ಉಡುಪಿ: ಹಠಮಾಡಿ ಸಿಎಂ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡಿದರು. ಇದೇ ಸರ್ಕಾರ ರಾಜ್ಯದಲ್ಲಿ ಮುಂದುವರೆದರೆ ಉಗ್ರ ಕಸಬ್ ಜಯಂತಿಯನ್ನೂ ಆಚರಿಸುತ್ತಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆಯ ಕುಂದಾಪುರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ನಾಡು ನುಡಿಯ ಕಲ್ಪನೆಯಿಲ್ಲ. ಟಿಪ್ಪು ಜಯಂತಿಯನ್ನು ಹಠಮಾಡಿ ಆಚರಣೆ ಮಾಡಿದರು. ಇದೇ ರೀತಿ ಸಿದ್ದರಾಮಯ್ಯ ಸರ್ಕಾರ ಮುಂದುವರೆದರೆ ಕಸಬ್ ಜಯಂತಿಯನ್ನು ಆಚರಿಸುತ್ತಾರೆ. ಇವರು ದೇಶದ್ರೋಹಿಗಳ ಜಯಂತಿಯನ್ನೂ ಆಚರಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.
Advertisement
Advertisement
ನಾವು ಸ್ವಾಭಿಮಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಅಭಿವೃದ್ಧಿಯ ಜೊತೆ ರಕ್ತಕ್ಕೆ ಗೌರವ ಕೊಡುವ ಸರ್ಕಾರ ನಮಗೆ ಬೇಕು. ದೇಶದ್ರೋಹಿಗಳ ಓಟೇ ಕಾಂಗ್ರೆಸ್ಸಿಗೆ ಬೇಕು ಎಂದು ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
Advertisement
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಬೇಕು. ಭಗವಾಧ್ವಜದ ನೇತೃತ್ವದಲ್ಲಿ ಧರ್ಮರಾಜ್ಯ ನಿರ್ಮಾಣವಾಗಬೇಕು. ರಾವಣರಾಜ್ಯ ಹೋಗಬೇಕು ರಾಮರಾಜ್ಯ ನಿರ್ಮಾಣ ಆಗಬೇಕು. ಸಿದ್ದರಾಮಯ್ಯ ಅವರ ದುರಹಂಕಾರಿ ಆಡಳಿತ ಕೊನೆಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
Advertisement
Thousands joined the #ParivartanaYatre in Kundapur, Udupi despite the sweltering sun. Amazed to see the energy & enthusiasm! pic.twitter.com/xBKyFhuVWK
— B.S.Yediyurappa (@BSYBJP) November 13, 2017
ಕುಂದಾಪುರದಲ್ಲಿ ಹಾದು ಹೋಗುವ ಹೆದ್ದಾರಿ ಅಗಲವಾಗುತ್ತಿದೆ. ರೈಲ್ವೆ ಅಭಿವೃದ್ಧಿ ಪಡಿಸಲಾಗುತ್ತಿದೆ. ದೇಶದ ಹಿತಕ್ಕಾಗಿ ದುಡಿಯುತ್ತಿರುವ ಪ್ರಧಾನಿ ಮೋದಿ ಅವರನ್ನು ನಾವೆಲ್ಲ ಬೆಂಬಲಿಸುವ ಮೂಲಕ ಶಕ್ತಿ ತುಂಬಬೇಕಿದೆ. ನಾವೆಲ್ಲ ಅವರ ಜೊತೆಗಿದ್ದೇವೆ ಎಂಬುದನ್ನು ತೋರಿಸಬೇಕಿದೆ.#ParivartanaYatre #Kundapur pic.twitter.com/MR1hRBkndH
