ನವದೆಹಲಿ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತ ಬಿಬಿಸಿಯ ಸಾಕ್ಷ್ಯಚಿತ್ರ (BBC Documentary) ದೇಶದಲ್ಲೇ ಹೊಸ ವಿವಾದ ಹುಟ್ಟುಹಾಕಿದೆ. ಇಷ್ಟು ದಿನ ರಾಜಕೀಯ ಕೇಸರೆರಚಾಟಕ್ಕೆ ಸೀಮಿತವಾಗಿದ್ದ ಸಾಕ್ಷ್ಯಚಿತ್ರ ಈಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಹೊಸ ಸಂಘರ್ಷ ಸೃಷ್ಟಿಸಿದೆ. ಸಿಎಎ (CAA), ಎನ್‌ಆರ್‌ಸಿ (NRC) ಬಳಿಕ ಕ್ಯಾಂಪಸ್ ಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಮಾಡಲಾರಂಭಿಸಿದ್ದಾರೆ.
Advertisement
ಹೌದು. ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ಸಿದ್ಧಪಡಿಸಿರುವ ಸಾಕ್ಷ್ಯಚಿತ್ರ ದೇಶದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರ ಮಾಡಲು ಕೇಂದ್ರ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ವಿಶ್ವವಿದ್ಯಾಲಯಗಳಲ್ಲಿ ಅದನ್ನು ಪ್ರಸಾರ ಮಾಡಲು ವಿದ್ಯಾರ್ಥಿಗಳೇ ಪಟ್ಟು ಹಿಡಿದಿದ್ದಾರೆ. ತಾವೇ ಗುಂಪು ಕಟ್ಟಿಕೊಂಡು ಡಾರ್ಕ್ ನೆಟ್ (DarkNet) ಮೂಲಕ ಚಿತ್ರವನ್ನು ಕ್ಯಾಂಪಸ್ ನಲ್ಲಿ ಪ್ರಸಾರ ಮಾಡುವ ಪ್ರಯತ್ನ ಆರಂಭಿಸಿದ್ದಾರೆ.
Advertisement
Advertisement
ಇತ್ತೀಚೆಗಷ್ಟೇ ದೆಹಲಿಯ ಜೆಎನ್‌ಯು (JNU) ಹಾಗೂ ಹೈದರಾಬಾದ್‌ನ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಚಿತ್ರ ಪ್ರದರ್ಶನ ಮಾಡುವ ಪ್ರಯತ್ನ ನಡೆದಿತ್ತು. ಈ ವೇಳೆ ಇದು ಸಂಘರ್ಷಕ್ಕೆ ಕಾರಣವಾಗಿತ್ತು. ಸೆಂಟ್ರಲ್ ವಿವಿಗಳಲ್ಲಿ ಗಲಭೆ ಸೃಷ್ಟಿಯಾದ್ರೆ, ಜೆಎನ್‌ಯು ಕ್ಯಾಂಪಸ್ ನಲ್ಲಿ ಕಲ್ಲು ತೂರಾಟಕ್ಕೆ ಕಾರಣವಾಗಿತ್ತು. ಈ ಎರಡು ವಿವಿಗಳಿಗೆ ಸಂಘರ್ಷ ಸೀಮಿತವಾಗಿದೆ ಎಂದು ಕೊಳ್ಳುತ್ತಿರುವಾಗಲೇ ದೇಶದ ಹಲವು ವಿವಿಗಳಲ್ಲಿ ಇಂತಹದೇ ಘಟನೆಗಳು ವರದಿಯಾಗುತ್ತಿವೆ.
Advertisement
ಮೋದಿ ಸಾಕ್ಷ್ಯಚಿತ್ರ ಸಂಘರ್ಷ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್ ನಲ್ಲಿ ತಾರಕಕ್ಕೇರಿತ್ತು. ಚಿತ್ರವನ್ನು ಸಂಜೆ 6 ಗಂಟೆಗೆ ಕ್ಯಾಂಪಸ್ ನಲ್ಲಿ ಪ್ರದರ್ಶನ ಮಾಡುವುದಾಗಿ ವಿದ್ಯಾರ್ಥಿಗಳು ಘೋಷಣೆ ಮಾಡಿದರು. ಇದಕ್ಕೆ ವಿವಿ ಕುಲಪತಿಗಳು ವಿರೋಧ ವ್ಯಕ್ತಪಡಿಸಿದರು. ಅದಕ್ಕೆ ಜಗ್ಗದ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳ ವರ್ತನೆ ಕಂಡು ಕುಲಪತಿಗಳು ಪೊಲೀಸರಿಗೆ ದೂರು ನೀಡಿದರು. ಈ ಹಿನ್ನಲೆ ಕ್ಯಾಂಪಸ್ ಗೆ ಬಂದ ಪೊಲೀಸರು ಚಿತ್ರ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದ 14 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸುತ್ತಿದ್ದಂತೆ ಪ್ರತಿಭಟನೆ ಭುಗಿಲೆದ್ದಿತು.
ಇತ್ತ ಪಂಜಾಬ್ ವಿಶ್ವವಿದ್ಯಾಲಯಕ್ಕೂ ಸಾಕ್ಷ್ಯಚಿತ್ರದ ಬಿಸಿ ತಟ್ಟಿದೆ. ಕ್ಯಾಂಪಸ್ ನಲ್ಲಿ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುತ್ತಿತ್ತು. ಮಧ್ಯಪ್ರವೇಶ ಮಾಡಿದ ಪೊಲೀಸರೂ ಪ್ರದರ್ಶನವನ್ನು ತಡೆದು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕೇರಳದ ತಿರುವನಂತಪುರಂ ವಿವಿ, ಪಾಂಡಿಚೇರಿ ವಿವಿಯಲ್ಲೂ ಸಾಕ್ಷ್ಯಚಿತ್ರ ಪ್ರದರ್ಶನದ ವಿಫಲ ಪ್ರಯತ್ನಗಳು ನಡೆದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k