ಚಾಮರಾಜನಗರ: ನಾಳೆಯ ಕಾಂಗ್ರೆಸ್ ಸಾಧನಾ ಸಮಾವೇಶ ಒಂದು ಡ್ರಾಮಾ ಎಂದು ಕೊಳ್ಳೇಗಾಲದಲ್ಲಿ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V.Somanna) ವ್ಯಂಗ್ಯವಾಡಿದರು. ಹೈಕಮಾಂಡ್ ಹೇಳಿದಂತೆ ಕೇಳ್ತೀನಿ ಅಂತ ಸಿದ್ದರಾಮಯ್ಯ (Siddaramaiah) ಹೇಳಿ ಬಂದಿದ್ದಾರೆ. ಅವರು ಸಿಎಂ ಆದಾಗಲೇ ಒಪ್ಪಂದವಾಗಿದೆ ಎಂಬ ಮಾಹಿತಿ ನಮಗೂ ಇದೆ ಎಂದು ತಿಳಿಸಿದರು.
ಆಡಳಿತ ಕುಸಿದಾಗ ಸಮಾವೇಶದ ಡ್ರಾಮಾ ಮಾಡ್ತಿದ್ದಾರೆ. ಹಿಂದಿನ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ಪಾಪರ್ ಆಗಿದೆ. ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ಕೆಲಸ ಮಾಡುತ್ತಿದೆ. ನಾವು ಕೊಡುವ ಯೋಜನೆ ಒಂದಾದರೆ, ಇವರು ಖರ್ಚು ಮಾಡುವುದೇ ಒಂದು. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ದೊಡ್ಡದು. ಏನು ಒಳ ಒಪ್ಪಂದ ಆಗಿದೆ ಅಂತಾ ಜ.26 ರೊಳಗೆ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಇದು ಸಿಎಂ ಅಳಿವು-ಉಳಿವಿನ ಸಮಾವೇಶ, ಜನರ ಸಾವಿನ ಮೇಲೆ ಮೈಸೂರು ಸಾಧನಾ ಸಮಾವೇಶ – ಆರ್.ಅಶೋಕ್ ಲೇವಡಿ
ನಮಗಿಂತ ಹೆಚ್ಚಾಗಿ ಸಿದ್ದರಾಮಯ್ಯನವರಿಗೆ ಒಪ್ಪಂದದ ಬಗ್ಗೆ ಗೊತ್ತಿದೆ. ಬದಲಾವಣೆಗೆ ಸಿದ್ದರಾಮಯ್ಯನವರ ಮೈಂಡ್ ಸೆಟ್ ಆಗಿದೆ ಎಂದು ಸೋಮಣ್ಣ ಹೇಳಿದರು.