ಹುಬ್ಬಳ್ಳಿ: ಎಸ್ಸಿ, ಎಸ್ಟಿ ಜನಾಂಗಕ್ಕೆ ಅವಕಾಶವೇ ಸಿಗಲಾರದಂತಹ ಪರಿಸ್ಥಿತಿ ಸೃಷ್ಟಿಸಿದ ದಲಿತ-ದ್ರೋಹಿ ಪಕ್ಷ ಕಾಂಗ್ರೆಸ್ (Congress) ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ಧಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ (Hubballi) ಆಯೋಜಿಸಿದ್ದ ‘ಬಲವರ್ಧನೆಗಾಗಿ ಭೀಮ ಸಮಾವೇಶ’ ಕಾರ್ಯಕ್ರಮದಲ್ಲಿ ಮಾತನಾಡಿ, ಜಮ್ಮು, ಕಾಶ್ಮೀರದಂತಹ ಪ್ರಮುಖ ರಾಜ್ಯದಲ್ಲಿ ಎಸ್ಸಿ, ಎಸ್ಟಿಗಳಿಗೆ ಮನ್ನಣೆಯೇ ಇಲ್ಲದಂತಹ ಪರಿಸ್ಥಿತಿಗೆ ನೂಕಿತ್ತು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು. ಇದನ್ನೂ ಓದಿ: ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ
Advertisement
ಎಸ್.ಸಿ/ಎಸ್.ಟಿ ಜನಾಂಗಕ್ಕೆ ಅವಕಾಶವೇ ಸಿಗಲಾರದಂತಹ ಪರಿಸ್ಥಿತಿ ಸೃಷ್ಟಿಸಿದ ದಲಿತ-ದ್ರೋಹಿ ಪಕ್ಷ ಕಾಂಗ್ರೆಸ್ pic.twitter.com/Tb96SBSEeZ
— Pralhad Joshi (@JoshiPralhad) February 14, 2024
Advertisement
ಆ ರಾಜ್ಯದಲ್ಲಿ ಇದೀಗ ಎಲ್ಲವನ್ನೂ ಸರಿ ಮಾಡಿದ್ದೇವೆ. ಎಸ್ಸಿ, ಎಸ್ಟಿಗಳಿಗೆ ಮತ್ತು ಒಬಿಸಿಗಳಿಗೆ ಆರಕ್ಷಣೆ ಒದಗಿಸಿದೆ. ಸ್ವಲ್ಪ ತಡವಾದರೂ ಪರಿಣಾಮಕಾರಿ ಆಗಿ ಕಾನೂನು ಮತ್ತು ಸಂವಿಧಾನಾತ್ಮಕ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
Advertisement
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಲಾಢ್ಯ ಭಾರತವನ್ನು ಕಟ್ಟುವ ಸಂಕಲ್ಪವನ್ನು ಬಿಜೆಪಿ ಹೊಂದಿದೆ. ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: Rajyasabha Polls: ಕಾಂಗ್ರೆಸ್‌ನಿಂದ ಕರ್ನಾಟಕದ ಮೂವರಿಗೆ ಟಿಕೆಟ್
Advertisement
ಡಾ. ಭೀಮರಾವ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲೆಂದು ಅವರ ಜನ್ಮಸ್ಥಳ, ಶಿಕ್ಷಣ ಸ್ಥಳ, ಪರಿನಿಬ್ಬಾಣ ಸ್ಥಳ, ದೀಕ್ಷಾ ಭೂಮಿ, ಚೈತ್ಯ ಭೂಮಿಗಳನ್ನು ಪಂಚತೀರ್ಥಗಳನ್ನಾಗಿ ಗುರುತಿಸಿ ಬಿಜೆಪಿ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಧ್ಯೇಯಕ್ಕೆ ಅನುಗುಣವಾಗಿ ಸಮಾಜದಲ್ಲಿ ಏಕತೆ ನೆಲೆಸಲೆಂದು, ಸಮಾಜದ ಪ್ರತಿ ವರ್ಗಕ್ಕೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ದೊರಕಲೆಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ಅವರು ದೇಶಕ್ಕೆ ಅರ್ಪಿಸಿರುವ ಹಲವಾರು ಜನಪರ ಯೋಜನೆಗಳು ಇದಕ್ಕೆ ನಿದರ್ಶನವಾಗಿವೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು. ಇದನ್ನೂ ಓದಿ: ಪಶ್ವಿಮ ಬಂಗಾಳದಲ್ಲಿ ಬಿಜೆಪಿ V/S ಪೊಲೀಸ್ ಸಂಘರ್ಷ- ರಾಜ್ಯಾಧ್ಯಕ್ಷ ಸುಕಾಂತ್ ಅಸ್ವಸ್ಥ
ಕಾರ್ಯಕ್ರಮದಲ್ಲಿ ಕೋಲಾರದ ಸಂಸದರಾದ ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಾಸಕರು ಹಾಗೂ ಎಸ್.ಸಿ. ಮೋರ್ಚಾದ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ಛಲವಾದಿ ನಾರಾಯಣಸ್ವಾಮಿ, ರಾಜ್ಯ ಎಸ್.ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕಾತಾಳ, ಮಾರುತಿ ದೊಡ್ಡಮನಿ, ರಾಜು ಕೋಟೆನವರ, ರಾಜು ಕಾಂಬಳೆ, ಡಾ. ಕ್ರಾಂತಿಕಿರಣ ಉಪಸ್ಥಿತರಿದ್ದರು.