– ನೀವೇನು ಭಿಕ್ಷುಕರಲ್ಲ.. ದಯಾಮರಣ ಯಾಕೆ ಕೇಳ್ತೀರಾ ಎಂದು ಪ್ರಶ್ನೆ
ಬೆಂಗಳೂರು: ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಕರೆ ನೀಡಿದರು.
Advertisement
ಕಿಯೋನಿಕ್ಸ್ ವೆಂಡರ್ಸ್ಗಳಿಂದ ದಯಾ ಮರಣಕ್ಕೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ, ಸರ್ಕಾರದ ವಿರುದ್ಧ ಕಿಡಿಕಾರಿದರು. ನಾನು 60% ಕಮಿಷನ್ ಆರೋಪ ಮಾಡಿದಾಗ ಸರ್ಕಾರ, ಸಿಎಂ, ದಾಖಲೆ ಕೊಡಿ ಅಂತ ಹೇಳಿದ್ರು. ಹಂಗಾಮಿ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಏನ್ ಹೇಳಿದ್ದಾರೆ. ಪರ್ಸೆಂಟೇಜ್ ಎಷ್ಟು ಇದೆ ಅಂತ ಅವರೇ ಹೇಳಿದ್ದಾರೆ. ಇದಕ್ಕಿಂತ ದಾಖಲಾತಿ ಸಾಕ್ಷಿ ಬೇಕಾ ಸಿಎಂಗೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ – ಶರತ್ ಬಚ್ಚೇಗೌಡ
Advertisement
Advertisement
ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡಗೆ ಹೇಳ್ತೀನಿ. ತಪ್ಪು ಮಾಡಿದವರ ಮೇಲೆ ಆಕ್ಷನ್ ತಗೊಳ್ಳಿ. 18 ತಿಂಗಳಲ್ಲಿ ಮಾಡಿದ ಕೆಲಸಕ್ಕೆ ಪೇಮೆಂಟ್ ಕೊಡದೇ ಹೋದರೆ ಅವರ ಬದುಕು ಏನಾಗಬೇಕು? ತಪ್ಪು ಮಾಡಿದವನಿಗೆ ಏನ್ ಬೇಕೋ ಕ್ರಮ ಮಾಡಿ. ಜನಪ್ರತಿನಿಧಿಗಳ ಅಕ್ರಮ ಮಾಡಿದ್ರೆ ಅವರ ಮೇಲೆ ಆಕ್ಷನ್ ತಗೊಳ್ಳಿ. ತನಿಖೆ ನಡೆ ವಾಸ್ತವಾಂಶ ಹೊರಗೆ ತೆಗೆಯೋಕೆ ಎಷ್ಟು ತಿಂಗಳು ಬೇಕು? ವರ್ಷಗಳೇ ಬೇಕಾ? ಕಿಯೋನಿಕ್ಸ್ ವೆಂಡರ್ಸ್ಗಳಿಗೆ ಹಣ ಬಿಡುಗಡೆಗೆ ಆಗ್ರಹಿಸಿದರು.
Advertisement
ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ. ಈ ಸರ್ಕಾರದಲ್ಲಿ ಸಾರ್ವಜನಿಕರ ಹಣ ಲೂಟಿ ಆಗ್ತಿದೆ. ಗುತ್ತಿಗೆದಾರರಿಗೆ ಮನವಿ ಮಾಡ್ತೀನಿ. ಗುತ್ತಿಗೆದಾರರು ಈ ರಾಜ್ಯ ಉಳಿಸಬೇಕು ಅಂತ ಇದ್ದರೆ, ಗುತ್ತಿಗೆದಾರರಲ್ಲಿ ಒಗ್ಗಟ್ಟು ಇದ್ದರೆ ಒಂದು ವರ್ಷ ಗುತ್ತಿಗೆದಾರರು ಯಾರು ಕೆಲಸ ಮಾಡಬೇಡಿ. ಈ ಸರ್ಕಾರದವರು ಅಂಧ್ರದವರನ್ನೋ ಯಾರನ್ನ ಕರೆದುಕೊಂಡು ಮಾಡಿಸಿಕೊಂಡು ಬರ್ತಾರೋ, ಪ್ಯಾಕೇಜ್ ಕೊಟ್ಟು ಮಾಡಿಸ್ತಾರೋ ನೋಡೋಣ. ಬರಲಿ ಯಾರು ಬಂದು ಮಾಡ್ತಾರೋ ಮಾಡಲಿ. ರಾಜ್ಯದಲ್ಲಿ ಕೆಟ್ಟ ಆಡಳಿತ ನಡೆಯುತ್ತಿದೆ. ಗುತ್ತಿಗೆದಾರರಿಗೆ ಕೈ ಜೋಡಿಸಿ ಮನವಿ ಮಾಡ್ತೀನಿ. ನೀವು ನಿಮ್ಮಲ್ಲಿ ಗುಂಪು ಮಾಡಿಕೊಂಡು, ನಿಮ್ಮಲ್ಲಿ ಒಡಕು ಬಂದರೆ ನಿಮ್ಮನ್ನೆ ಉಪಯೋಗ ಮಾಡಿಕೊಳ್ತಾರೆ. ನೀವು