Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಾವು ಕಡಿತಕ್ಕೆ ಮುಕ್ತಿ ನೀಡಲು ಸರ್ಕಾರ ಬದ್ಧ – ಚಿಕಿತ್ಸಾ ವ್ಯವಸ್ಥೆ ಸಮರ್ಪಕ ಜಾರಿಗೆ ರಾಜ್ಯಗಳಿಗೆ ಸೂಚನೆ!
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಹಾವು ಕಡಿತಕ್ಕೆ ಮುಕ್ತಿ ನೀಡಲು ಸರ್ಕಾರ ಬದ್ಧ – ಚಿಕಿತ್ಸಾ ವ್ಯವಸ್ಥೆ ಸಮರ್ಪಕ ಜಾರಿಗೆ ರಾಜ್ಯಗಳಿಗೆ ಸೂಚನೆ!

Public TV
Last updated: December 17, 2024 8:53 am
Public TV
Share
6 Min Read
Snake
SHARE

ದೇಶದಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಷ್ಟೇ ಪ್ರತಿ ವರ್ಷವೂ ಹೆಚ್ಚು ಸಾವಿಗೆ ಕಾರಣವಾಗುತ್ತಿರುವುದು ಹಾವು ಕಡಿತ. ಗ್ರಾಮೀಣ ಪ್ರದೇಶದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದರು. ಆದ್ರೆ ಇದರ ಬಗ್ಗೆ ಸರ್ಕಾರ ಅಷ್ಟಾಗಿ ಕ್ರಮ ವಹಿಸುತ್ತಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 81,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಂತೆ ಇದರ ಮೂರರಷ್ಟು ಮಂದಿ ಅಂಗಾಗ ವೈಫಲ್ಯಗಳೂ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದೆಲ್ಲದಕ್ಕೂ ಮುಕ್ತಿ ಕೊಡಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಿದೆ.

ಇತ್ತೀಚೆಗಷ್ಟೇ ಹಾವು ಕಡಿತ ಪ್ರಕರಣಗಳನ್ನು ಕೇಂದ್ರ ಸರ್ಕಾರ ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದ ಬಳಿಕ ರಾಜ್ಯಗಳು ಇದನ್ನು ಸಮರ್ಪಕವಾಗಿ ಜಾರಿಗೆ ತರುವಂತೆ ಸೂಚನೆ ನೀಡಿದೆ. 2030ರ ವೇಳೆಗೆ ಸಾವು ಪ್ರಕರಣಗಳನ್ನು ಶೇ.50 ರಷ್ಟು ಕಡಿಮೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಅದಕ್ಕಾಗಿ ಹಾವು ಕಡಿತವನ್ನು ಅಧಿಸೂಚಿತ ರೋಗಗಳಾಗಿ ಘೋಷಿಸಿ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಹಾವು ಕಡಿತವನ್ನು ವರದಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಹಾವು ಕಡಿತ ಪ್ರಕರಣಗಳ ವರದಿಯನ್ನು ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ. ಈ ವರ್ಷ 9 ತಿಂಗಳ ಅವಧಿಯಲ್ಲಿಯೇ 9,529 ಹಾವು ಕಡಿತ ಪ್ರಕರಣಗಳು ವರದಿಯಾದರೆ, ಕಡಿತದಿಂದ 69 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಹಾವು ಕಡಿತಕ್ಕೆ ಒಳಗಾದವರ ಹಾಗೂ ಈ ಕಡಿತದಿಂದ ಮೃತಪಟ್ಟವರ ಸಮಗ್ರ ಮಾಹಿತಿ ದೊರೆಯದೇ ಇದ್ದುದರಿಂದಾಗಿ ಆರೋಗ್ಯ ಇಲಾಖೆಯು ಫೆಬ್ರವರಿಯಲ್ಲಿ ಹಾವು ಕಡಿತವನ್ನು ಘೋಷಿತ ಕಾಯಿಲೆಯೆಂದು ಗುರುತಿಸಿತ್ತು. ಇದರಿಂದಾಗಿ ಹಾವು ಕಡಿತಕ್ಕೆ ಒಳಗಾಗಿ ಒಳರೋಗಿ ಹಾಗೂ ಹೊರರೋಗಿಗಳಾಗಿ ಆಸ್ಪತ್ರೆಗೆ ಭೇಟಿ ನೀಡಿದವರು, ಮರಣ ಹೊಂದಿದವರ ವಿವರವನ್ನು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಕಡ್ಡಾಯವಾಗಿ ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಡಿ ದಾಖಲಿಸುತ್ತಿವೆ. ಈ ಕ್ರಮವನ್ನು ಇನ್ನಷ್ಟು ಸಮರ್ಪಕವಾಗಿ ಜಾರಿಗೆ ತರಲು ಸೂಚಿಸಿದೆ.

