್ತಿ ಕಬಳಿಸಿ ರಿಯಲ್ ಎಸ್ಟೇಟ್ ದಂಧೆ ಮತ್ತು ಭೂ ಮಾಫಿಯಾ ನಡೆಸುತ್ತಿರುವ ಮೇಲೆ ದಾಳಿ ನಡೆಸಲು ಅಣ್ಣಮಲೈ ನೇತೃತ್ವದಲ್ಲಿ ವಿಶೇಷ ವಿಂಗ್ ಮಾಡಲು ತಯಾರಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv