UPA ಬದಲು PDA – ಮೈತ್ರಿಕೂಟದ ಹೆಸರು ಬದಲಾವಣೆ ಆಗುತ್ತಾ?

Public TV
1 Min Read
rahul siddaramaiah dk shivakumar mallikarjun kharge nitish kumar

ಬೆಂಗಳೂರು: ಸದ್ಯ ದೇಶದ ಏಳು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಮುಂದಿನ ದಿನಗಳಲ್ಲಿ ತನ್ನ ಹೆಸರು ಬದಲಿಸಿಕೊಳ್ಳಲು ಸಿದ್ದತೆ ನಡೆಸಿದೆ. ಯುಪಿಎ ಬದಲು ಬೇರೊಂದು ಹೆಸರಿನಲ್ಲಿ ಬಿಜೆಪಿ (BJP) ವಿರುದ್ಧದ ಹೋರಾಟವನ್ನು ಜನರ ನಡುವೆ ಕೊಂಡೊಯ್ಯಲು ಕಾಂಗ್ರೆಸ್ (Congress) ನೇತೃತ್ವದ ಪಕ್ಷಗಳು ಚಿಂತನೆ ನಡೆಸಿವೆ.

ಮೈತ್ರಿಕೂಟದ ಹೆಸರು ಬದಲಾವಣೆಗೆ ಟಿಎಂಸಿ, ಎಎಪಿ ಸೇರಿ ಬಹುತೇಕ ಪಕ್ಷಗಳು ಒಲವು ತೋರಿಸಿವೆ. ಮಂಗಳವಾರ ಬೆಂಗಳೂರಿನಲ್ಲಿ (Bengaluuru) ನಡೆಯಲಿರುವ ಮಹಾಮೈತ್ರಿ ಸಭೆಯಲ್ಲಿ ಈ ಬಗ್ಗೆಯೇ ಪ್ರಮುಖ ಚರ್ಚೆ ನಡೆಯಲಿದೆ. ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (UPA) ಬದಲಿಗೆ ಪಿಡಿಎ (PDA) ಪ್ರೊಗ್ರೆಸ್ಸಿವ್ ಡೆಮಾಕ್ರಾಟಿಕ್ ಅಲಯನ್ಸ್ ಎಂಬುದಾಗಿ ಮರುನಾಮಕರಣ ಮಾಡುವ ಸಂಭವ ಹೆಚ್ಚಿದೆ.

 

ಇದೇ ವೇಳೆ ಕಾಮನ್ ಮಿನಿಮಮ್ ಪ್ರೋಗ್ರಾಂ, ಸೀಟ್ ಶೇರಿಂಗ್ ಮತ್ತಿತ್ತರ ವಿಚಾರಗಳು ಕೂಡ ಚರ್ಚೆಗೆ ಬರಲಿವೆ. ಸಿಎಂಪಿ ಅಂಶಗಳನ್ನು ರೂಪಿಸುವ ಸಲುವಾಗಿ ಉಪಸಮಿತಿಯೊಂದನ್ನು ರಚಿಸುವ ಸಂಭವ ಇದೆ. ಇವಿಎಂ ಬಗ್ಗೆ ಚುನಾವಣಾ ಆಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸುವ ಸಂಬಂಧ ನಿರ್ಣಯ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇದನ್ನೂ ಓದಿ: NDA ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ: ಕುಮಾರಸ್ವಾಮಿ

ಯುಪಿಎ ಹೆಸರು ಏಕೆ ಬೇಡ?
2 ಬಾರಿ ಅಧಿಕಾರ ನಡೆಸಿದ ಯುಪಿಎ ಬಗ್ಗೆ ನೆಗೆಟಿವ್ ಟಾಕ್ ಇದೆ. ಯುಪಿಎ ಕಾಲದ ಹಗರಣಗಳು ಈಗಲೂ ಜನರ ಮನಸ್ಸಿನಲ್ಲಿ ಅಚ್ಚು ಒತ್ತಿದೆ. ಹೀಗಾಗಿ ಹೆಸರು ಬದಲಿಸಿಕೊಂಡು ಜನರ ಮುಂದೆ ಹೋಗುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಯುಪಿಎ ಮೈತ್ರಿಕೂಟವನ್ನು ಹಲವು ಪಕ್ಷಗಳು ಹೊಸದಾಗಿ ಸೇರುತ್ತಿವೆ. ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯ ಹೆಸರಿನೊಂದಿಗೆ ಹೋಗುವುದು ಉತ್ತಮ ಎಂಬ ಸಲಹೆ ವ್ಯಕ್ತವಾಗಿದೆ.

 

Web Stories

Share This Article