ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ಮುಗ್ಧ ಅಲ್ಲ ಧೂರ್ತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಿಮ್ಮ ವೈಫಲ್ಯ ಮುಚ್ಚಲು ಈ ರೀತಿ ವಿವಾದ ಹುಟ್ಟು ಹಾಕೋದು ನಿಮ್ಮ ಕೆಲಸವಾ? ನಾವೇನಾದರೂ ಹಿಜಬ್ ವಿಷಯ ಎತ್ತಿದ್ವಾ? ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಬ್ ಇಲ್ಲ. ನಿಮಗ್ಯಾಕೆ ಈ ಕೆಟ್ಟ ವಿಚಾರ. ಸಿದ್ದರಾಮಯ್ಯಗೆ ಇದು ಗೊತ್ತಿಲ್ಲ ಅಂತಾ ಅಲ್ಲ. ಸಿದ್ದರಾಮಯ್ಯ ಮುದ್ಧ ಅಲ್ಲ, ಸಿದ್ದರಾಮಯ್ಯ ಧೂರ್ತರಿದ್ದಾರೆ. ಇದು ನನ್ನ ಗಂಭೀರ ಆರೋಪ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಶಕುನಿ ಇದ್ದ ಹಾಗೆ: ಯತ್ನಾಳ್
Advertisement
Advertisement
ಸಿದ್ದರಾಮಯ್ಯನವರೇ ಏನ್ ಮಾಡೋಕೆ ಹೊರಟಿದ್ದೀರಿ. ನಿಮ್ದು ಮುಠ್ಠಾಳತನವೋ, ಸಮಾಜ ಒಡೆಯಲು ಅತ್ಯಂತ ತಲೆ ಕೆಟ್ಟವರ ಥರ ಹೇಳಿಕೆ ಕೊಡ್ತಿದ್ದೀರೋ. ಸಮಾಜ ಒಡೆದು ವೋಟ್ ತೆಗೆದುಕೊಳ್ಳಬೇಕು ಅನ್ನೋದಾ? ಒಂದು ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಮಾತ್ರ ನೀವಿರೋದು. ಇದು ನಿಮ್ಮ ಸ್ಥಿತಿ. ಹೀಗೆ ನೀವು ಹುಚ್ಚ ಹುಚ್ಚರಾಗಿ ಮಾತಾಡಿದ್ರೆ ಜನ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸ್ತಾರೆ ನೆನಪಿಟ್ಟುಕೊಳ್ಳಿ ಎಂದು ಎಚ್ಚರಿಸಿದ್ದಾರೆ.
Advertisement
ಮಧ್ಯಪ್ರದೇಶದಲ್ಲಿ ಹನುಮಾನ್ ಚಾಲೀಸಾ ಮಾಡೋಕೆ ಹೋದ್ರು, ರಾಹುಲ್ ಗಾಂಧಿ ಜನಿವಾರ ಹಾಕಿದ್ರು. ಸಿದ್ದರಾಮಯ್ಯ 10 ಸಾವಿರ ಕೋಟಿ ಕೊಡ್ತೀನಿ ಅಂತಾರೆ. ಮನಮೋಹನ್ ಸಿಂಗ್ ಅವರು ಬಜೆಟ್ ಮೇಲೆ ಮುಸಲ್ಮಾನರಿಗೆ ಹಕ್ಕಿದೆ ಅಂತಾರೆ. ಮುಸಲ್ಮಾನರನ್ನು ತಪ್ಪು ದಾರಿಗೆ ಎಳೆಯೋದು ಗೊತ್ತಾಗುತ್ತೆ. ಎಲ್ಲಿಯೂ ಹಿಜಬ್ ಬ್ಯಾನ್ ಇಲ್ಲ. ವಸ್ತ್ರ ಸಂಹಿತೆ ಬಿಟ್ಟು ಹಿಜಬ್ ಹಾಕ್ತೀವಿ ಅಂದ್ರೆ ನಾಳೆ ಒಬ್ರು ಕೇಸರಿ ಶಾಲು ಹಾಕೊಂಡು ಬರ್ತೀನಿ ಅಂತಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಳ್ತಿದ್ದಿದ್ದಕ್ಕೆ ರಿಲೇಷನ್ಶಿಪ್ ಬೇಡ ಎಂದಿದ್ದೇನೆ: ಕಾರಿಯಪ್ಪ
Advertisement
ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಟ್ಯಾಂಡ್ ಇಲ್ಲ. ಅವರ ಸ್ಟ್ಯಾಂಡ್ ಅಂದ್ರೆ ಬಸ್ಟ್ಯಾಂಡ್ ಇದ್ದ ಹಾಗೆ. ಯಾರ ಬೇಕಾದರೂ ಏನಾದರೂ ಮಾತಾಡ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.