ಮಂಡ್ಯ: ಜನರ ಆರ್ಶೀವಾದದಿಂದ ಚುನಾವಣೆಯಲ್ಲಿ (Election) ಗೆದ್ದು ಕೇಂದ್ರದಲ್ಲಿ ಸಚಿವನಾಗಿದ್ದೇನೆ. ದೊಡ್ಡ ಮಟ್ಟಿನ ಆಸೆ ಇಟ್ಟುಕೊಂಡು ಮಂಡ್ಯ ಜನರು ನನಗೆ ಆರ್ಶೀವಾದ ಮಾಡಿದ್ದೀರಿ. ಎಷ್ಟೇ ಕೆಲಸದ ಒತ್ತಡ ಇದ್ದರೂ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದೇನೆ, ಜನರ ಆಸೆಯನ್ನು ಈಡೇರಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
Advertisement
ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲೂಕಿನ ಹೊಡಕಹಳ್ಳಿ ಗ್ರಾಮದ ಬಳಿ ಚನ್ನಪಟ್ಟಣ-ಮೈಸೂರು ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಅವರು ಮಾತನಾಡಿದರು. ಮಂಡ್ಯ ಜನರು ನನ್ನ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ್ದಾರೆ. ನಾನು ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಯುವ ಜನರಿಗೆ ಕೆಲಸ ರೂಪಿಸಲು ಇಂದು ಸಹ ಸಭೆ ಮಾಡಿದ್ದೇನೆ. ಆ ನಿಟ್ಟಿನಲ್ಲಿ ನನ್ನ ಇಲಾಖೆಯ ಮೂಲಕ ಸುದೀರ್ಘ ಕೆಲಸ ಮಾಡುತ್ತಿದ್ದೇನೆ ಎಂದರು.
Advertisement
Advertisement
ಇನ್ನೂ ರಾಜ್ಯದಲ್ಲಿ ಬಾಣಂತಿಯರ ಸಾವು ನಿರಂತರವಾಗಿ ನಡೆಯುತ್ತಿದೆ, ಮಂಡ್ಯ ಲೋಕಸಭಾ ಕ್ಷೇತ್ರದ 8 ತಾಲೂಕಿನ ಪ್ರತಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಮಾಡಿಸಲು ಚಿಂತನೆ ಮಾಡಲಾಗಿದೆ. ಈ ಬಗ್ಗೆ ಕೂಡ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 10 ಲಕ್ಷದ ಸೂಟ್ ಧರಿಸುವವರಿಂದ ʻಶೀಷ ಮಹಲ್ʼ ಪ್ರಸ್ತಾಪ ಸೂಕ್ತವಲ್ಲ – ಮೋದಿಗೆ ಕೇಜ್ರಿವಾಲ್ ತಿರುಗೇಟು
Advertisement
ಕೆ.ಆರ್ ಪೇಟೆ ತಾಲೂಕಿನ ಅಭಿವೃದ್ಧಿ ಸಮಸ್ಯೆಯನ್ನ ಜನತೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಏನಾದರೂ ಅನುದಾನ ತರಬಹುದಾ? ಎಂದು ಚರ್ಚೆ ಮಾಡಿದ್ದೇವೆ. ಮೈಸೂರು ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯನ್ನ ಮೇಲ್ದರ್ಜೆಗೆ ಏರಿಸಲು ಕೂಡ ಚರ್ಚೆ ಮಾಡಿದ್ದೇವೆ. ರಾಜ್ಯದ ಆಡಳಿತ ಪಕ್ಷದ ಶಾಸಕರ ಕ್ಷೇತ್ರದಲ್ಲೇ ಅಭಿವೃದ್ಧಿ ಕಾಣುತ್ತಿಲ್ಲ. ಸರ್ಕಾರ ಆಶ್ರಯ ಯೋಜನೆ ಮನೆಗಳನ್ನ ಬಿಡುಗಡೆ ಮಾಡಿಲ್ಲ, ಗ್ರಾಮ ಪಂಚಾಯತಿಗೆ ಅನುಧಾನ ನೀಡಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ ಎಂಬ ಭಾವನೆಯನ್ನ ಜನರು ಮರೆಯುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೆಬೆಲ್ಸ್ ವಿರುದ್ಧ ನಡ್ಡಾಗೆ ವಿಜಯೇಂದ್ರ ದೂರು-ಶೀಘ್ರವೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಈ ನಡುವೆ ಬಸ್ ದರ ಕೂಡ ಏರಿಕೆ ಮಾಡಿದ್ದಾರೆ. ಸದ್ಯದಲ್ಲೇ ನೀರು ಹಾಗೂ ಹಾಲಿನ ದರ ಕೂಡ ಹೆಚ್ಚಳ ಮಾಡಲಿದ್ದಾರೆ. ಆದರೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವುದಿಲ್ಲ. ನಮ್ಮ ಪಂಚರತ್ನ ಯೋಜನೆ ಬಗ್ಗೆ ಜನರು ಅರ್ಥ ಮಾಡಿಕೊಳ್ಳಲಿಲ್ಲ, ನಮ್ಮ ಕಾರ್ಯಕ್ರಮ ಬಗ್ಗೆ ಜನರು ಚಿಂತನೆ ಮಾಡಲಿಲ್ಲ. ಗ್ಯಾರಂಟಿ ಯೋಜನೆಯ 2,000 ರೂ. ನಿಂದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವೇ? 2,000 ರೂ. ಕೊಟ್ಟು ಬೆನ್ನು ತಟ್ಟಿಕೊಳ್ಳುತ್ತಾರೆ. ರಾಜ್ಯದಲ್ಲಿ ಆಡಳಿತ ಸತ್ತು ಹೋಗಿದೆ. ಇಂತಹ ಆಡಳಿತದ ಮಧ್ಯೆ ನಾವು ಬದುಕಬೇಕಿದೆ ನಾವು ಇರುವುದು ಹಳ್ಳಿ ಜನರ ಅಭಿವೃದ್ಧಿಗಾಗಿ ಎಂದು ನುಡಿದರು.
ರಾಜ್ಯದಲ್ಲಿ ಆಡಳಿತ ಇದ್ಯಾ?
ರಾಜ್ಯದಲ್ಲಿ ಹಲವಾರು ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದರ ಬಗ್ಗೆಯೇ ರಾಜಕೀಯವಾಗಿ ಚರ್ಚೆ ನಡೀತಿದೆ. ರಾಜ್ಯದಲ್ಲಿ ಆಡಳಿತ ಇದ್ಯಾ? ಎಂದು ಸಚಿವರು ಪ್ರಶ್ನಿಸಿದರು. ಇದನ್ನೂ ಓದಿ: ಮೈಕ್ ಸಿಕ್ಕಿದೆ, ಜನ ಶಿಳ್ಳೆ ಹೊಡೀತಾರೆ ಅಂತ ಮಾತನಾಡಿದ್ದಾರೆ: ಸೂರಜ್ ವಿರುದ್ಧ ಶ್ರೇಯಸ್ ಕಿಡಿ
ರಾಜ್ಯದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಆತ್ಮಹತ್ಯೆ ಕುರಿತು ಮಾತನಾಡಿದ ಅವರು, ಇವತ್ತು ಒಬ್ಬರು ಗದಗದಲ್ಲಿ ತೀರಿಕೊಂಡಿದ್ದಾರೆ, ಇನ್ಯಾರೋ ಒಬ್ಬರು ದಯಾಮರಣಕ್ಕೆ ಸಿಎಂರನ್ನ ಕೇಳಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಖಾಶಾ ಶಿಷ್ಯ ಹರಿಹರ ಎಂಎಲ್ಎ ರಾಮಪ್ಪ ಬಿಜೆಪಿ ಸರ್ಕಾರದ ಶಾಸಕರಾಗಿದ್ದರು. ಬಿಜೆಪಿ ಅವಧಿಯಲ್ಲಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೆ, ಆದ್ರೆ ಇನ್ನೂ ಸರ್ಕಾರ ಹಣ ಕೊಟ್ಟಿಲ್ಲ. ಹಾಗಾಗಿ ಆತ್ಮಹತ್ಯೆಗೆ ಅನುಮತಿ ಕೊಡಿ ಅಂತೇಳಿ ಸರ್ಕಾರವನ್ನು ಕೇಳಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಹಿಂದೆ ಆಡಳಿತದಲ್ಲಿ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿತ್ತು. ಅಂತಹ ರಾಜ್ಯವನ್ನ ಯಾವ ಪರಿಸ್ಥಿತಿಗೆ ತಂದಿದ್ದಾರೆ? ಜನತೆಯೂ ಕೂಡ ಇದರ ಬಗ್ಗೆ ಗಮನಕೊಡಬೇಕು. ಸರ್ಕಾರದ ಬೂಟಾಟಿಕೆ ಮಾತುಗಳನ್ನ ಜಾಹೀರಾತು ಮೂಲಕ ಕೊಡ್ತಿದ್ದಾರೆ. ಆ ಜಾಹೀರಾತಿಗೂ ಜನರ ತೆರಿಗೆ ಹಣವನ್ನ ಹೊಳೆ ರೀತಿ ಹರಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.