– ದೆಹಲಿಯಲ್ಲಿ ಯೋಗ ಮಾಡಿದ ಕೇಂದ್ರ ಸಚಿವ
ನವದೆಹಲಿ: ನೋಯ್ಡಾದ ಬಿಹೆಚ್‌ಇಎಲ್ ಟೌನ್‌ಶಿಪ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನ (International Yoga Day 2024) ಸಮಾರಂಭದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಭಾಗಿಯಾಗಿದ್ದರು. ಸ್ವತಃ ಯೋಗ ಮಾಡಿ ವಿಶೇಷ ದಿನವನ್ನು ಆಚರಿಸಿದರು.
Advertisement
ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಹೆಚ್‌ಡಿಕೆ ಭಾಗಿಯಾದರು. ಬಿಹೆಚ್ಇಎಲ್‌ನ ಸಿಬ್ಬಂದಿ ಮತ್ತು ಸ್ಥಳೀಯರು ಸಾಥ್ ನೀಡಿದರು. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್, ಕ್ರಿಕೆಟಿಗ ಮನಿಷ್ ಪಾಂಡೆ ಸಾಥ್
Advertisement
Advertisement
ಯೋಗ ದಿನದ ಕುರಿತು ಮಾತನಾಡಿದ ಹೆಚ್‌ಡಿಕೆ, 2014 ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಆಚರಿಸಲಾಗುತ್ತಿದೆ. ಮೈಸೂರಿನ ಅರಮನೆ ಮೈದಾನದಲ್ಲಿ ಮೋದಿ ಅವರು ಮೊದಲ ಬಾರಿಗೆ ಯೋಗ ಮಾಡಿದರು. ಯೋಗಕ್ಕೆ ಪ್ರಧಾನಿಗಳ ಪ್ರೋತ್ಸಾಹ ಹೆಚ್ಚು ಪ್ರಚುರಪಡಿಸಿದೆ. ಕಾಯಿಲೆಗಳಿಗೆ ಯೋಗ ಸ್ವಲ್ಪ ಮುಕ್ತಿ ನೀಡುತ್ತದೆ. ಯೋಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಆರೋಗ್ಯವಂತವಾಗಿರಲು ನಿತ್ಯ ಯೋಗ ಅಳವಡಿಸಿಕೊಳ್ಳಬೇಕು. ಕಾಶ್ಮೀರದಲ್ಲಿ ಮೋದಿ ಅವರು ಯೋಗ ಮಾಡುತ್ತಿದ್ದಾರೆ. ಇದು ಒಳ್ಳೆಯ ಸಂದೇಶ, ಪ್ರೇರಣೆ ಎಂದು ತಿಳಿಸಿದರು.
Advertisement
ಮದ್ಯದ ದರ ಇಳಿಕೆಗೆ ಸರ್ಕಾರದ ಅಧಿಸೂಚನೆ ಕುರಿತು ಪ್ರತಿಕ್ರಿಯಿಸಿ, ದರ ಇಳಿಸ್ತಾರ? ಧ್ಯಾನೋದಯ ಆಗಿದಿಯಾ ಅಂತಾ? ಆಸೆಯೇ ದುಃಖಕ್ಕೆ ಕಾರಣ ಎಂದು ಬುದ್ಧ ಒಂದು ಮಾತು ಹೇಳಿದ್ದರು. ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎನ್ನುವುದು ನಮ್ಮ ಮುಖ್ಯಮಂತ್ರಿಗಳ ಸಂದೇಶ ಎನ್ನುವುದು ನನ್ನ ಅಭಿಪ್ರಾಯ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: International Yoga Day: ‘ಯೋಗ’ವೆಂಬ ಗಿನ್ನಿಸ್ ರೆಕಾರ್ಡ್ – ಯಾವ ವರ್ಷ, ಎಲ್ಲಿ ದಾಖಲೆಯಾಗಿತ್ತು?
ಡಿಸಿಎಂ ಒಂದೂವರೆ ವರ್ಷದಿಂದ ಚನ್ನಪಟ್ಟಣಕ್ಕೆ ಹೋಗಿಲ್ಲ. ಈಗ ಚನ್ನಪಟ್ಟಣದ ಬಗ್ಗೆ ಮಮತೆ ಬಂದಿದೆ. ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿವರೆಗೂ ಅಭಿವೃದ್ಧಿ ಮಾಡಬೇಡಿ ಎಂದು ತಡೆದವರು ಯಾರು? ಸಂಸದರಾಗಿ ಅವರ ಸಹೋದರನ ಕೊಡುಗೆ ಏನು? ಅವರು ಯಾರು ಬೇಕಾದರೂ ಅಭ್ಯರ್ಥಿಯಾಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ನಮ್ಮ ಕಡೆಯಿಂದ ಅಭ್ಯರ್ಥಿ ಯಾರು ಎಂದು ಕಾಲ ನಿರ್ಧರಿಸಲಿದೆ ಎಂದರು.
ದರ್ಶನ ಪ್ರಕರಣದ ಬಗ್ಗೆ ನಾನು ಮಾತನಾಡುವುದಿಲ್ಲ. ತನಿಖೆ ನಡೆಯುತ್ತಿರುವುದನ್ನು ನೀವೇ ತೋರಿಸುತ್ತಿದ್ದೀರಿ ಎಂದಷ್ಟೇ ಉತ್ತರಿಸಿದರು.