ಬೆಂಗಳೂರು: ಸಂಜೆ ಆರು ಗಂಟೆ ಆದ್ರೆ ಸಾಕು ಮಹಿಳೆಯರು, ಮಕ್ಕಳು ಏರಿಯಾದಲ್ಲಿ ಓಡಾಡೋಕೆ ಆಗುತ್ತಿಲ್ಲ ಎಂದು ಶಿವಾಜಿನಗರದ ಚಿನ್ನಪ್ಪ ಗಾರ್ಡನ್‍ನಲ್ಲಿರುವ ಮಹಿಳೆಯರು ಕೇಂದ್ರ ಸಚಿವ ಅನಂತ್‍ಕುಮಾರ್ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇಂದು ಇತ್ತೀಚೆಗೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಮನೆಗೆ ಅನಂತ್ ಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂತೋಷ್ ಮನೆಯಿಂದ ಹೊರ ಬಂದ ಸಚಿವರನ್ನು ಭೇಟಿ ಮಾಡಿದ ಸ್ಥಳೀಯ ಮಹಿಳೆಯರು, ಈ ಏರಿಯಾದಲ್ಲಿ ವಾಸ ಮಾಡೋಕೆ ಆಗ್ತಿಲ್ಲ, ಮಕ್ಕಳು ಶಾಲೆ, ಟ್ಯೂಷನ್‍ಗೆ ಹೋಗೋಕೆ ಆಗ್ತಿಲ್ಲ. ಸಂಜೆ ಆದ ಕೂಡಲೇ ರಸ್ತೆ ಬದಿ ಯುವಕ ಗುಂಪೊಂದು ಗಾಂಜಾ ಸೇದುತ್ತಾ ನಿಂತುಕೊಳ್ತಾರೆ. ನೀವು ಯಾಕೆ ಇಲ್ಲಿ ನಿಂತು ಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದರೆ ನಾವು ಕಾಂಗ್ರೆಸ್ ನವರು, ಶಿವಾಜಿ ನಗರದಿಂದ ಬಂದಿದ್ದೇವೆ ಅಂತಾ ಅವಾಜ್ ಹಾಕುತ್ತಾರೆ. ಏನಾದ್ರೂ ಯುವಕರನ್ನು ಹೆಚ್ಚಿಗೆ ಪ್ರಶ್ನೆ ಮಾಡಿದರೆ ಏನು ಮಾಡುತ್ತಾರೆ ಎಂಬ ಭಯ ಆಗುತ್ತದೆ. ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯ ಆಗುತ್ತದೆ ಅಂತಾ ಮಹಿಳೆಯರು ಸಚಿವರಿಗೆ ದೂರು ನೀಡಿದರು.
Advertisement
ಸ್ಥಳೀಯ ಮಹಿಳೆಯರ ದೂರು ಕೇಳಿದ ನಂತರ ಅನಂತ್ ಕುಮಾರ್, ಕೂಡಲೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಏರಿಯಾದ ಚಿತ್ರಣವನ್ನು ತಿಳಿಸಿ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಸೂಚಿಸಿದರು.
Advertisement
https://www.youtube.com/watch?v=3PataTx9Z2U