UPSCಯಿಂದ ನೇಮಕಗೊಂಡ ಅಧಿಕಾರಿಗಳು ಡಕಾಯಿತರು: ಕೇಂದ್ರ ಸಚಿವ

Public TV
1 Min Read
Bisheswar Tudu

ಭುವನೇಶ್ವರ್: ಕೇಂದ್ರ ಲೋಕಸೇವಾ ಆಯೋಗದ (UPSC) ಮೂಲಕ ನೇಮಕಗೊಂಡಿರುವ ಹಲವು ಅಧಿಕಾರಿಗಳು ಡಕಾಯಿತರು (Dacoits) ಎಂದು ಕೇಂದ್ರ ಸಚಿವ ಬಿಶೇಶ್ವರ್ ತುಡು (Bisheswar Tudu) ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಬಾಲಸೋರ್ ಜಿಲ್ಲೆಯ ಬಲಿಪಾಲ್ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯುಪಿಎಸ್‍ಸಿ ಮೂಲಕ ನೇಮಕಗೊಂಡವರು ಅತ್ಯಂತ ಜ್ಞಾನವುಳ್ಳ ವ್ಯಕ್ತಿಗಳಾಗಿದ್ದು, ಯಾವಾಗಲೂ ಉನ್ನತ ಹುದ್ದೆಗಳಲ್ಲಿರುತ್ತಾರೆ ಎಂಬ ಕಲ್ಪನೆ ನನಗಿತ್ತು. ಆದರೆ ಅಲ್ಲಿಂದ ಅರ್ಹತೆ ಪಡೆದವರಲ್ಲಿ ಹೆಚ್ಚಿನವರು ಡಕಾಯಿತರು ಎಂದು ಈಗ ನನಗೆ ಅನಿಸುತ್ತದೆ. ಆದರೆ ಎಲ್ಲಾ ಅಧಿಕಾರಿಗಳು ಅದೇ ರೀತಿ ಎಂದು ಹೇಳುವುದಿಲ್ಲ. ಅವರಲ್ಲಿ ಹಲವರು ಡಕಾಯಿತರು ಎಂದರು.

OMR EXAM

ಯುಪಿಎಸ್‍ಸಿ ಕಚೇರಿಯು ದೆಹಲಿಯಲ್ಲಿರುವ ನಿವಾಸದ ಹಿಂಭಾಗದಲ್ಲಿದೆ. ಆರಂಭದಲ್ಲಿ ಅದರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದೆ. ಆದರೆ ಅದು ಈಗ ಬದಲಾಗಿದೆ ಎಂದ ಅವರ, ಕೋಳಿ ಕಳ್ಳನನ್ನು ಶಿಕ್ಷಿಸಬಹುದು, ಆದರೆ ಖನಿಜ ಮಾಫಿಯಾವನ್ನು ವ್ಯವಸ್ಥೆಯು ರಕ್ಷಿಸುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡು – ಜಮ್ಶೆಡ್‌ಪುರದಲ್ಲಿ ಹಿಂಸಾಚಾರ

ಇಂತಹ ವಿದ್ಯಾವಂತರಿದ್ದರೆ, ನಮ್ಮ ಸಮಾಜ ಏಕೆ ಭ್ರಷ್ಟಾಚಾರ, ಅನ್ಯಾಯದಲ್ಲಿ ಮುಳುಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕತೆಯ ಕೊರತೆಯೇ ಇದಕ್ಕೆ ಕಾರಣ. ನಮ್ಮಲ್ಲಿ ಆಧ್ಯಾತ್ಮಿಕ ಶಿಕ್ಷಣ ಮತ್ತು ಆಲೋಚನೆಗಳ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಯುರೋಪ್ ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಫ್ರಾನ್ಸ್ ಅಧ್ಯಕ್ಷ

Share This Article