— B.S.Yediyurappa (@BSYBJP) November 13, 2017
ನಮ್ಮ ಸರ್ಕಾರ ಇದ್ದಾಗ ಭಾಗ್ಯಲಕ್ಷ್ಮಿ ಯೋಜನೆ ಅನುಕೂಲವನ್ನು 3ಲಕ್ಷ ಹೆಣ್ಣುಮಕ್ಕಳಿಗೆ ತಲುಪಿಸಿದ್ದೆವು. ಈ ಸರ್ಕಾರದ ಅವಧಿಯಲ್ಲಿ ಒಂದು ಲಕ್ಷಕ್ಕೆ ಇಳಿದಿದೆ. ಹೆಣ್ಣುಮಕ್ಕಳು ಹುಟ್ಟುವುದು ಕಡಿಮೆಯಾಗಿದೆಯೇ? ಇಲ್ಲ. ಸರ್ಕಾರಕ್ಕೆ ಆಸಕ್ತಿ ಕಡಿಮೆಯಾಗಿದೆ.#ParivartanaYatre #Kundapur pic.twitter.com/cBMNrmfrhL
— B.S.Yediyurappa (@BSYBJP) November 13, 2017
ಸರ್ಕಾರಿ ಆಸ್ಪತ್ರೆಗಳನ್ನು ಸರಿಯಾಗಿಡದ ಸರ್ಕಾರ, ಖಾಸಗಿ ಆಸ್ಪತ್ರೆಗಳನ್ನೂ ಮುಚ್ಚಿಸಲು ಹೊರಟಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳ ಒಂದು ದಿನದ ಮುಷ್ಕರದಿಂದ ಜನರಿಗೆ ತೊಂದರೆಯಾಗಿದೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.#ParivartanaYatre #Kundapur pic.twitter.com/sNVkZ0LdoK
— B.S.Yediyurappa (@BSYBJP) November 13, 2017
ಕೇರಳದಲ್ಲಿ ನಿನ್ನೆ ಆರೆಸ್ಸೆಸ್ ಕಾರ್ಯಕರ್ತ ಆನಂದ್ ಅವರ ಕೊಲೆಯಾಗಿದೆ. ಕೊಲೆ ಸುಲಿಗೆ ಮೂಲಕ ಕೇರಳದಲ್ಲಿ ನಮ್ಮನ್ನು ಹೆದರಿಸಲು ಸಿಪಿಎಂ ಯತ್ನಿಸುತ್ತಿದೆ. ಆದರೆ ಅದಕ್ಕೆ ನಾವು, ನಮ್ಮ ಕಾರ್ಯಕರ್ತರು ಹೆದರುವುದಿಲ್ಲ. ಅದರ ವಿರುದ್ಧ ದೃಢವಾದ ಹೋರಾಟ ನಡೆಸಲಿದ್ದೇವೆ.#ParivartanaYatre #Kundapur
— B.S.Yediyurappa (@BSYBJP) November 13, 2017
ಉಡುಪಿಯಲ್ಲಿ ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದ ಸಭೆಯನ್ನು ನಾನು ನೋಡಿರಲಿಲ್ಲ. ರಾಜ್ಯದ ಜನ ನೆಮ್ಮದಿಯಿಂದ ಬಾಳುವಂತಾಗಬೇಕು. ಅದಕ್ಕಾಗಿ ಈ ಕಾಂಗ್ರೆಸ್ ಸರಕಾರ ಕಿತ್ತೊಗೆಯಬೇಕು ಎಂಬುದು ಯಾತ್ರೆಯ ಉದ್ದೇಶ. ದೇಶ ಕಾಂಗ್ರೆಸ್ ಮುಕ್ತವಾಗಬೇಕಾದರೆ ರಾಜ್ಯವೂ ಕಾಂಗ್ರೆಸ್ ಮುಕ್ತವಾಗಬೇಕು.#ParivartanaYatre #Udupi pic.twitter.com/QW6tZOsycN
