ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಿಮ್ಮ ಸರ್ಕಾರದ ಸಚಿವರೊಬ್ಬರು ಎನ್‍ಸಿಪಿ ನಾಯಕ ಅಜಿತ್ ಪವಾರ್‌ಗೆ ಬೆದರಿಕೆ ಹಾಕುತ್ತಿದ್ದಾರೆ ಇದು ನಿಮಗೆ ಕೀಳುಮಟ್ಟದ ರಾಜಕೀಯ ಅನಿಸುತ್ತಿಲ್ಲವೇ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
Advertisement
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಕೈಮೀರುತ್ತಿದ್ದಂತೆ ಸಂಜಯ್ ರಾವತ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶರದ್ ಪವಾರ್ ಮಹಾರಾಷ್ಟ್ರದ ಮಗ ಅವರಿಗೆ ಕೇಂದ್ರ ಸಚಿವರೊಬ್ಬರು ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಮೋದಿ ಮತ್ತು ಅಮಿತ್ ಶಾ ಸುಮ್ಮನಿರುವುದು ಏಕೆ? ನೀವು ಈ ಬೆದರಿಕೆಯ ಹಿಂದೆ ಇರುವುದು ನಿಮ್ಮ ಮೌನದಲ್ಲಿ ತಿಳಿಯುತ್ತಿದೆ. ಇದು ಸಾಧ್ಯವಿಲ್ಲ. ಬಂಡಾಯ ಶಾಸಕರ ಹಿಂದೆ ಯಾರಿದ್ದಾರೆ ನಮಗೆ ಗೊತ್ತು ಎಂದಿದ್ದಾರೆ. ಇದನ್ನೂ ಓದಿ: 5 ಸ್ಟಾರ್ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?
Advertisement
Advertisement
ನಾವು ವಿಶ್ವಾಸಮತ ಯಾಚನೆ ಮಾಡುತ್ತೇವೆ. ಸದನದಲ್ಲಿ ವಿಶ್ವಾಸಮತ ಯಾಚನೆ ಗೆಲ್ಲುವ ವಿಶ್ವಾಸ ಇದೆ ಎಂದು ಅಭಿಪ್ರಾಯವ್ಯಕ್ತ ಪಡಿಸಿದ್ದಾರೆ. ಈ ನಡುವೆ ಏಕನಾಥ್ ಶಿಂಧೆ ಜೊತೆಗಿರುವ ಬಂಡಾಯ ಸದಸ್ಯರ ಸಂಖ್ಯಾ ಬಲ 50ಕ್ಕೆ ಏರಿಕೆ ಕಂಡಿದೆ. ಇಂದು ಮಧ್ಯಾಹ್ನ ಸಿಎಂ ಉದ್ಧವ್ ಠಾಕ್ರೆ ಶಿವಸೇನೆಯ ಘಟಕದ ಅಧ್ಯಕ್ಷರು, ರಾಜ್ಯಾಧ್ಯಕ್ಷರ ಸಭೆ ಕರೆದಿದ್ದು ಸಭೆಯ ಮೂಲಕ ಸರ್ಕಾರ ಉಳಿಸಿಕೊಳ್ಳಲು ಕಡೆಯವರೆಗೂ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: 55 ಶಾಸಕರು ನಮ್ಮ ಬಳಿ ಇದ್ದಾರೆ – ಉದ್ಧವ್ ಬೆದರಿಕೆಗೆ ಜಗ್ಗದ ರೆಬೆಲ್ಸ್
Advertisement
महाविकास आघाडीचे सरकार वाचवण्याचा प्रयत्न केला तर शरद पवार यांना घरी जाऊ देणार नाही .रस्त्यात अडवू.अशी धमकी भाजपचा एक केंद्रीय मंत्री देतो.ही भाजपची अधिकृत भूमिका असेल तर तसे जाहीर करा. सरकार टिकेल किंवा जाईल..पण शरद पवार यांच्या बाबत अशी भाषा महाराष्ट्राला मान्य नाहीं@PMOIndia pic.twitter.com/YU1Pc39vCb
— Sanjay Raut (@rautsanjay61) June 24, 2022
ಹಲವು ಆಫರ್‌ಗಳನ್ನು ನೀಡಿದರು ಒಪ್ಪದ ಬಂಡಾಯ ಶಾಸಕರ ನಿರ್ಧಾರದಿಂದ ಶಿವಸೇನೆ ನಾಯಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇತ್ತ ಪಕ್ಷ ಉಳಿಸಿಕೊಳ್ಳಬೇಕಾ ಅಥವಾ ಸರ್ಕಾರ ಉಳಿಸಿಕೊಳ್ಳಬೇಕಾ ಎನ್ನುವ ಡೋಲಾಯಮಾನ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆ ಇದ್ದಾರೆ. ಸರ್ಕಾರವನ್ನು ಬಿಟ್ಟು ಪಕ್ಷವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದ ಠಾಕ್ರೆ 24 ಗಂಟೆಯಲ್ಲಿ ಎಲ್ಲ ಶಾಸಕರು ವಾಪಸ್ ಬರುವುದಾದ್ರೆ ಮೈತ್ರಿ ಕಡಿದುಕೊಳ್ಳುವುದಾಗಿ ಪಕ್ಷದ ಸಂಸದ ಸಂಜಯ್ ರಾವುತ್ ಮೂಲಕ ತಿಳಿಸಿದ್ದರು. ಆದರೆ ಪರಿಸ್ಥಿತಿ ಕೈ ಮೀರಿರುವ ಹಿನ್ನೆಲೆ ಶಾಸಕರು ವಾಪಸ್ ಬರುವುದು ಅನುಮಾನ ಎನ್ನಲಾಗುತ್ತಿದೆ. ಉದ್ಧವ್ ಠಾಕ್ರೆ ಪ್ರಯತ್ನಕ್ಕೆ ಎನ್‍ಸಿಪಿ ಸಾಥ್ ನೀಡಿದ್ದು ಠಾಕ್ರೆ ಜೊತೆಗೆ ಕಡೆಯವರೆಗೂ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಸರ್ಕಾರ ಮುಂದುವರಿಯಲಿದೆ. ಶಿವಸೇನೆಯ ಬಂಡಾಯ ಅದು ಆತಂರಿಕ ವಿಚಾರ, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಅಜಿತ್ ಪವಾರ್ ಬೆಂಬಲ ನೀಡಿದ್ದಾರೆ.