ನವದೆಹಲಿ: ಭಾರತವು 2023ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5ಜಿ ಸೇವೆಗಳನ್ನು ಪಡೆಯಲಿದೆ ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು 5ಜಿ ಸ್ಪೆಕ್ಟ್ರಮ್ ಹರಾಜು ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದ ಅವರು ಟೆಲಿಕಾಂ ಡಿಜಿಟಲ್ ಬಳಕೆಯ ಪ್ರಾಥಮಿಕ ಮೂಲವಾಗಿದೆ. ಟೆಲಿಕಾಂನಲ್ಲಿ ವಿಶ್ವಾಸಾರ್ಹ ಪರಿಹಾರವನ್ನು ತರಲು ಇದು ಬಹಳ ಮುಖ್ಯವಾಗಿದೆ ಎಂದರು.
ಭಾರತವು ತನ್ನದೇ ಆದ 4ಜಿ ಸ್ಟಾಕ್‍ಗಳಾದ ರೇಡಿಯೋ ಉಪಕರಣಗಳು ಮತ್ತು ಹ್ಯಾಂಡ್‍ಸೆಟ್‍ನಂತಹದ್ದನ್ನು ಹೊಂದಿದೆ. ಇದೀಗ 5ಜಿ ಸಿದ್ಧವಾಗಿದೆ. ಇದು 4ಜಿಗಿಂತಲೂ 10ಪಟ್ಟು ವೇಗ ಮತ್ತು ಸಾಮರ್ಥ್ಯವನ್ನು ಹೊಂದಿದ್ದು, 2023ರ ಮಾರ್ಚ್‍ನಲ್ಲಿ ಇದರ ಸೇವೆ ಪಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಅಂತಿಮವಾಗಿ ದೂರಸಂಪರ್ಕ ಇಲಾಖೆಯ 5ಜಿ ತರಂಗಾಂತರ ಹರಾಜಿಗೆ ಅನುಮೋದನೆ ನೀಡಿದೆ. ಅದರ ಮೂಲಕ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ 5ಜಿ ಸೇವೆಗಳನ್ನು ಒದಗಿಸಲು ಬಿಡ್‌ದಾರರಿಗೆ ಸ್ಪೆಕ್ಟ್ರಮ್ ಅನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ರಾಜ್ಯ ಪ್ರವಾಸಕ್ಕೂ ಮುನ್ನ ಬಿಜೆಪಿ ಪ್ಲಾನ್ – ರೋಡ್ ಶೋ, ಸಮಾವೇಶಕ್ಕೆ ಸಿದ್ಧತೆ