– ಚಲುವರಾಯಸ್ವಾಮಿಯನ್ನ ಮಂತ್ರಿ ಮಾಡಲು 50 ಜನ ಶಾಸಕರನ್ನ ಸೇರಿಸಿದ್ದು ನಾನು ಎಂದ ಕೇಂದ್ರ ಸಚಿವ
ಮಂಡ್ಯ: ನಾನು ಸಿಎಂ ಆಗುವಾಗ ಚಲುವರಾಯಸ್ವಾಮಿ (Chaluvaraya Swamy) ನೋಡಿಕೊಂಡು ಎಂಎಲ್‌ಎಗಳು ಬಂದ್ರಾ? ಅಥವಾ ನನ್ನ ನೋಡಿಕೊಂಡು ಬಂದ್ರಾ? ಅನ್ನೋದಕ್ಕೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಸಿದ್ಧ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಕುಮಾರಸ್ವಾಮಿ ಸಿಎಂ (Chief Minister) ಆಗಲು ನಾನು ಕಾರಣ ಇಲ್ಲ ಎಂದರೆ ಧರ್ಮಸ್ಥಳಕ್ಕೆ ಬಂದು ಆಣೆ-ಪ್ರಮಾಣ ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದ್ದ ವಿಚಾರಕ್ಕೆ ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಆಣೆ ಮಾಡಲು ತಯಾರಿದ್ದೇನೆ. ನಾನು ಸಿಎಂ ಆಗುವಾಗ ಚಲುವರಾಯಸ್ವಾಮಿ ನೋಡಿ ಎಂಎಲ್‌ಎಗಳು ಬಂದ್ರಾ ಏನು ಅಂತ. ಇದು ಸುಳ್ಳು ಚಲುವರಾಯಸ್ವಾಮಿಯನ್ನ ಮಂತ್ರಿ ಮಾಡಲು ಶ್ರಮ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.
ತಾನು ಮಂತ್ರಿ ಆಗಲು ಚಲುವರಾಯಸ್ವಾಮಿ ಮಧ್ಯರಾತ್ರಿ ಮೂರು ಗಂಟೆವರೆಗೆ ನನ್ನನ್ನ ಬಿಟ್ಟಿಲ್ಲ. ಅವರನ್ನ ಮಂತ್ರಿ ಮಾಡಲು 50 ಜನ ಶಾಸಕರನ್ನು ಸೇರಿಸಿದ್ದೆ. ನಾನು ಪಟ್ಟಿರುವ ಶ್ರಮವನ್ನು ಚಲುವರಾಯಸ್ವಾಮಿ ಮರೆಯಬಾರದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇದನ್ನೂ ಓದಿ: 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ – ಹಲವು ಮಹತ್ವದ ನಿರ್ಣಯ ಸಾಧ್ಯತೆ
ಇನ್ನೂ ಚಲುವರಾಯಸ್ವಾಮಿಗೆ ಇರುವ ಚಟಗಳು ನನಗೆ ಇಲ್ಲ, ಮಂಡ್ಯದಲ್ಲಿ (Mandya) ಕೇಳಿದ್ರೆ ಚಲುವರಾಯಸ್ವಾಮಿ ಚಟಗಳ ಬಗ್ಗೆ ಹೇಳುತ್ತಾರೆ. ಚಲುವರಾಯಸ್ವಾಮಿ ಎಷ್ಟು ಮನೆ ಹಾಳು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 2ನೇ ವಿಮಾನ ನಿಲ್ದಾಣಕ್ಕೆ ಬಿಡದಿಯಲ್ಲಿ 5,000 ಎಕ್ರೆ ಜಮೀನು ಕೊಟ್ರೆ ಆಗುತ್ತಾ? ಯಾರ ಒತ್ತಡ ಅನ್ನೋದು ಗೊತ್ತಿಲ್ಲ: ಪರಮೇಶ್ವರ್
ಆಣೆ-ಪ್ರಮಾಣಕ್ಕೆ ಆಹ್ವಾನ:
ಇದಕ್ಕೂ ಮುನ್ನ ಮಂಡ್ಯದಲ್ಲಿ ಮಾತನಾಡಿದ್ದ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರನ್ನು ಮೊದಲ ಬಾರಿಗೆ ಸಿಎಂ ಮಾಡಲು ನಾನು ಶ್ರಮಪಟ್ಟಿದ್ದೇನೆ. ಒಂದು ವೇಳೆ ನಾನು ಶ್ರಮಪಡದೇ ಅವರ ಸ್ವಂತ ಶ್ರಮದಿಂದ ಸಿಎಂ ಆಗಿದ್ದೇನೆ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದರು.
ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಸಿಎಂ ಆಗುವಾಗ ನಾನು ಎಲ್ಲರನ್ನೂ ಒಗ್ಗೂಡಿಸಿದ್ದೇನೆ. ಸ್ವತಃ ದೇವೇಗೌಡರೇ (HD Devegowda) ನನ್ನ ಈ ವಿಚಾರವಾಗಿ ಬೈದಿದ್ದಾರೆ. ನಾನು ಕುಮಾರಸ್ವಾಮಿ ಸಿಎಂ ಆಗಲು ಶ್ರಮ ಪಟ್ಟಿದ್ದೇನೆ. ನಾವು ಅವರೊಟ್ಟಿಗೆ ರಾತ್ರಿ ಎಲ್ಲಾ ಇದ್ದಿದ್ದು, ಅವರನ್ನು ಸಿಎಂ ಮಾಡಲು ಹೊರತು ಬೇರೆಯಾವ ವಿಚಾರಕ್ಕೂ ಅಲ್ಲ. ನಾನು ಅವರನ್ನು ಸಿಎಂ ಮಾಡಲು ಶ್ರಮ ಪಟ್ಟಿಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಅಂತ ಆಹ್ವಾನ ನೀಡಿದ್ದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ
ಮುಂದುವರೆದು.. ನನ್ನಿಂದ ಅವರ ಆರೋಗ್ಯ ಹಾಳಾಗಿಲ್ಲ. ಅವರ ವೈಯಕ್ತಿಕ ಸಮಸ್ಯೆಗಳಿಂದ ನಿದ್ದೆ ಮಾಡದೇ ಅವರ ಆರೋಗ್ಯ ಹಾಳಾಗಿದೆ. ಅವರ ಚಟಗಳ ಬಗ್ಗೆ ಆತ್ಮಸಾಕ್ಷಿ ಮಾಡಿಕೊಳ್ಳಲಿ. ಬೇಕಿದ್ದರೆ ಅವರು ಹಾಗೂ ನಾನು ಇಬ್ಬರೇ ಕೂತು ಸ್ವಚರಿತ್ರೆಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಬರಲು ಹೇಳಿ ಎಂದು ಚಲುವರಾಯಸ್ವಾಮಿ ಪಂಥ್ವಾಹನ ನೀಡಿದ್ದರು. ಇದನ್ನೂ ಓದಿ: ಪಂಜಾಬ್ ಬಿಜೆಪಿ ನಾಯಕನ ಮನೆಯಲ್ಲಿ ಸ್ಫೋಟ ಕೇಸ್ – ಬಂಧಿತ ಆರೋಪಿಗೆ ಲಾರೆನ್ಸ್ ಬಿಷ್ಣೋಯ್ ಲಿಂಕ್