ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್ ಬೈ ಹೇಳಲು ಮುಂದಾದ್ರಾ ಕ್ರಿಸ್ ಗೇಲ್?

Public TV
1 Min Read
CHRIS GAYLE

ದುಬೈ: ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ್ಯ ಡೆಂಜರಸ್ ಬ್ಯಾಟ್ಸ್‌ಮ್ಯಾನ್‌, ಸಿಕ್ಸರ್‌ಗಳ ಕಿಂಗ್, ಮೈದಾನದಲ್ಲಿ ರಂಜಿಸುವ ಯುನಿವರ್ಸಲ್ ಬಾಸ್ ಖ್ಯಾತಿಯ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮ್ಯಾನ್‌ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಲು ಮುಂದಾದ್ರಾ ಎಂಬ ಅನುಮಾನ ಮೂಡಿದೆ.

CHRIS GAYLE 1

ಟಿ20 ವಿಶ್ವಕಪ್‍ನಲ್ಲಿ ಸೆಮಿಫೈನಲ್‍ಗೇರಲು ವಿಫಲವಾದ ವೆಸ್ಟ್ ಇಂಡೀಸ್ ತಂಡ ಇಂದು ಸೂಪರ್-12 ಹಂತದ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿತು. ಈ ವೇಳೆ ವೆಸ್ಟ್ ಇಂಡೀಸ್ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಗೇಲ್ 15ರನ್ (9 ಎಸೆತ, 2 ಸಿಕ್ಸ್) ಸಿಡಿಸಿ ಔಟ್ ಆದರು ಬಳಿಕ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ ಗೇಲ್ ಅಭಿಮಾನಿಗಳತ್ತ ಕೈ ಬೀಸಿ, ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು. ಜೊತೆಗೆ ತಮ್ಮ ಗ್ಲೌಸ್‍ನ್ನು ಅಭಿಮಾನಿಗಳಿಗೆ ನೀಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡುವ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದ ಕನ್ನಡಿಗ ರಾಹುಲ್

CHRIS GAYLE 2

ಟಿ20 ಕ್ರಿಕೆಟ್‍ನಲ್ಲಿ 445 ಪಂದ್ಯಗಳಿಂದ 14,321 ರನ್ ಸಿಡಿಸಿದ್ದಾರೆ. ಇದರಲ್ಲಿ ದಾಖಲೆಯ 22 ಶತಕಗಳು ಮತ್ತು 1043 ಸಿಕ್ಸರ್‍ ಗಳು ಕೂಡಿದೆ. ಗೇಲ್ ಈವರೆಗೆ ಟಿ20 ಕ್ರಿಕೆಟ್‍ನಲ್ಲಿ ಸ್ಫೋಟಕ ಬ್ಯಾಟಿಂಗ್‍ನಿಂದ ದೈತ ಆಟಗಾರನಾಗಿ ಮಿಂಚಿದ್ದರು. ಗೇಲ್ ವೆಸ್ಟ್ ಇಂಡೀಸ್ ತಂಡದ ಪರ 2004 ಚಾಂಪಿಯನ್ಸ್ ಟ್ರೋಫಿ, 2012 ಮತ್ತು 2016ರ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು.

ಗೇಲ್ 103 ಟೆಸ್ಟ್ ಪಂದ್ಯಗಳಿಂದ 7,212 ರನ್ ಮತ್ತು 73 ವಿಕೆಟ್ ಪಡೆದರೆ, 301 ಏಕದಿನ ಪಂದ್ಯಗಳಿಂದ 10,480 ರನ್ ಮತ್ತು 167 ವಿಕೆಟ್ ಬೇಟೆಯಾಡಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಗೇಲ್ ಉತ್ತಮ ಸ್ನೇಹ ಜೀವಿಯಾಗಿದ್ದು, ಕ್ರಿಕೆಟ್ ಕಂಡ ಒಬ್ಬ ಉತ್ತಮ ಆಟಗಾರ ಮತ್ತು ಅಭಿಮಾನಿಗಳನ್ನು ರಂಜಿಸುತ್ತಿದ್ದ ದೈತ ಆಟಗಾರ ಕ್ರಿಕೆಟ್ ಅಂಗಳದಿಂದ ದೂರ ಸರಿಯುವ ಮುನ್ಸೂಚನೆ ನೀಡಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ದನ್ನೂ ಓದಿ: ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ

Share This Article
Leave a Comment

Leave a Reply

Your email address will not be published. Required fields are marked *