ಮೈಸೂರು: ಪೊಲೀಸರ ಎಚ್ಚರಿಕೆ ಬಳಿಕವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕಿಕಿ ಚಾಲೆಂಜ್ ಸ್ವೀಕರಿಸಿ ಡಾನ್ಸ್ ಮಾಡಿದ್ದ ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ತಾವು ಗೊತ್ತಿಲ್ಲದೆ ವಿಡಿಯೋ ಮಾಡಿದ್ದಾಗಿ ಹೇಳಿದ್ದಾರೆ.
ಕಿಕಿ ಚಾಲೆಂಜ್ ಸ್ವೀಕರಿಸಿ ಡಾನ್ಸ್ ಮಾಡಿದ್ದ ವಿರುದ್ಧ ದೂರು ದಾಖಲಾಗಿರುವ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ನಿವೇದಿತಾ ಗೌಡ, ನನಗೆ ತಿಳಿಯದೆ ನಾನು ತಪ್ಪು ಮಾಡಿದೆ. ಈ ಬಗ್ಗೆ ನನಗೆ ಗೊತ್ತಿದ್ದರೆ ನಾನು ಖಂಡಿತವಾಗಿಯೂ ಮಾಡುತ್ತಿರಲಿಲ್ಲ. ಆದರೆ ಈ ಬಗ್ಗೆ ದೂರು ದಾಖಲಾಗಿರುವ ಕುರಿತು ನನ್ನ ಗಮನಕ್ಕ ಬಂದಿಲ್ಲ. ದೂರು ನೀಡಿದವರು ನನ್ನನ್ನು ಸಂಪರ್ಕಿಸಿದ್ದರೆ ನಾನು ತಕ್ಷಣವೇ ವಿಡಿಯೋ ಡಿಲೀಟ್ ಮಾಡುತ್ತಿದ್ದೆ ಎಂದರು.
Advertisement
ಇದೇ ವೇಳೆ ದೂರು ನೀಡಿರುವುದು ನನ್ನ ಮೇಲಿನ ಕಾಳಜಿಯಿಂದ ಎಂದ ಅವರು, ವಿಡಿಯೋ ಮಾಡುವ ಮುನ್ನವೂ ತಾನು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಗೊತ್ತಿಲ್ಲದೆ ಮಾಡಿದ ತಪ್ಪಿಗೆ ನಾನು ಯಾವ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ. ನನ್ನಿಂದ ಯಾರು ಪ್ರೇರೇಪಿತರಾಗಬಾರದು. ಇದು ಒಳ್ಳೆಯದಲ್ಲ ಎಂದು ಗೊತ್ತಾಗಿದೆ. ಇದು ಗೊತ್ತಾದ ಬಳಿಕ ತಕ್ಷಣ ನಾನು ವಿಡಿಯೋ ಡಿಲೀಟ್ ಮಾಡಿದ್ದೇನೆ. ಉದ್ದೇಶ ಪೂರ್ವಕವಾಗಿ ನಾನು ಈ ರೀತಿ ಮಾಡಿಲ್ಲ. ನೀವು ಇದನ್ನು ಯಾರು ಪ್ರಯತ್ನ ಮಾಡಬೇಡಿ ಎಂದರು.
Advertisement
BCP's Kiki:
If you dance for #KikiChallenge on the roads,
We’re sure of making you dance behind the bars!!
