ನವದೆಹಲಿ: ಅವನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗತಿವಾರ್ ಅವರನ್ನು ಮಂತ್ರಿಗಿರಿಯಿಂದ ವಜಾ ಮಾಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇ0ದ್ರ ಫಡ್ನವೀಸ್ ಅವರಿಗೆ ಮನೇಕಾ ಗಾಂಧಿ ಪತ್ರ ಬರೆದಿದ್ದಾರೆ. ವನ್ಯ ಜೀವಿಗಳನ್ನು ರಕ್ಷಿಸುವ ಸ್ಥಾನದಲ್ಲಿದ್ದು, ಅವನಿ ಹತ್ಯೆಗೆ ಅವಕಾಶ ನೀಡಿರುವುದು ದುರಂತ. ಹೀಗಾಗಿ ಸಚಿವ ಸುಧೀರ್ ಮುಂಗತಿವಾರ್ ಅವರನ್ನು ಅರಣ್ಯ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಅರಣ್ಯ ಅಧಿಕಾರಿಗಳು ಪ್ರಾಣಿಗಳನ್ನು ರಕ್ಷಿಸಲು ಇರುವುದೇ ಹೊರತು, ಹತ್ಯೆ ಮಾಡಲು ಸೂಚಿಸಲು ಅಲ್ಲ. ಮಕ್ಕಳ ಅಭಿವೃದ್ಧಿ, ಏಳಿಗೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶ್ರಮಿಸುತ್ತದೆ. ಅದರಂತೆ ಅರಣ್ಯ ಇಲಾಖೆ ವನ್ಯ ಜೀವಿಗಳ ಸಂರಕ್ಷಣೆಗೆ ಶ್ರಮಿಸಬೇಕು ಎಂದು ಕಿಡಿಕಾರಿದ್ದಾರೆ.
Advertisement
I am deeply saddened by the way tigress Avni has been brutally murdered in #Yavatmal, #Maharashtra. #Justice4TigressAvni https://t.co/hX6wuf62Ec
— Maneka Sanjay Gandhi (@Manekagandhibjp) November 4, 2018
Advertisement
ಏನಿದು ಪ್ರಕರಣ?:
ಕಳೆದ ಎರಡು ವರ್ಷಗಳಿಂದ 14 ಮಂದಿಯನ್ನು ತಿಂದು ಹಾಕಿದ್ದ ಹೆಣ್ಣು ಹುಲಿ ಅವನಿಯನ್ನು ನವೆಂಬರ್ 2ರಂದು ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ಹತ್ಯೆ ಮಾಡಲಾಗಿತ್ತು. ಆದರೆ ಸೆಪ್ಟಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಅವನಿ ಹೆಣ್ಣು ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸುವಂತೆ ಅನುಮತಿ ನೀಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಅವನಿ ಹತ್ಯೆ ಬಳಿಕ ಅದರ ಜೊತೆಗಿದ್ದ ಎರಡು ಹುಲಿ ಮರಿಗಳನ್ನು ರಕ್ಷಿಸಲಾಗಿದೆ.
Advertisement
2012 ರಲ್ಲಿ ಯವತ್ಮಾಲ್ ಕಾಡಿನಲ್ಲಿ ಅವನಿ ಹೆಣ್ಣು ಹುಲಿ ಮೊದಲಿಗೆ ಕಾಣಿಸಿಕೊಂಡಿತ್ತು. 14 ಮಂದಿಯನ್ನು ಕೊಂದಿದ್ದ ದೇಹಗಳು ಕೂಡ ಕಾಡಿನಲ್ಲಿ ಪತ್ತೆಯಾಗಿತ್ತು. ಅದರಲ್ಲಿ 5 ಮಂದಿಯ ಸಾವಿಗೆ ಈ ಹುಲಿಯೇ ಕಾರಣ ಎಂಬುದು ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ಸಮೀಕ್ಷೆಗಳ ಪ್ರಕಾರ ಕೆಲ ವರ್ಷಗಳಿಂದ ಆ ಅರಣ್ಯ ಪ್ರದೇಶದಲ್ಲಿ ಅವನಿ ಬಿಟ್ಟರೆ ಗಂಡು ಹುಲಿಯೊಂದು ವಾಸವಾಗಿರುವುದು ತಿಳಿದುಬಂದಿದೆ. ಮೃತಪಟ್ಟವರಲ್ಲಿ ಒಬ್ಬರ ದೇಹದಲ್ಲಿ ಮಾತ್ರ ಆ ಹುಲಿಯ ಡಿಎನ್‍ಎ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Shafat Ali Khan has killed 3 tigers, at least 10 leopards, a few elephants and 300 wild boar in Chandrapur, #Maharashtra. He is a criminal known for supplying guns to anti- nationals and for a suspected case of murder in #Hyderabad.
— Maneka Sanjay Gandhi (@Manekagandhibjp) November 4, 2018