ಬೆಂಗಳೂರು: ಫೆಬ್ರುವರಿ 12ರಿಂದ 17ರವರೆಗೆ ಬೆಂಗಳೂರಿನ (Bengaluru) ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 (Aero India 2023) ಪ್ರದರ್ಶನದಲ್ಲಿ ಭಾರತದಲ್ಲಿನ ಯು.ಎಸ್. ಮಿಷನ್‌ನ ಚಾರ್ಜೆ ಡಿ ಅಫೇರ್ಸ್ ರಾಯಭಾರಿ ಎಲಿಜಬೆತ್ ಜೋನ್ಸ್ ಅವರು ಈವರೆಗಿನ ಅಮೆರಿಕದ ಅತಿ ದೊಡ್ಡ ನಿಯೋಗವನ್ನು (U.S.A Delegation) ಮುನ್ನಡೆಸಿ ಪಾಲ್ಗೊಳ್ಳಲಿದ್ದಾರೆ.
ಅಮೆರಿಕ (America) ವೈಮಾನಿಕ ಉದ್ಯಮ ಹಾಗೂ ಸೇನಾಪಡೆಯ ವಿಶ್ವ ದರ್ಜೆಯ ಉಪಕರಣಗಳು, ತರಬೇತಿ, ತಾಕತ್ತು ಹಾಗೂ ಜಂಟಿ ಅಭ್ಯಾಸದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಲು ನನಗೆ ಹೆಮ್ಮೆಯೆನಿಸುತ್ತಿದೆ. ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಆಧುನೀಕರಣಗೊಳಿಸುತ್ತಿರುವ ಸಮಯದಲ್ಲಿ ನಾವು ಐಚ್ಛಿಕ ಪಾಲುದಾರರಾಗಲು ಬಯಸುತ್ತೇವೆ. ಉಭಯ ದೇಶಗಳಿಗೂ ಲಾಭದಾಯಕವಾಗುವ ಜಂಟಿ ಉತ್ಪಾದನೆ ಹಾಗೂ ಜಂಟಿ ಅಭಿವೃದ್ಧಿಯ ಪಾಲುದಾರಿಕೆಯತ್ತ ನಾವು ಹೆಚ್ಚಿನ ಗಮನ ನೀಡುತ್ತಿದ್ದೇವೆ. ಸುರಕ್ಷಿತವಾದ, ಸಮೃದ್ಧಿಯಾದ, ಅತ್ಯಂತ ಮುಕ್ತವಾದ ಹಾಗೂ ಸ್ವತಂತ್ರ ʻಇಂಡೋ -ಪೆಸಿಫಿಕ್ʼ ಪ್ರಾಂತ್ಯಕ್ಕಾಗಿ ನಾವು ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರ ದೇಶವಾಗಿ ಪರಿಗಣಿಸುತ್ತೇವೆ ಎಂದು ಅಂಬಾಸಡರ್ ಜೋನ್ಸ್ ತಿಳಿಸಿದ್ದಾರೆ.
Advertisement
Advertisement
ಅಮೆರಿಕದ ಸೇನಾ ಪಡೆಯ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಅತ್ಯಾಧುನಿಕ ವಿಮಾನಗಳು ಏರೋ ಇಂಡಿಯಾ-2023 ರಲ್ಲಿ ಭಾಗಿಯಾಗಲಿವೆ. ಇದನ್ನೂ ಓದಿ: 500 ವಿಮಾನ ಖರೀದಿಗೆ ಆರ್ಡರ್ – ವಿಶ್ವ ದಾಖಲೆ ಬರೆದ ಏರ್ ಇಂಡಿಯಾ
Advertisement
ಅಮೆರಿಕದ ಪ್ರಮುಖ ಸೇನಾ ಕಂಪನಿಗಳಾದ ಏರೋ ಮೆಟಲ್ಸ್ ಅಲಯನ್ಸ್, ಆಸ್ಟ್ರೋನಾಟಿಕ್ಸ್ ಕಾರ್ಪೋರೇಷನ್ ಆಫ್ ಅಮೆರಿಕ, ಬೋಯಿಂಗ್, ಜಿಇ ಏರೋಸ್ಪೇಸ್, ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಇಂಕ್, ಹೈ ಟೆಕ್ ಇಂಪೋರ್ಟ್ ಎಕ್ಸ್‌ಪೋರ್ಟ್ ಕಾರ್ಪೋರೇಷನ್, ಜೋನಲ್ ಲ್ಯಾಬೋರೆಟರೀಸ್, ಲಾಕ್‌ಹೀಡ್ ಮಾರ್ಟಿನ್, ಪ್ರಾಟ್ ಅಂಡ್ ವೈಟ್ನೆ ಮತ್ತು ಟಿಡಬ್ಲ್ಯೂ ಮೆಟಲ್ಸ್ ಇವುಗಳ ವಿಮಾನಗಳು ಏರೋ ಇಂಡಿಯಾ 2023ರ ʻಯುಎಸ್‌ಎ ಪಾರ್ಟನರ್‌ಶಿಪ್ ಪೆವಿಲಿಯನ್ʼನ ಪ್ರದರ್ಶನದಲ್ಲಿ ಭಾಗಿಯಾಗಲಿವೆ.
Advertisement
ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ದ್ವಿಪಕ್ಷೀಯ ಬೆಂಬಲ ನೀಡುವ ದಿಸೆಯಲ್ಲಿ ಅಮೆರಿಕದ ವಾಯುಪಡೆಯ ಏಳು ಸದಸ್ಯರ ಬ್ಯಾಂಡ್ ʻಫೈನಲ್ ಅಪ್ರೋಚ್ʼ ಫೆಬ್ರುವರಿ 16ರಂದು ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಹಾಗೂ ಇಡೀ ವಾರ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k