“Kiki Challenge may get you a KICK OF LAW not KICK OF DANCE“
ಕಿ..ಕಿ.. ಡ್ಯಾನ್ಸ್ ರೋಡಲ್ಲಿ,
ಖಾಕಿ ಸಾಂಗ್ಸ್ ಜೈಲಲ್ಲಿ..!!#InMyFeelings or #InOurJail #KikiChallenge pic.twitter.com/xVXN46YCsk
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) August 1, 2018
Advertisement
ಅಪಾಯಕಾರಿ ಕಿಕಿ ಡ್ಯಾನ್ಸ್ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟದ ನಾಗೇಶ್ ಅವರು ಇಂದು ನಿವೇದಿತಾ ಗೌಡ ಅವರ ವಿರುದ್ಧ ಕ್ರಮ ಕೈಗೂಳ್ಳುವಂತೆ ಆಗ್ರಹಿಸಿದ್ದರು. ಈ ಕುರಿತು ನಗರದ ಬೆಂಗಳೂರಿನ ಹಲಸೂರು ಗೇಟ್ ಪೂಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
ಚಲಿಸುತ್ತಿರುವ ಕಾರಿನಲ್ಲಿ ಡ್ಯಾನ್ಸ್ ಮಾಡುವ ಚಾಲೆಂಜ್‍ನ್ನು ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಸ್ವೀಕರಿಸಿದ್ದರು. ಕಾರು ಚಲಿಸುತಿದ್ದಾಗ ಅದೇ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕೋದು ಸದ್ಯದ ಟ್ರೆಂಡ್ ಆಗಿದ್ದು, ವಿದೇಶದಲ್ಲಿ ಭಾರೀ ಪ್ರಮಾಣದಲ್ಲಿ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಈ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದ್ದು, ಬಿಟೌನ್ ತಾರೆಯರು ಚಾಲೆಂಜ್ ಸ್ವೀಕರಿಸಿದ್ದರು. ಬಳಿಕ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. ಈ ವೇಳೆಯೇ ಸಾಮಾಜಿಕ ಜಾಲತಾಣದಲ್ಲಿ ನಿವೇದಿತಾ ಡ್ಯಾನ್ಸ್ ಗೆ ಪರ/ವಿರೋಧ ಕಮೆಂಟ್ ಕೂಡ ಬಂದಿತ್ತು. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಶುರುವಾಯ್ತು ಕಿಕಿ ಚಾಲೆಂಜ್ ಭಯ- ಏನಿದು ಕಿಕಿ ಚಾಲೆಂಜ್?
We not only oppose but also warn all who are thinking of attempting that they will be subject to legal action https://t.co/QGo8yb4jIb
— Kala Krishnaswamy, IPS DCP Traffic East (@DCPTrEastBCP) July 30, 2018
ಇದೊಂದು ಅಪಾಯಕಾರಿ ಚಾಲೆಂಜ್ ಆಗಿದ್ದು, ಎಷ್ಟೋ ಮಂದಿ ಈ ಸಾಹಸ ಮಾಡೋದಕ್ಕೆ ಹೋಗಿ ಗಾಯ ಮಾಡಿಕೊಂಡಿದ್ದಾರೆ. ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಬರಬಹುದು ಅಂತಾ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ಅಪಾಯಕಾರಿ ಈ ರೀತಿ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದರು. ಕಿಕಿ ಚಾಲೆಂಜ್ ನಿಮ್ಮ ಬಾಡಿಗೂ ಗಾಡಿಗೂ ಅಪಾಯಕಾರಿ ಅಂತಾ ಜಾಗೃತಿ ನಡೆಸಿದರು. ಜೊತೆಗೆ ಕಿಕಿ ಚಾಲೆಂಜ್‍ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಕೂಡ ಆಡುಗೋಡಿ ಟ್ರಾಫಿಕ್ ಪೊಲೀಸರು ಅಪ್ಲೋಡ್ ಮಾಡಿದ್ದರು.
We strongly opose the #kikichallenge as it puts the life of the performer and others on the road at risk, including vehicle damage.@blrcitytraffic @AddlCPTraffic @DCPTrEastBCP @AcpSe @BlrCityPolice @HMLokesh https://t.co/1RWqOqUbxh
— ADUGODI TRAFFIC BTP (@adugoditrfps) July 29, 2018
We have nothing against social media fads as long as they don't become a public nuisance and put the lives of people at risk. Don't take up challenges on roads, which can harm you as well as others. Parents should sensitize their children about these dangers & keep a close watch https://t.co/KZn9Pi3E84
— Dr. G Parameshwara (@DrParameshwara) August 1, 2018
https://www.youtube.com/watch?v=8eDif1YbYmI