ಬಾಲಿವುಡ್ ಸಖತ್ ಆ್ಯಕ್ಟೀವ್ ನಟರಲ್ಲಿ ರಣ್‍ವೀರ್ ಸಿಂಗ್ ಕೂಡ ಒಬ್ಬರು. ತಮ್ಮ ಕ್ರೇಜಿನೆಸ್ ಮೂಲಕ ತಮ್ಮ ಜೊತೆಯಲ್ಲಿರುವವರನ್ನು ಸದಾ ಸಂತೋಷದಿಂದ ಇರಿಸುವ ರಣ್‍ವೀರ್ ಸಿಂಗ್ ಅವರು ಸೋಮವಾರ ದುಬೈ ಎಕ್ಸ್’ಪೋ 2020ರಲ್ಲಿ ಇಂಡಿಯನ್ ಪೆವಿಲಿಯನ್‍ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ರಣವೀರ್ ಅವರೊಂದಿಗೆ ಮಲ್ಹಾರಿ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ.
2016ರಲ್ಲಿ ತೆರೆಕಂಡ ನಟಿ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಹಾಗೂ ರಣ್‍ವೀರ್ ಸಿಂಗ್ ಅಭಿನಯ ಬಾಜಿರಾವ್ ಮಸ್ತಾನಿ ಸಿನಿಮಾ ಬಾಲಿವುಡ್ ಗಲ್ಲಾಪೆಟ್ಟಿಗೆ ಭಾರೀ ಸದ್ದು ಮಾಡಿತ್ತು. ಅಲ್ಲದೇ ಈ ಸಿನಿಮಾದ ಮಲ್ಹಾರಿ ಸಾಂಗ್‍ಗೆ ಸಿನಿ ಪ್ರಿಯರು ಫಿದಾ ಆಗಿದ್ದರು. ಸದ್ಯ ಈ ಸಾಂಗ್‍ಗೆ ರಣ್‍ವೀರ್ ಸಿಂಗ್ ಹಾಗೂ ಅನುರಾಗ್ ಠಾಕೂರ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅನುರಾಗ್ ಠಾಕೂರ್ ಅವರು ರಣವೀರ್ ಅವರೊಂದಿಗೆ ದಿ ಗ್ಲೋಬಲ್ ರೀಚ್ ಆಫ್ ಇಂಡಿಯನ್ ಮೀಡಿಯಾ ಮತ್ತು ಎಂಟರ್‍ಟೈನ್‍ಮೆಂಟ್ ಇಂಡಸ್ಟ್ರಿ ಕುರಿತಂತೆ ಚರ್ಚಿಸಲು ಇಂಡಿಯಾ ಪೆವಿಲಿಯನ್‍ಗೆ ತೆರಳಿದ್ದರು. ಈ ವೇಳೆ ರಣ್‍ವೀರ್ ಸಿಂಗ್ ಅವರು ಅನುರಾಗ್ ಠಾಕೂರ್ ಅವರ ಕೈ ಹಿಡಿದು ಮಲ್ಹಾರಿ ಹಾಡಿಗೆ ಸ್ಟೆಪ್ ಹಾಕುವಂತೆ ಒತ್ತಾಯಿಸಿದರು. ಆಗ ಅನುರಾಗ್ ಠಾಕೂರ್ ಅವರು ರಣ್‍ವೀರ್ ಜೊತೆಗೆ ಮಲ್ಹಾರಿ ಸಾಂಗ್‍ನ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ
View this post on Instagram
ಇದೇ ವೇಳೆ ಮಾತನಾಡಿದ ಅನುರಾಗ್ ಠಾಕೂರ್ ಅವರು, ಮುಂದಿನ ವರ್ಷದ ವೇಳೆಗೆ ಭಾರತವು ಪ್ರಪಂಚದ ಉಪಖಂಡವಾಗಬೇಕು ಎಂದು ನಾನು ಭಾವಿಸುತ್ತೇನೆ. ಇಂದು ಭಾಷೆಯು ಯಾವುದಕ್ಕೂ ಅಡ್ಡಿಯಲ್ಲ. ಹಾಡಿನ ಮೂಲಕ ಸಮಾಜದ ಎಲ್ಲಾ ವರ್ಗದ ಜನರು ಭಾರತದ ಧ್ವನಿಯನ್ನು ಪ್ರತಿಬಿಂಬಿಸುತ್ತಿದ್ದರೆ. ಹಾಡು ಭಾರತೀಯ ಚಲನಚಿತ್ರೋದ್ಯಮದ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು