-ಇಂದು ಏನಿರುತ್ತೆ? ಏನಿರಲ್ಲ?
ಬೆಂಗಳೂರು: ಕಾರ್ಮಿಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಎಂದಿನಂತೆ ಸಾರಿಗೆ ಬಸ್ ಗಳು ರಸ್ತೆಗೆ ಇಳಿದಿವೆ. ಎಂದಿನಂತೆ ಬಸ್ ಗಳ ಸಂಚಾರ ಅರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮಂಗಳವಾರ ಬಂದ್ ಹಿನ್ನೆಲೆಯಲ್ಲಿ ಕೆಲ ಬಸ್ ಗಳು ಸಂಚಾರ ಆರಂಭಿಸಿದ್ದರೂ., ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದವು. ಇಂದು ಬೆಳಗ್ಗೆಯಿಂದಲೇ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಹೊರ ಬಂದಿದ್ದಾರೆ.
ಮಂಗಳವಾರದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ, ಕೆಎಸ್‍ಆರ್‍ಟಿಸಿ ನಿರ್ಧರಿಸಿದೆ. ಮೆಜೆಸ್ಟಿಕ್‍ನಿಂದ ಬಸ್‍ಗಳು ಆಟೋ, ಓಲಾ, ಊಬರ್ ಎಲ್ಲಾ ಸೌಲಭ್ಯಗಳು ಲಭ್ಯವಿದೆ. ರಾಯಚೂರು, ಬಳ್ಳಾರಿ ಹೊರತುಪಡಿಸಿ ಶಾಲಾ-ಕಾಲೇಜುಗಳಿಗಿಲ್ಲ ರಜೆ. ಎಂದಿನಂತೆ ಎಲ್ಲ ಶಾಲಾ-ಕಾಲೇಜುಗಳು ತೆರೆಯಲಿದ್ದು, ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.
Advertisement
Advertisement
ಇಂದು ಏನಿರುತ್ತೆ?
ಸರ್ಕಾರಿ ಶಾಲೆ ಕಾಲೇಜು, ಸರ್ಕಾರಿ ಕಚೇರಿಗಳು, ಚಿತ್ರಪ್ರದರ್ಶನ, ಶಾಪಿಂಗ್ ಮಾಲ್, ಕ್ಯಾಬ್ ಸೇವೆ, ಮೆಟ್ರೋ ಸೇವೆ, ಹೋಟೆಲ್, ಎಪಿಎಂಸಿ ಮಾರುಕಟ್ಟೆ, ಬೀದಿಬದಿ ವ್ಯಾಪಾರ, ಆಸ್ಪತ್ರೆ, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್, ಹಾಲು, ತರಕಾರಿ ಸಿಗಲಿದೆ.
Advertisement
ಇಂದು ಏನಿರಲ್ಲ?
ಬಿಎಂಟಿಸಿ-ಕೆಎಸ್‍ಆರ್ ಟಿಸಿ ವಿರಳ ಸಂಚಾರ, ಆಟೋ ಸಂಚಾರದಲ್ಲಿ ವ್ಯತ್ಯಯ ಸಾದ್ಯತೆ, ಕೆಲ ಖಾಸಗಿ ಶಾಲಾ ಕಾಲೇಜುಗಳು, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ, ಕೆಲ ಗಾರ್ಮೆಂಟ್ಸ್, ಫ್ಯಾಕ್ಟರಿಗಳು ಕ್ಲೋಸ್.
Advertisement
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎರಡು ದಿನಗಳ ಮುಷ್ಕರ ನಡೆಸುತ್ತಿರುವ ಕಾರ್ಮಿಕರು ಗದಗ, ವಿಜಯಪುರ, ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು.ಸ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಹೋರಾಟಗಾರರು ಅಡುಗೆ ಮಾಡಿ ಪ್ರತಿಭಟನೆ ನಡೆಸಿದರು. ಇಂದು ಸಹ ಹೋರಾಟ ಮುಂದುವರೆಯಲ್ಲಿದ್ದು, ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ರೈಲು ನಿಲ್ದಾಣದವರಗೆ ಪಾದಯಾತ್ರೆ ನಡೆಯಲಿದೆ. ನಂತರ ರೈಲು ತಡೆದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಬಾಗಲಕೋಟೆಯ ಎಪಿಎಂಸಿ ಬಳಿ ಎರಡು ಬಸ್‍ಗಳಿಗೆ ಕಲ್ಲು ತೂರಿದರು. ಹುಬ್ಬಳ್ಳಿಯಲ್ಲಿ ಇವತ್ತು ಕೂಡ ಸಾರಿಗೆ ಸ್ತಬ್ಧವಾಗಲಿದೆ. ಬ್ಯಾಂಕ್ ಸೇವೆ ಕೂಡ ಸ್ಥಗಿತವಾಗಲಿದೆ. ಬ್ಯಾಂಕ್, ಅಂಚೆ, ವಾಯುವ್ಯ ಸಾರಿಗೆ ಸೇರಿದಂತೆ ಹಲವಾರು ಇಲಾಖೆಯ ಕಾರ್ಮಿಕರು ಇಂದು ಸಾಮೂಹಿಕ ಪ್ರತಿಭಟನೆ ನಡೆಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv