ಇಂದಿರಾ ಗಾಂಧಿ ‘ಭಾರತ ಮಾತೆ’: ಕೇಂದ್ರ ಸಚಿವ ಸುರೇಶ್‌ ಗೋಪಿ ಬಣ್ಣನೆ

Public TV
1 Min Read
bjp suresh gopi

– ಮಾರ್ಕ್ಸ್‌ವಾದಿ ನಾಯನಾರ್‌ ನನ್ನ ರಾಜಕೀಯ ಗುರು ಎಂದ ಬಿಜೆಪಿ ನಾಯಕ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ‘ಭಾರತ ಮಾತೆ’ ಹಾಗೂ ಕಾಂಗ್ರೆಸ್‌ನ ಮಾಜಿ ಸಿಎಂ ದಿವಂಗತ ಕೆ.ಕರುಣಾಕರನ್‌ ‘ಧೈರ್ಯಶಾಲಿ ಆಡಳಿತಗಾರ’ ಎಂದು ಕೇಂದ್ರ ಸಚಿವ ಸುರೇಶ್‌ ಗೋಪಿ (Suresh Gopi) ನೀಡಿರುವ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ.

ಇಲ್ಲಿನ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ ‘ಮುರಳಿ ಮಂದಿರಂ’ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರುಣಾಕರನ್‌ ಮತ್ತು ಮಾರ್ಕ್ಸ್‌ವಾದಿ ಇ.ಕೆ.ನಾಯನಾರ್‌ ನನ್ನ ರಾಜಕೀಯ ಗುರುಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷ ಬಿಟ್ಟುಹೋದವರನ್ನ ಮತ್ತೆ ಸೇರಿಸಲ್ಲ – ಉದ್ಧವ್ ಠಾಕ್ರೆ ಗುಡುಗು

indira gandhi

ಕರುಣಾಕರನ್ ಸ್ಮಾರಕಕ್ಕೆ ಭೇಟಿ ನೀಡಿದ ಬಗ್ಗೆ ಯಾವುದೇ ರಾಜಕೀಯ ಅರ್ಥವನ್ನು ಕಲ್ಪಿಸಬೇಡಿ. ನನ್ನ ಗುರುಗಳಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಬಿಜೆಪಿ ನಾಯಕ ಸ್ಪಷ್ಟಪಡಿಸಿದ್ದಾರೆ.

ಸುರೇಶ್‌ ಗೋಪಿ ಅವರು ತ್ರಿಶೂರ್‌ ಲೋಕಸಭಾ ಕ್ಷೇತ್ರದಲ್ಲಿ ಕೇರಳ ಕೇರಳ ಸಿಎಂ ಆಗಿದ್ದ ದಿ. ಕರುಣಾಕರನ್‌ ಅವರ ಪುತ್ರ ಕಾಂಗ್ರೆಸ್‌ ಅಭ್ಯರ್ಥಿ ಮುರಳೀಧರನ್‌ ಅವರನ್ನು ಮಣಿಸಿದ್ದರು. 74,686 ಮತಗಳ ಅಂತರದಿಂದ ಸುರೇಶ್‌ ಗೋಪಿ ಗೆಲುವು ದಾಖಲಿಸಿದ್ದರು. ಇದನ್ನೂ ಓದಿ: ತಿರುಪತಿಗೆ ತೆರಳಿ ದೇವರ ದರ್ಶನ ಪಡೆದ ಹೆಚ್‌ಡಿಕೆ

Share This Article