ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam Terrorist Attack) ಬಳಿಕ ಶ್ರೀನಗರಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ, ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಉಗ್ರರ ದಾಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಸ್ಥಳಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರು ಅಮಿತ್ ಶಾ ಅವರಿಗೆ ಸೂಚಿಸಿದ್ದರು. ಪ್ರಧಾನಿ ಸೂಚನೆಯಂತೆ ಅಮಿತ್ ಶಾ ಅವರು ಶ್ರೀನಗರಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯ | ಸೌದಿಯಿಂದಲೇ ಮೋದಿ ಕರೆ, ಸ್ಥಳಕ್ಕೆ ಹೊರಟ ಅಮಿತ್ ಶಾ
ಶ್ರೀ ನಗರಕ್ಕೆ ತೆರಳುವ ಮುನ್ನ ಅಮಿತ್ ಶಾ (Amit Shah) ಅವರು ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಈ ಬಗ್ಗೆ ಸಭೆ ಕರೆದಿದ್ದರು. ಸಭೆಯಲ್ಲಿ ಗುಪ್ತಚರ ಬ್ಯೂರೋ ಮುಖ್ಯಸ್ಥ ತಪನ್ ದೇಕಾ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ (47) ಹಾಗೂ ಹಾವೇರಿ ಮೂಲದ ಭರತ್ ಸೇರಿದಂತೆ 30 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಇತರ 12 ಜನ ಗಾಯಗೊಂಡಿದ್ದಾರೆ.
ಈ ವರ್ಷದ ಅಮರನಾಥ ಯಾತ್ರೆಗೆ ದೇಶಾದ್ಯಂತ ನೋಂದಣಿ ನಡೆಯುತ್ತಿರುವಾಗ ಈ ದಾಳಿ ನಡೆದಿದೆ. 38 ದಿನಗಳ ತೀರ್ಥಯಾತ್ರೆ ಜುಲೈ 3 ರಿಂದ ಎರಡು ಮಾರ್ಗಗಳಿಂದ ಪ್ರಾರಂಭವಾಗಲಿದೆ. ಇದನ್ನೂ ಓದಿ: ದುಷ್ಟ ಅಜೆಂಡಾ ಎಂದಿಗೂ ಯಶಸ್ವಿಯಾಗಲ್ಲ, ದಾಳಿಕೋರರನ್ನು ಸುಮ್ಮನೆ ಬಿಡಲ್ಲ: ಗುಡುಗಿದ ಮೋದಿ