ಮೈಸೂರು: ವಿವಿಧ ಕೋರ್ಸ್ ಗಳ ಎರಡು ಪಟ್ಟು ಅವಧಿ ಮುಗಿದ ನಂತರವೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೊನೆಯ ಸುವರ್ಣ ಅವಕಾಶವನ್ನು ಮೈಸೂರು ವಿಶ್ವವಿದ್ಯಾನಿಲಯ ಒದಗಿಸಿದೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಹಳೆಯ ನಿಯಮದ ಪ್ರಕಾರ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಆದರೆ ವಿವಿಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ನಿಯಮವನ್ನು ಈಗ ಸಡಿಲಿಕೆ ಮಾಡಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಕಡೆ ಅವಕಾಶ ನೀಡಲಾಗಿದೆ.
Advertisement
ಬಿಇಡಿ, ಕಾನೂನು ಪದವಿಯ ಆರ್.ಆರ್, ಸಿಎಸ್‍ಎಸ್, ಐಎಸ್‍ಎಸ್ ಸ್ಕೀಂ ಸೇರಿದಂತೆ ವಾರ್ಷಿಕ ಹಾಗೂ ಸೆಮಿಸ್ಟರ್ ಪದ್ಧತಿಯ ಎಲ್ಲಾ ಕೋರ್ಸ್ ಗಳ, ಡಿಪ್ಲೋಮಾ ಸ್ನಾತಕೋತ್ತರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯಕ್ರಮದಲ್ಲೇ ಪರೀಕ್ಷೆ ಬರೆಯಲು ಕಡೆಯ ಅವಕಾಶ ನೀಡಲಾಗಿದೆ ಎಂದು ವಿವಿಯ ಉಪ ಕುಲಸಚಿವರು ತಿಳಿಸಿದ್ದಾರೆ.