– ಸಿದ್ದರಾಮಯ್ಯ ಜಾಯಮಾನ ನನ್ನದಲ್ಲ, ಅವರಂತೆ ಸುಳ್ಳು ಹೇಳಿಲ್ಲ
ಬೆಂಗಳೂರು: ಈ ರೀತಿಯ ಬ್ಲ್ಯಾಕ್‌ಮೇಲರ್ ಬೆಂಗಳೂರು ನಗರದ ಸುತ್ತ ಯಾರ ಜತೆ ಸೇರಿ ಯಾವ ರೀತಿ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ, ಇದಕ್ಕೆ ದಾಖಲೆ ಇದೆ ಎಂದು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಉತ್ತರ ಕೊಡಬೇಕು. ವಿಷ್ಯ ಕ್ರೋಢೀಕರಿಸದೇ ಮಾತಾಡಲ್ಲ ನಾನು. ಆ ಲೆಟರ್ ಚೆನ್ನಾಗಿ ಪ್ರಿಪೇರ್ ಮಾಡಿದ್ದಾರೆ. ನಿನ್ನೆ ಸಂಜೆ ಎಲ್ಲಿ ಹೋಗಿದ್ರು ಅವರು ಅದೂ ಗೊತ್ತಿದೆ. ಯಾವ ರೀತಿ ಲೆಟರ್ ರೆಡಿ ಮಾಡಬೇಕೋ ಆ ರೀತಿ ಮಾಡಿ ಬಿಟ್ಟಿದ್ದಾರೆ. ನಾನು ದಾಖಲೆ ಇಟ್ಕೊಂಡೇ ನಿನ್ನೆ ಮಾತಾಡಿದ್ದೆ. ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿ 25 ವರ್ಷಗಳಿಂದ ಇಲ್ಲಿದ್ದಾರೆ. ಯಾರ‍್ಯಾರನ್ನು ಹಿಡಿದು ಇಲ್ಲಿಗೆ ಬಂದ್ರು ಅಂತಾ ಗೊತ್ತಿದೆ. ಅವರ ಬಗ್ಗೆ ಮಾತಾಡಿ ಅವರನ್ನು ಯಾಕೆ ದೊಡ್ಡವರಾಗಿ ಮಾಡಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು: ಸಿ.ಟಿ.ರವಿ
ಈ ಥರದ ಭಾಷೆ ಬಳಕೆ ಅವರ ಸಂಸ್ಕೃತಿ ತೋರಿಸುತ್ತೆ. ಯರ‍್ಯಾರ ಜತೆ ಇವರ ಸಂಬಂಧ ಇದೆ ಗೊತ್ತಿಲ್ವಾ? ಒಬ್ಬ ಕೇಂದ್ರದ ಮಂತ್ರಿ ಜತೆ ಹೇಗೆ ಮಾತಾಡಬೇಕು ಇವರು? ಸರ್ಕಾರ ಮೆಚ್ಚಿಸಲು ಇಂಥ ಅಧಿಕಾರಿಗಳನ್ನು ಇಟ್ಕೊಂಡಿದ್ದಾರೆ. ದ್ವೇಷದ ರಾಜಕೀಯ ಅನ್ನೋದು ಸಿದ್ದರಾಮಯ್ಯ ಆಡಳಿತದಲ್ಲಿ ಎಲ್ಲಿಗೆ ಹೋಗಿದೆ ಎಂದು ಎಡಿಜಿಪಿ ವಿರುದ್ಧ ಕಿಡಿಕಾರಿದರು. ನನ್ನ ರಾಜೀನಾಮೆ ಕೇಳ್ತಿದ್ದಾರೆ ಸಿದ್ದರಾಮಯ್ಯ (Siddaramaiah). ಅವರ ಮೆಚ್ಚಿಸಲು ನಾನು ರಾಜೀನಾಮೆ ಕೊಡಬೇಕಾ? ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿಲ್ಲ ಅಂದ್ಮೇಲೆ ರಾಜೀನಾಮೆ ಯಾಕೆ ಕೊಡಲಿ? ಸುಳ್ಳು ಹೇಳ್ತಿರೋದು ನಾನಲ್ಲ, ಸಿದ್ದರಾಮಯ್ಯ. ನನಗೂ ಅವರಿಗೂ ಇರುವ ವ್ಯತ್ಯಾಸ ಇಷ್ಟೇ. ನಾವು ದೇವರಿಗೆ ಹೆದರಿ ಜೀವನ ಮಾಡ್ತಿರೋರು ಎಂದು ಟಾಂಗ್ ಕೊಟ್ಟರು.