— B.S.Yediyurappa (@BSYBJP) November 12, 2017
ನಿಮ್ಮೆಲ್ಲರ ಆಶೀರ್ವಾದಿಂದ ಮೂರ್ನಾಲ್ಕು ತಿಂಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ರಾಜ್ಯಕ್ಕೆ ಉತ್ತಮ ಮತ್ತು ಪ್ರಾಮಾಣಿಕ ಆಡಳಿತ ನೀಡಬೇಕೆಂಬ ಇರಾದೆಯಿದೆ. ಉಡುಪಿಗೆ ಬಂದರೂ ದೇವಸ್ಥಾನಕ್ಕೆ ಹೋಗಲಿಲ್ಲ. ಮಾಂಸಾಹಾರ ಸೇವಿಸಿ ಧರ್ಮಸ್ಥಳಕ್ಕೆ ಹೋದರು. ಇಂಥವರು ರಾಜ್ಯದ ಮುಖ್ಯಮಂತ್ರಿಯಾಗಿರಬೇಕೆ?#ParivartanaYatre #Udupi
— B.S.Yediyurappa (@BSYBJP) November 12, 2017
ಡಾ.ವಿ.ಎಸ್. ಆಚಾರ್ಯ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಜಿಲ್ಲಾಧಿಕಾರಿ ಕಚೇರಿ, ಕಾಂಕ್ರೀಟ್ ರಸ್ತೆ ಆಗಿದೆ. ಇದಕ್ಕೆ ಅವರು ಕಾರಣ. ಹಿಂದೆ ಉಡುಪಿ ಹೇಗಿತ್ತು ಎಂಬುದು ನಿಮಗೆಲ್ಲ ಗೊತ್ತು. ಅವರಿಗೆ ಉಡುಪಿ ಅಭಿವೃದ್ಧಿಯ ಬಗ್ಗೆ ಅಷ್ಟು ಕಾಳಜಿಯಿತ್ತು.#ParivartanaYatre #Udupi
— B.S.Yediyurappa (@BSYBJP) November 12, 2017
ಚಿನ್ನದ ನಾಡು, ಗಂಧದ ಬೀಡು, ರೇಷ್ಮೆಯ ನಾಡಾದ ನಮ್ಮ ರಾಜ್ಯದಲ್ಲಿ ಅಭಿವೃದ್ಧಿಯ ದೃಷ್ಟಿಕೋನ ಇರಿಸಿಕೊಂಡು ಕೆಲಸ ಮಾಡುವ ಸರ್ಕಾರ ಬೇಕಿದೆ. ನಮ್ಮ ಸರ್ಕಾರ ಇದ್ದಾಗ ನಾವು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ್ದೆವು. ಈ ಸರ್ಕಾರ ಬೆಂಗಳೂರಿನ ಕೆಲವು ಸೈಟ್ ಗಳನ್ನು ಅಡವಿಟ್ಟು ಸಾಲ ತರುವ ಹಂತ ತಲುಪಿದೆ.#ParivartanaYatre #Udupi
— B.S.Yediyurappa (@BSYBJP) November 12, 2017
ಬಿಜೆಪಿಯ ಯಾತ್ರೆಗೆ ಜನರಿಲ್ಲ ಎಂದು ಟೀಕೆ ಮಾಡುವವರೇ, ದಕ್ಷಿಣ ಕನ್ನಡ, ಉಡುಪಿಗೆ ಬಂದು ನೋಡಿ. ಜನ ನಮ್ಮೊಂದಿಗೆ ಇದ್ದಾರೊ ಇಲ್ಲವೊ ನೀವೇ ನಿರ್ಧರಿಸಿ. ಅತ್ಯಾಚಾರದ ಆರೋಪಿ ಕಾಂಗ್ರೆಸ್ಸಿನ ರಾಜ್ಯ ಉಸ್ತುವಾರಿ, ಭ್ರಷ್ಟ ಮುಖ್ಯಮಂತ್ರಿಗಳೇ ನಮಗೆ ಜನ ಬೆಂಬಲ ಇಲ್ಲ ಎಂದು ಟೀಕಿಸುವ ಮೊದಲು ಯೋಚಿಸಿ.#ParivartanaYatre #Udupi
— B.S.Yediyurappa (@BSYBJP) November 12, 2017