ಬೆಂಗಳೂರು: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದಿಂದ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಗೆ ಹಲವು ಬೇಡಿಕೆಗಳ ಈಡೇರಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ.
ಬಳಿಕ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಮಾತನಾಡಿ, ಸರ್ಕಾರದಿಂದ ಧಾರ್ಮಿಕ ಪರಿಷತ್ ಮಾಡಿದ್ದಾರೆ ಅದು ರದ್ದಾಗಬೇಕು. ಧಾರ್ಮಿಕ ಪರಿಷತ್ ನಿಂದ ಸಚಿವರು, ಎಕ್ಸಿಕ್ಯೂಟಿವ್ ಆಫೀಸರ್, ಕಮೀಷನರ್‍ಗೆ ಪವರ್ ಇರಲಿಲ್ಲ. ಆದ್ದರಿಂದ ಈ ಧಾರ್ಮಿಕ ಪರಿಷತ್ ಅನ್ನು ತೆಗೆಯಬೇಕು ಎಂದಿದ್ದಾರೆ.
Advertisement
Advertisement
ಅರ್ಚಕರಿಗೆ 60 ವರ್ಷಕ್ಕೆ ರಿಟೈರ್ ಮೆಂಟ್ (Priest Retirement) ತಂದಿದ್ದಾರೆ. ನಮಗೆ ರಿಟೈರ್ ಮೆಂಟ್ ಬೇಡ. ನಾವು ಸರ್ಕಾರಿ ನೌಕರರಲ್ಲ. ಗ್ರಾಮೀಣ ಭಾಗದ ದೇವಾಲಯಗಳ ಅರ್ಚಕರಿಗೆ ಎಲ್ಲಾ ಸಾಮಗ್ರಿಗಳನ್ನು ತಂದು ಪೂಜೆ ಮಾಡಲು ತಿಂಗಳಿಗೆ 5 ಸಾವಿರ ಕೊಡುತ್ತಿದ್ದಾರೆ. ಅದನ್ನು 10 ಸಾವಿರಕ್ಕೆ ಸಂಬಳ ಏರಿಸಬೇಕು ಎಂದು ಸಚಿವರ ಮುಂದೆ ಮನವಿ ಮಾಡಿದ್ದಾರೆ.
Advertisement
ಈ ವೇಳೆ ಸಚಿವರು ಕೂಡಲೇ ತಮ್ಮ ಬೇಡಿಕೆಗಳನ್ನು ಸಭೆ ಕರೆದು ಪೂರೈಸತ್ತೇವೆ ಅಂತಾ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಷ್ಟ ಕಾಲದಲ್ಲಿ ಸವದಿ, ಶೆಟ್ಟರ್ ನಮ್ಮ ಪಕ್ಷಕ್ಕೆ ಬಂದು ಶಕ್ತಿ ತುಂಬಿದ್ದಾರೆ: ಡಿಕೆ ಶಿವಕುಮಾರ್