ಕಷ್ಟ ಅನುಭವಿಸುತ್ತಿದ್ದೀರಾ. ಇದೆಲ್ಲ ಕ್ಲೀನ್ ಆಗಬೇಕಾದ್ರೆ ಒಂದು ವರ್ಷ ಯಾರು ಗುತ್ತಿಗೆ ತೆಗೆದುಕೊಳ್ಳಬೇಡಿ. ಯಾರು ಕೆಲಸ ಮಾಡಬೇಡಿ ನಿಲ್ಲಿಸಿಬಿಡಿ. ಹೇಗೂ ಹೊಸ ಕೆಲಸ ಸರ್ಕಾರ ಕೊಡ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಮಾಡಿರೋ ಕೆಲಸಕ್ಕೆ ಕೇಳ್ತಿರೋದು. ಹೀಗಾಗಿ ಹಣ ಬರೋವರೆಗೂ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕಿಯೋನಿಕ್ಸ್ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡ್ರೆ ಪ್ರಿಯಾಂಕ್, ಶರತ್ ಬಚ್ಚೇಗೌಡ ಕಾರಣ: ರಾಷ್ಟ್ರಪತಿಗಳಿಗೆ ಪತ್ರ
ದಯಾ ಮರಣಕ್ಕೆ ಯಾಕೆ ಅರ್ಜಿ ಹಾಕ್ತೀರಾ? ಯಾಕೆ ಆತ್ಮಹತ್ಯೆ ಮಾಡಿಕೊಳ್ತೀರಾ. ನೀವು ತಪ್ಪು ಮಾಡಿದ್ದೀರಾ? ತಪ್ಪು ಮಾಡಿರೋದು ಈ ಸರ್ಕಾರ. ಅದರ ವಿರುದ್ಧ ಹೋರಾಟ ಮಾಡಿ. ದೃಢ ನಿರ್ಧಾರ ಮಾಡಿ ಹೋರಾಟ ಮಾಡಿ. ನೀವೇನು ಭಿಕ್ಷುಕರಲ್ಲ. ಕೆಲಸ ಮಾಡಿದ್ದೀರಾ ಹಣ ಕೇಳ್ತಿದ್ದೀರಾ. ಅದಕ್ಕೆ ಯಾಕೆ ದಯಾ ಮರಣ ಕೇಳ್ತೀರಾ. ಪ್ರಾಮಾಣಿಕವಾಗಿ ಕೆಲಸ ಮಾಡಿ ಯಾಕೆ ದಯಾ ಮರಣ ಕೇಳ್ತೀರಾ. ಪ್ರಾಮಾಣಿಕವಾಗಿ ಕೆಲಸ ಮಾಡದೆ ಬಿಲ್ ಮಾಡಿ ಹಣ ಹೊಡೆದಿರೋರು ಇದ್ದಾರೆ. ಅಧಿಕಾರಿಗಳು, ದೊಡ್ಡ ದೊಡ್ಡ ಗುತ್ತಿಗೆದಾರರು ಕೆಲಸವೇ ಮಾಡದೇ ಹಣ ಮಾಡಿರೋದು ಇದ್ದಾರೆ. ನೀವು ಕೆಲಸ ಮಾಡಿದ್ದೀರಾ. ಯಾಕೆ ಆತ್ಮಹತ್ಯೆ ಮಾಡಿಕೊಳ್ತೀರಾ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಉಡಾಫೆ ಹೇಳಿಕೆ ಬಿಡಿ. ಏನೇನು ಆಗಿದೆ, ಅದನ್ನ ಸರಿ ಮಾಡೋಕೆ ಪ್ರಯತ್ನ ಮಾಡಿ. ಗುತ್ತಿಗೆದಾರರು ತಮ್ಮ ಬದುಕು ಸರಿಪಡಿಸುಕೊಳ್ಳಬೇಕಾದ್ರೆ ಪ್ರತಿಭಟನೆ ಮಾಡೋ ದೃಢ ನಿರ್ಧಾರ ಮಾಡಿ. ಎಷ್ಟೋ ಕುಟುಂಬದಲ್ಲಿ ಹೆಣ್ಣುಮಕ್ಕಳು ಒಡೆವೆ ತಗೊಂಡು ಹೋಗಿ ಬ್ಯಾಂಕ್ ನಲ್ಲಿ ಇಟ್ಟು ಗುತ್ತಿಗೆದಾರು ಕೆಲಸ ಮಾಡಿದ್ದಾರೆ. ಸಾವಿರಾರ ಗುತ್ತಿಗೆದಾರರು ಬೀದಿಗೆ ಬಂದಿದ್ದಾರೆ. ಯಾರ ಹತ್ರ ಹೇಳುವ ಹಾಗಿಲ್ಲ ಬಿಡುವ ಆಗಿಲ್ಲ. ಈ ಸರ್ಕಾರದ 6 ತಿಂಗಳಿಂದ ಎಲ್‌ಒಸಿ ಬಿಡುಗಡೆ ಮಾಡಿಲ್ಲ. ಗ್ಯಾರಂಟಿಯಿಂದ ನುಡಿದಂತೆ ನಡೆದಿದ್ದೇವೆ ಅಂತಾರೆ. ಯಾರ್ ಇಲ್ಲ ಅಂದರು. ನಿಮ್ಮನ್ನು ಬಿಟ್ರೆ ಇನ್ಯಾರು ಇಲ್ಲ ನುಡಿದಂತೆ ನಡೆದವರು. ನೀವು ಒಬ್ಬರೇ. ಈ ಸರ್ಕಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹ ಆಗಿಲ್ಲ ಎಂದು ಆರೋಪಿಸಿದರು.