ನಾನು ಆ ಅಧಿಕಾರಿ ಬರೆದ ಪತ್ರಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ. ನಾನು ಕ್ರಿಮಿನಲ್ಲೋ, ಆರೋಪಿಯೋ ಅಂತಾ ಅಂಥವರಿಂದ ಯಾಕೆ ಸರ್ಟಿಫಿಕೇಟ್ ತಗೊಳ್ಳಲಿ? ನಾನು ನಿನ್ನೆ ಮಾತಾಡಿದ ವಿಷಯಕ್ಕೆ ದಾಖಲೆ ಇದೆ. ಒಬ್ಬ ಈ ರೀತಿಯ ಬ್ಲ್ಯಾಕ್‌ಮೇಲರ್ ಬೆಂಗಳೂರು ನಗರದ ಸುತ್ತ ಯಾರ ಜತೆ ಸೇರಿ ಯಾವ ರೀತಿ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ. ಇದಕ್ಕೆ ದಾಖಲೆ ಇದೆ. ಆಂಧ್ರದ ಮನುಷ್ಯ ಹಿಮಾಚಲ ಪ್ರದೇಶದ ಕೇಡರ್. ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡದೇ ಕೆಲವರ ಮೂಲಕ ಇಲ್ಲಿದ್ದಾರೆ. ಅಲ್ಲಿಯ ವಾತಾವರಣ ಸೆಟ್ ಆಗಲ್ಲ ಅಂತಾ ಇಲ್ಲಿ ಇದ್ದಾರೆ. ಅಂಥವರ ಬಗ್ಗೆ ಚರ್ಚೆ ಮಾಡೋದು ಅನಾವಶ್ಯಕ, ಅವರನ್ಯಾಕೆ ದೊಡ್ಡವರಾಗಿ ಮಾಡಲಿ ಎಂದು ಎಡಿಜಿಪಿ ಚಂದ್ರಶೇಖರ್ (ADGP Chandrashekhar) ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ; ತಾಯಿ ದರ್ಶನಕ್ಕೆ ನಿರ್ಬಂಧ
ಚುನಾವಣಾ ಬಾಂಡ್ ಪಾಲಿಟಿಕ್ಸ್ ಬಗ್ಗೆ ಮಾತನಾಡಿ, ಆಯಾ ರಾಜ್ಯಗಳಿಗೆ ಹೋಗಿ ಎಲ್ಲ ಕೇಂದ್ರ ಸಚಿವರ ಮೇಲೂ ಎಫ್‌ಐಆರ್ ಹಾಕಿಸಿ. ಎಲ್ಲರೂ ರಾಜೀನಾಮೆ ಕೊಡಬೇಕು ಅಂತಾ ಹೇಳಿ. ಈ ಥರದ ಹೊಸ ಸಂಪ್ರದಾಯ ಶುರು ಮಾಡಿ, ಚೆನ್ನಾಗಿರುತ್ತೆ ಎಂದು ತಿರುಗೇಟು ನೀಡಿದರು.
ನಾನು ಏಕಾಂಗಿ ಹೋರಾಟ ಮಾಡ್ತಿದ್ದೀನಿ, ಯಾರನ್ನೂ ಸಹಾಯಕ್ಕೆ ಇಟ್ಕೊಂಡಿಲ್ಲ. ಅವರು ಎಷ್ಟು ಜನ ಮಂತ್ರಿಗಳು, ವಕೀಲರನ್ನು ಇಟ್ಕೊಂಡಿದ್ದಾರೆ ಗೊತ್ತಾ? ಸಿದ್ದರಾಮಯ್ಯ ನಿರಂತರವಾಗಿ ಮುಡಾ ಪ್ರಕರಣದಲ್ಲಿ ಸುಳ್ಳು ಹೇಳ್ಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಜಾಯಮಾನ ನನಗೆ ಗೊತ್ತಿಲ್ವಾ? ನಾನು ಗಂಗೇನಹಳ್ಳಿ ಪ್ರಕರಣದಲ್ಲಿ ಇರೋದನ್ನೇ ಹೇಳಿದೀನಿ. ಸಿದ್ದರಾಮಯ್ಯ ಥರ ಸುಳ್ಳು ಹೇಳಿಲ್ಲ ಎಂದು ತಿರುಗೇಟು ನೀಡಿದರು.