ಮುಂಬೈ: ಸಾರ್ವಜನಿಕ ಪ್ರದೇಶದಲ್ಲಿಯೇ ಕೇಂದ್ರ ಸಚಿವ ರಾಮ್‍ದಾಸ್ ಅಠಾವಳೆ ಅವರನ್ನು ಯುವಕನೊಬ್ಬ ಥಳಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಅಂಬರ್‍ನಾಥ್ ನಗರದಲ್ಲಿ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ಪ್ರವೀಣ್ ಗೋಸಾವಿ ಎಂಬ ಯುವಕ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಅಲ್ಲಿ ಸೇರಿದ್ದ ಜನರು ಯುವಕನನ್ನು ಹಿಂದಕ್ಕೆ ಎಳೆದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಅಸ್ವಸ್ಥಗೊಂಡು ಬಿದ್ದಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಘಟನೆಯ ವಿವರ:
ಸಚಿವರು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಸಂವಿಧಾನ ಸಮರ್ಪಣಾ ದಿನದ ನಿಮಿತ್ತ ಶನಿವಾರ ರಾತ್ರಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿ ಮರಳುತ್ತಿದ್ದರು. ಅಲ್ಲಿಯೇ ಇದ್ದ ಪಕ್ಷದ ಯುವ ವಿಂಗ್ ಕಾರ್ಯಕರ್ತ ಗೋಸಾವಿ ಸಚಿವರ ಮೇಲೆ ಎಗರಿದ್ದಾನೆ. ಬಳಿಕ ಅವರನ್ನು ದೂಡಿ, ಮುಖದ ಮೇಲೆ ಬಾರಿಸಿದ್ದಾನೆ ಎಂದು ವರದಿಯಾಗಿದೆ.
Advertisement
#WATCH Maha: People thrash Pravin Gosavi, a worker of the youth wing of Republican Party of India, who slapped Union Minister & party leader Ramdas Athawale at an event in Thane y'day. Gosavi has been admitted to a hospital. FIR registered against him, investigation on. (08.12) pic.twitter.com/zvYmNaV8Wi
— ANI (@ANI) December 9, 2018
Advertisement
ಸಚಿವರ ಬೆಂಬಲಿಗರು ತಕ್ಷಣವೇ ಯುವಕನನ್ನು ಎಳೆದು ಗುಂಪುಗೂಡಿ ಹಿಗ್ಗಾಮುಗ್ಗಾ ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ಯುವಕ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದದಾರೆ.
Advertisement
ಸಚಿವರ ಮೇಲೆ ಹಲ್ಲೆ ಖಂಡಿಸಿ ಬಂದ್‍ಗೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಮುಖಂಡರು ಕರೆ ನೀಡಿದ್ದಾರೆ. ಉದ್ದೇಶ ಪೂರ್ವಕವಾಗಿ ಸಚಿವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
Mumbai: Republican Party of India(A) members gather in front of Ramdas Athawale's residence after he was slapped by a person at an event in Thane; RPI leader says, "It was a pre-planned attack. Mastermind should be nabbed. We've called for a Maharashtra Bandh for tomorrow(9 Dec)" pic.twitter.com/UpLgmtwm1a
— ANI (@ANI) December 8, 2018
Members of the Republican Party of India (Athawale) called for a statewide bandh today (December 9) after their party chief and Union Minister Ramdas Athawale was slapped during an event in Ambarnath city
Read @ANI Story | https://t.co/diGYbh4gj3 pic.twitter.com/BbTrhrmOjr
— ANI Digital (@ani_digital) December 8, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv