ನವದೆಹಲಿ: ದೇಶದ ಆತಂರಿಕ, ಬಾಹ್ಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಉನ್ನತ ಮಟ್ಟದ ಸಭೆ (Meeting) ನಡೆಸುತ್ತಿದ್ದಾರೆ.
Advertisement
ದೇಶದಲ್ಲಿರುವ ಗುಪ್ತಚರ ಇಲಾಖೆಯ (Intelligence Bureau) ಪ್ರಮುಖ ಅಧಿಕಾರಿಗಳ ಜೊತೆಗೆ ಗಂಭೀರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ದೆಹಲಿಯ ರಹಸ್ಯ ಸ್ಥಳದಲ್ಲಿ ಸಭೆ ಆಯೋಜನೆಯಾಗಿದ್ದು, ಗುಪ್ತಚರ ಇಲಾಖೆಯ ಅಧಿಕಾರಿಗಳು ಹೊರತುಪಡಿಸಿ ಯಾರಿಗೂ ಪ್ರವೇಶ ನೀಡಲಾಗಿಲ್ಲ. ಬೆಳಗ್ಗೆ 11 ಗಂಟೆಗೆ ಸಭೆ ಆರಂಭಗೊಂಡಿದ್ದು, ಸಂಜೆ ಐದು ಗಂಟೆ ವರೆಗೂ ಈ ಸಭೆ ನಡೆಯಲಿದೆ. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?
Advertisement
Union Home Minister Amit Shah chairs a high-level meeting of Intelligence Bureau (IB) officers across the country, in Delhi pic.twitter.com/BObZ5yfIEy
— ANI (@ANI) November 9, 2022
Advertisement
ಸಭೆಯಲ್ಲಿ ದೇಶದ ಆತಂರಿಕ ಭದ್ರತೆ, ಬಾಹ್ಯ ಭದ್ರತೆ, ಭಯೋತ್ಪಾದಕರ ಬೆದರಿಕೆಗಳು, ಮಾದಕ ವ್ಯಸನ ಜಾಲ, ಸಂಘಟಿತ ಅಪರಾಧ ಜಾಲ, ಸೈಬರ್ ಸ್ಪೇಸ್ ಅಕ್ರಮ ಬಳಕೆ, ವಿದೇಶಿ ಭಯೋತ್ಪಾದಕರ ಚಲನವಲನಗಳು, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಸಮನ್ವಯದ ಬಗ್ಗೆ ಚರ್ಚೆಯಾಗಲಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತಿ ಇರಲಿದ್ದು, ರಾಜ್ಯಗಳಿಂದಲೂ ಪ್ರಮುಖ ಅಧಿಕಾರಿಗಳು ಭಾಗಿಯಾಗುತ್ತಿದ್ದಾರೆ. ಇದನ್ನೂ ಓದಿ: ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