ಬೆಂಗಳೂರು: ರೈತರ ಸಾಲ ಮನ್ನಾ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಸರ್ಕಾರ, ಖರ್ಚು ಕಡಿಮೆ ಮಾಡಿ ಅಂತ ಸಿ.ಎಂ ಕುಮಾರಸ್ವಾಮಿಯವರು ಎಷ್ಟೇ ಮನವಿ ಮಾಡಿದ್ರು ಅವರ ಸಚಿವರು ಮಾತ್ರ ಖರ್ಚುಮಾಡ್ತಾನೆ ಇದ್ದಾರೆ.
2015 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯನ್ನ ಬಳಸಿಕೊಳ್ಳದೇ ವಿವಿ ಬೇಜವಾಬ್ದಾರಿಯನ್ನು ತೋರಿದೆ. ಸರ್ಕಾರ ಉಚಿತವಾಗಿ ನೀಡಿರೋ ನಿಖ್ ಸಾಫ್ಟ್ ವೇರ್ ಅನ್ನು ಎಲ್ಲಾ ವಿವಿಗಳು ಬಳಸಬೇಕು ಅಂತ ಸರ್ಕಾರಿ ಆದೇಶವಿದ್ರೂ ಅದನ್ನು ಉಲ್ಲಂಘಿಸಿದೆ. ಅದನ್ನು ಬಳಸದೇ ಖಾಸಗಿ ಸಂಸ್ಥೆಗಳ ಮೂಲಕ ಮಹತ್ವದ ಪರೀಕ್ಷಾ ದಾಖಲಾತಿಗೆ ಮಾರ್ಕ್ಸ್ ಕಾರ್ಡ್ ಪ್ರಿಂಟ್‍ಗೆ ಟೆಂಡರ್ ಕರೆದಿದ್ದಾರೆ. ಹಾಗಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ತನ್ನ ವ್ಯಾಪ್ತಿ ಅಡಿಯಲ್ಲಿ ಬರೋ ಎಲ್ಲಾ ವಿಶ್ವವಿದ್ಯಾಲಯಗಳು ಖಾಸಗಿ ಸಾಫ್ಟ್ ವೇರ್ ಖರೀದಿಗೆ ಮೌಖಿಕ ಆದೇಶ ನೀಡಿದ್ದಾರೆ.
ಒಂದೇ ಕೆಲಸಕ್ಕೆ ವಿವಿಗಳಿಂದ ಎರಡೆರಡು ಸಾಫ್ಟ್ ವೇರ್ ಅನ್ನ ಖರೀದಿ ಮಾಡುತ್ತಿದ್ದು, ಇದಕ್ಕಾಗಿ ಕೋಟಿ ಕೊಟಿ ರೂ ವೆಚ್ಚವನ್ನು ಖರ್ಚುಮಾಡುವ ಪರಿಸ್ಥಿತಿ ಬಂದಿದೆ. ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ದಾವಣಗೆರೆ, ಕಲಬರುಗಿ ವಿವಿಗಳಿಂದ ಈ ರೀತಿ ಖರೀದಿಗಳು ಸಾಧ್ಯವಾಗುತ್ತಿದೆ.