ಬೆಂಗಳೂರು: ರಾಜ್ಯ ರಾಜಕೀಯಕ್ಕೆ ನಾನು ಬರುತ್ತೇನೆ ಎಂದು ಸಂಕ್ರಾಂತಿ ಹಬ್ಬದ ದಿನವೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಘೋಷಿಸಿದ್ದಾರೆ.
ರಾಜ್ಯ ರಾಜಕೀಯದಿಂದ ನಾನು ದೂರು ಸರಿಯೋದಿಲ್ಲ. ನಾನು ರಾಜಕಾರಣದಲ್ಲಿ ಇದ್ದೇನೆ. ನಾನು ಎಲ್ಲಿ ಇರಬೇಕು ಅಂತ ತೀರ್ಮಾನ ಮಾಡೋದು ರಾಜ್ಯದ ಜನತೆ. ನಾವು ಮೈತ್ರಿಯ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯದಲ್ಲಿ ಒಳ್ಳೆ ಸರ್ಕಾರ ತರಬೇಕು ಅನ್ನೋದು. ವೈಯಕ್ತಿಕವಾಗಿ ನನ್ನ ಉದ್ದೇಶ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಅಮೃತಗೌಡಗೆ ಬೆದರಿಕೆ – 2 ಫೋನ್ ಸ್ವಿಚ್ ಆಫ್ ಮಾಡಿ ಕೈ ನಾಯಕ ರಾಜೀವ್ ಗೌಡ ಪರಾರಿ
ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಅಂತ ಗಮನಿಸುತ್ತಿದ್ದೇನೆ. ಒಳ್ಳೆ ಸರ್ಕಾರ ತಂದು ಜನತೆ ನೆಮ್ಮದಿಯಿಂದ ಇರಬೇಕು. ಆ ನಿಟ್ಟಿನಲ್ಲಿ ನಾಡಿನ ಜನತೆ ನಾನು ಯಾವ ಸ್ಥಾನದಲ್ಲಿ ಇರಬೇಕು ಅಂತ ತೀರ್ಮಾನ ಮಾಡೋದು ಅವರು. ನನ್ನ ಕೈಯಲ್ಲಿ ಇಲ್ಲ. ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದ್ರು ತಿಳಿದುಕೊಂಡಿದ್ರೆ, ನಾನು ದೂರ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ರಾಜಕಾರಣದಲ್ಲಿ ಇರ್ತೀನಿ. ಕೇಂದ್ರದಲ್ಲಿ ಪ್ರಧಾನಿಗಳು ಹುದ್ದೆ ಕೊಟ್ಟಿದ್ದಾರೆ. ಆ ಎರಡು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡೋಕೆ ಈಗಾಗಲೇ ಫೌಂಡೇಶನ್ ಹಾಕಿದ್ದೇನೆ. ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅಂತ ತೀರ್ಮಾನ ಮಾಡ್ತೀನಿ. ರಾಜ್ಯ ರಾಜಕೀಯಕ್ಕೆ ಬರಲೇಬೇಕಾಗುತ್ತದೆ. ಯಾವಾಗ ಅಂತ ತೀರ್ಮಾನ ಮಾಡ್ತೀನಿ ಎಂದು ತಿಳಿಸಿದರು.
ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡನಿಂದ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸರ್ಕಾರ ಬಂದ ನಂತರ ನಿರಂತರವಾಗಿ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡೋದು ಜಾಸ್ತಿ ಆಗಿದೆ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಅಧಿಕಾರದಲ್ಲಿ ಇರುವ ಮೇಲಿನವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾನೂನುಬಾಹಿರ ತೀರ್ಮಾನ ಮಾಡಿಸ್ತಿದ್ದಾರೆ. ಸರ್ಕಾರ ಸರಿ ಇಲ್ಲದೆ ಹೋದ್ರೆ ಇವೆಲ್ಲ ನಡೆಯುತ್ತದೆ. ಮೇಟಿ ಸರಿಯಾಗಿದ್ದರೆ ಇದ್ಯಾವುದು ಆಗೊಲ್ಲ ಅನ್ನೋದು ನನ್ನ ಅಭಿಪ್ರಾಯ. ಸಿಎಸ್ ಅವರು ಅದರ ಬಗ್ಗೆ ರಿಯಾಕ್ಷನ್ ಮಾಡೇ ಇಲ್ಲ. ಇವತ್ತು ಹಬ್ಬ ಇರೋದ್ರಿಂದ ಮಾತಾಡಿಲ್ಲ. ನಾಳೆ ಈ ಬಗ್ಗೆ ಮಾತಾಡ್ತೀನಿ ಎಂದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
ಯಾರೇ ತಪ್ಪು ಮಾಡಿದ್ರು ಕ್ರಮ ಆಗಬೇಕು. ಯಾವುದೇ ಪಕ್ಷದವರು ಹೀಗೆ ಮಾಡಿದಾಗ ಕಠಿಣವಾಗಿ ಕ್ರಮ ಸರ್ಕಾರ ತೆಗೆದುಕೊಂಡಿದ್ದರೆ ಇಂತಹ ಘಟನೆಗಳು ನಡೆಯೋದಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಇದನ್ನ ತೆಗೆದುಕೊಳ್ಳಬೇಕು. ಯಾವ ಪಕ್ಷದ ಕಾರ್ಯಕರ್ತ ಅನ್ನೋದಕ್ಕೆ ಅಧಿಕಾರಿಗಳ ಜತೆ ಹೇಗೆ ನಮ್ಮ ನಡವಳಿಕೆ ಇರಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡೋಕೆ ಆಗೊಲ್ಲ. ಅದನ್ನ ಬಹಳ ನೋಡಿದ್ದೇನೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾನೂನುಬಾಹಿರ ಕೆಲಸ ಮಾಡಿಸ್ತಾರೆ. ವಿಕಾಸಸೌಧದಲ್ಲಿ ಕಟ್ಟಡ ಕಟ್ಟೋವಾಗ ನಿಯಮ ಮೀರಿ ಕಂಟ್ರಾಕ್ಟರ್‌ಗಳು ಕೆಲಸ ಮಾಡದೇ ಹೋದ್ರು ಬಿಲ್ ಕೊಟ್ಟಿದ್ದಾರೆ. 8 ವರ್ಷಗಳ ನಂತರ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಅಂತ ಲೋಕಾಯುಕ್ತ ತೀರ್ಪು ಕೊಟ್ಟಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಕೆಲಸ ಮಾಡಬಾರದು. ಸರ್ಕಾರದ ನಿಯಮಾವಳಿ ಉಲ್ಲಂಘನೆ ಆಗದಂತೆ ಆತ್ಮಸಾಕ್ಷಿಗಾಗಿ ಕೆಲಸ ಮಾಡಿ. ಎಲ್ಲಾದ್ರು ಕೆಲಸ ಮಾಡಬೇಕು. ಪೋಸ್ಟಿಂಗ್‌ಗಾಗಿ ಜನಪ್ರತಿನಿಧಿಗಳ ಒತ್ತಡಕ್ಕೆ ಅಧಿಕಾರಿಗಳು ಒಳಗಾಗಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕೃಷಿಕರು ಹಬ್ಬದ ಮೂಲಕ ಸುಗ್ಗಿಯ ಕಾಲ ನೋಡ್ತಾರೆ. ಈ ಬಾರಿ ಕಾಲ ಕಾಲಕ್ಕೆ ಹವಾಮಾನದಲ್ಲಿ ವ್ಯತ್ಯಾಸ ಆಗದೆ ರೈತರಿಗೆ ಸಹಾಯ ಆಗಲಿ ಎಂದು ಸಂಕ್ರಾಂತಿ ಶುಭಾಶಯ ಕೋರಿದರು.


