ಇಂಗ್ಲೆಂಡ್: ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೊಟ್ಟೆ ನೋವು ಎಂದು ಶೌಚಾಲಯಕ್ಕೆ ತೆರಳಿದ್ದಾಗ ಮಗುವಿಗೆ ಜನ್ಮ ನೀಡಿ ಶಾಕ್ ಆಗಿದ್ದಾಳೆ.
Advertisement
ಮಗುವಿಗೆ ಜನ್ಮ ನೀಡಿದ 20 ವರ್ಷದ ಯುವತಿ ಜೆಸ್ ಡೇವಿಸ್. ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೊಂದಿರಬೇಕಾದ ಯಾವುದೇ ಲಕ್ಷಣಗಳನ್ನು ಯುವತಿ ಹೊಂದಿರಲಿಲ್ಲ. ಮುಟ್ಟಿನ ಕಾರಣದಿಂದ ತನಗೆ ಹೊಟ್ಟೆ ನೋವು ಬಂದಿರಬಹುದು ಅಂದುಕೊಂಡಿದ್ದಳು. ಅಲ್ಲದೇ ಯುವತಿಗೆ ಬೇಬಿ ಬಂಪ್ ಕೂಡ ಇರಲಿಲ್ಲ. ಆದರೆ ಸೌತಾಂಪ್ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶೌಚಾಲಯದಲ್ಲಿ ಕುಳಿತಿರುವಾಗ ಗಂಡು ಮಗುವಿಗೆ ಜನ್ಮ ನೀಡಿ ದಿಗ್ಭ್ರಮೆಗೊಂಡಿದ್ದಾಳೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಸ್ ಡೇವಿಸ್, ನಾನು ಸರಿಯಾದ ಸಮಯಕ್ಕೆ ಮುಟ್ಟು ಆಗುತ್ತಿರಲಿಲ್ಲ. ಆದ್ದರಿಂದ ನಾನು ಈ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ. ಕೆಲವೊಮ್ಮ ನನಗೆ ವಾಕರಿಕೆಯ ಅನುಭವವಾಗುತ್ತಿತ್ತು. ಇದಕ್ಕಾಗಿ ಮೆಡಿಸಿನ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದೆ. ಆದರೆ ಈಗ ಮಗು ಜನಿಸಿರುವುದನ್ನು ನೋಡಿ ನನಗೆ ದೊಡ್ಡ ಶಾಕ್ ಆಗಿದೆ. ಮೊದಲಿಗೆ ಮಗು ಜನಿಸಿದಾಗ ಇದು ಒಂದು ರೀತಿ ಕನಸು ಎಂದು ಅನಿಸಿತು. ಈ ಶಾಕ್‍ನಿಂದ ಹೊರಬರಲು ಮತ್ತು ಮಗುವಿನೊಂದಿಗೆ ಹೊಂದಿಕೊಳ್ಳಲು ನನಗೆ ಕೊಂಚ ಸಮಯಬೇಕಾಯಿತು. ಆದರೀಗ ನಾನು ಚಂದ್ರ ಲೋಕದಲ್ಲಿ, ಕೂಲ್ ಆಗಿರುವ ಮಗುವಿನೊಂದಿಗೆ ಶಾಂತವಾಗಿದ್ದೇನೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.