ನವದೆಹಲಿ: ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ನೋಟಿಸ್‌ಗೆ ಸಿಎಂ ಭಯಗೊಂಡಿದ್ದಾರೆ. ಇಂದು ಸಂಪುಟ ಸಭೆಯಲ್ಲಿ ಗವರ್ನರ್ ವಿರುದ್ಧ ನಿರ್ಣಯ ತೆಗೆದುಕೊಂಡಿದ್ದಾರೆ. ಕಾನೂನಿನ ವಿರುದ್ಧ, ಸಂವಿಧಾನದ ವಿರುದ್ಧ ರಾಜ್ಯ ಸರ್ಕಾರ ಕೆಲಸ ಮಾಡಿದೆ. ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಹೆದರುತ್ತಿದ್ದೀರಿ ಎಂದು ಸಚಿವೆ ಪ್ರಶ್ನಿಸಿದ್ದಾರೆ.
ನೀವು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ನಿರಪರಾಧಿ ಎಂದಾದರೆ ಮತ್ತೆ ಅಧಿಕಾರ ಹಿಡಿಯಿರಿ. ಆದರೆ ರಾಜ್ಯಪಾಲರ ನೋಟಿಸ್‌ಗೆ ನೀವು ಉತ್ತರಿಸಬೇಕು. ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ, ರಾಜೀನಾಮೆ ನೀಡಬೇಕು. ರಾಜ್ಯಪಾಲರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಇಂದಿನ ಕ್ಯಾಬಿನೆಟ್ ನಿರ್ಣಯದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಡಿಸಿದ್ದು ಯಾರು? ಇದೆ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಂದ ಯಡಿಯೂರಪ್ಪಗೆ ನೋಟಿಸ್ ಕೊಡಿಸಿತ್ತು. ಅದರಿಂದ ಯಡಿಯೂರಪ್ಪನವರು ಸಂಕಷ್ಟ ಅನುಭವಿಸಿದ್ದರು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬಿಜೆಪಿ ಪಾದಯಾತ್ರೆ ಮಾಡೇ ಮಾಡುತ್ತದೆ. ಜನರು ಬರದೆ ಇರುವಂತೆ ತಡೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಒಬ್ಬರಿರಬಹುದು, ಇಬ್ಬರಿರಬಹುದು ಪಾದಯಾತ್ರೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.