ಬೆಂಗಳೂರು: ಕೇಂದ್ರದ ನೂತನ ಬಜೆಟ್ (Union Budget 2025) ಕುರಿತ ವಿಶ್ಲೇಷಣೆ ಮತ್ತು ಚರ್ಚೆಗಳು ದೇಶಾದ್ಯಂತ ಎಲ್ಲ ಕಡೆ ನಡೆಯುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಎಲ್ಲ ಜಿಲ್ಲೆಗಳಲ್ಲಿ, ವಿಭಾಗ ಕೇಂದ್ರಗಳಲ್ಲಿ ಚರ್ಚೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ (Budget) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 8ನೇ ಬಜೆಟ್ ಮಂಡಿಸಿದ್ದು, ಮಧ್ಯಮ ವರ್ಗದವರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು: ಗೂಗಲ್ ಎಕ್ಸ್‌ನ ಸೆಬಾಸ್ಟಿಯನ್ ಭವಿಷ್ಯ
Advertisement
ಈ ಬೆನ್ನಲ್ಲೇ ಇದೇ ಫೆ.15ರಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದು ರಾಜ್ಯದ ಪಕ್ಷದ ಕಚೇರಿಯಲ್ಲಿ ಬಜೆಟ್ ಕುರಿತು ಒಂದು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ನಂತರ ಶಾಂಘ್ರಿಲಾ ಹೋಟೆಲ್‍ನಲ್ಲಿ ಸಮಾಜದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ಸ್, ವೈದ್ಯರು, ಉದ್ಯಮಿಗಳು ಸೇರಿ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: Fashion | ನೈಲ್ ಆರ್ಟ್ ಮಾಡಿಸಿ – ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಇನ್ನಷ್ಟು ಹತ್ತಿರವಾಗಿ!
Advertisement
Advertisement
ಕೇಂದ್ರ ಬಜೆಟ್‍ನಲ್ಲಿ ಎಲ್ಲರಿಗೂ ಆದ ಉಪಯೋಗಗಳು, ಸಮಾಜದ ಎಲ್ಲ ವರ್ಗದವರಿಗೆ ತಿಳಿಯಬೇಕೆಂಬ ಉದ್ದೇಶ ಇದರದ್ದು. ನಂತರ ಪಕ್ಷದ ಮುಖಂಡರು, ಸಂಸದರು, ಶಾಸಕರು ಜಿಲ್ಲೆಗಳಲ್ಲಿ ಸಂವಾದ ನಡೆಸಿ ಬಜೆಟ್ ಸದುಪಯೋಗದ ವಿವರ ನೀಡುತ್ತಾರೆ. ನಿಯುಕ್ತರಾದ ಕೇಂದ್ರದ ಸಚಿವರು ವಿವಿಧ ಕಡೆ ಕೇಂದ್ರ ಬಜೆಟ್ ಕುರಿತ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬಿಜೆಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ರಮೇಶ್ ಜಾರಕಿಹೊಳಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