ಹಾಸನ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಂದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೈಕಾರ ಕೂಗಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ, ದೊಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶೋಭಾ ಕರಂದ್ಲಾಜೆ ಆಗಮಿಸುತ್ತಿದ್ದಂತೆ ನೂರಾರು ಕಾರ್ಯಕರ್ತರು ಅವರಿಗೆ ಸ್ವಾಗತ ಕೋರಿದ್ರು. ಈ ವೇಳೆ ವ್ಯಕ್ತಿಯೊಬ್ಬ ಕೇಂದ್ರ ಸಚಿವರ ಎದುರೇ ಸಿದ್ದರಾಮಯ್ಯ ಅವರಿಗೆ ಜೈಕಾರ ಕೂಗಿದ್ದಾನೆ. ಜೈಕಾರ ಕೂಗಿದವನಿಗೆ ತಕ್ಷಣ ಗ್ರಾಮಸ್ಥರೇ ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸಚಿವರು ಬಂದು ಬೇರೆ ಏನಾದರು ಮಾತನಾಡಿದ್ರಾ? ನೀನ್ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದು ಗ್ರಾಮಸ್ಥರು ತಿಳಿಹೇಳಿದರು. ಆದರೆ ಇದ್ಯಾವುದಕ್ಕೂ ಲೆಕ್ಕಿಸದೆ ಶೋಭಾ ಕರಂದ್ಲಾಜೆ ಕಾರು ಹತ್ತಿ ಹೊರಟರು. ಗ್ರಾಮಸ್ಥರು ತಿಳಿಹೇಳಿದರೂ ತನ್ನ ಆಕ್ರೋಶ ಮುಂದುವರಿಸಿದ ವ್ಯಕ್ತಿ, ಸಿದ್ದರಾಮಯ್ಯ ಅನ್ನಭಾಗ್ಯದ ಮೂಲಕ ಬಡವರಿಗೆ ಆಹಾರ ನೀಡಿದ್ರು. ಆದರೆ ಇವರು ಏನು ಮಾಡಿದ್ದಾರೆ? ಕೊಡುವ ಅಕ್ಕಿಯಲ್ಲೂ ಹೆಚ್ಚು ಹಣ ಕೇಳುತ್ತಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನನ್ನ ಆತ್ಮ ಸಾಕ್ಷಿ ಅನುಸಾರ ತೀರ್ಮಾನ ತೆಗೆದುಕೊಳ್ಳುತ್ತೇನೆ: ಆನಂದ್ ಸಿಂಗ್