ರಾಯಚೂರು: ಜಿಲ್ಲೆಯ ಕೃಷಿ ವಿಜ್ಞಾನಗಳ ವಿವಿ 11 ನೇ ಘಟಿಕೋತ್ಸವ ವಿಶ್ವ ವಿದ್ಯಾಲಯದ(ವಿವಿ) ಪ್ರೇಕ್ಷಾಗೃಹದಲ್ಲಿ ನಡೆಯಿತು. ರಾಜ್ಯಪಾಲರು ಹಾಗೂ ವಿವಿ ಕುಲಾಪತಿ ಡಾ.ಥಾವರಚಂದ್ ಗೆಹ್ಲೋಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿಗಳನ್ನ ಪ್ರದಾನ ಮಾಡಿದರು.
Advertisement
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾನಿರ್ದೇಶಕ ಡಾ.ಎ.ಕೆ.ಸಿಂಗ್ ಘಟಿಕೋತ್ಸವ ಭಾಷಣ ಮಾಡಿದರು. ಘಟಿಕೋತ್ಸವದಲ್ಲಿ ಕೃಷಿ ಬಿಎಸ್‍ಇ ಪದವಿಯಲ್ಲಿ ಗೀತಿಕಾ ಟಿ.ವಿ ಆರು ಚಿನ್ನದ ಪದಕ ಪಡೆದರು. ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಬಿಟೆಕ್‍ನಲ್ಲಿ ಕೇಸರಿ ಸುಂದರ್ ವರ್ಮಾ ಐದು ಚಿನ್ನದ ಪದಕ ಹಾಗೂ ಎರಡು ನಗದು ಬಹುಮಾನ ಪಡೆದರು. ಇದನ್ನೂ ಓದಿ: ಮನ್ ಕಿ ಬಾತ್: ಕೋವಿಡ್ ಇನ್ನೂ ಹೋಗಿಲ್ಲ- ದೇಶದ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ
Advertisement
ಉಳಿದಂತೆ ಒಟ್ಟು 303 ಸ್ನಾತಕ, 107 ಸ್ನಾತಕೋತ್ತರ, 26 ಡಾಕ್ಟರೇಟ್ ಪದವಿಗಳನ್ನ ಹಾಗೂ 45 ಚಿನ್ನದ ಪದಕಗಳನ್ನ ಪ್ರದಾನ ಮಾಡಲಾಯಿತು. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