ಹಾವು ಕಡಿತವನ್ನು ಘೋಷಿತ ಕಾಯಿಲೆಯೆಂದು ಗುರುತಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಕ್ರಮದಿಂದ ಹಾವು ಕಡಿತ ಪ್ರಕರಣಗಳ ಮೇಲೆ ನಿಗಾ ಮತ್ತು ನಿರ್ವಹಣೆ ಇಲಾಖೆಗೆ ಸಾಧ್ಯವಾಗಿದ್ದು, ಮಾರ್ಚ್ ಬಳಿಕ ಅಧಿಕ ಸಂಖ್ಯೆಯಲ್ಲಿ ಹಾವು ಕಡಿತ ಹಾಗೂ ಮರಣ ಪ್ರಕರಣಗಳು ವರದಿಯಾಗುತ್ತಿವೆ. 2022ರಲ್ಲಿ ರಾಜ್ಯದಲ್ಲಿ 3,425 ಹಾವು ಕಡಿತ ಪ್ರಕರಣಗಳು ವರದಿಯಾದರೆ, 17 ಮಂದಿ ಕಡಿತದಿಂದ ಮೃತಪಟ್ಟಿದ್ದರು. ಕಳೆದ ವರ್ಷ 6,596 ಪ್ರಕರಣಗಳು ವರದಿಯಾಗಿವೆ. ಕಡಿತಕ್ಕೆ ಒಳಗಾದವರಲ್ಲಿ 19 ಮಂದಿ ಮೃತಪಟ್ಟಿದ್ದರು. ಕೃಷಿ ಕೆಲಸದಲ್ಲಿ ತೊಡಗಿರುವಾಗ ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯಿಂದ 1 ಲಕ್ಷ ಪರಿಹಾರ ನೀಡುವ ಯೋಜನೆ ಜಾರಿಯಲ್ಲಿದೆ. ಇತರರಿಗೂ ಪರಿಹಾರ ಒದಗಿಸುವ ಬಗ್ಗೆ ಆರೋಗ್ಯ ಇಲಾಖೆಯಿಂದ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ.

SNAKE

ಹಾವು ಕಡಿತವನ್ನು ಏಕೆ ʻಅಧಿಸೂಚಿತ ಕಾಯಿಲೆʼ ಎಂದು ಪರಿಗಣಿಸಲಾಗುತ್ತದೆ? ಹಾವು ಕಡಿತಕ್ಕೆ ತಕ್ಷಣದ ಹಾರೈಕೆ ಅಗತ್ಯವಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ರಕ್ತಸ್ರಾವ, ಪಾರ್ಶ್ವವಾಯು, ಅಂಗಾಗ ವೈಫಲ್ಯ ಮಾತ್ರವಲ್ಲದೇ ಸಾವೂ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿಯೇ ಇರುತ್ತದೆ. ಸಾವು ಮತ್ತು ತೀವ್ರತರವಾದ ಅಪಾಯಗಳಿಂದ ರಕ್ಷಣೆ ಮಾಡಲು ಆಂಟಿ ವೆನಮ್‌ ಬಳಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕಾಗಿ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ.

ಭಾರತದಲ್ಲಿ 310ಕ್ಕೂ ಹೆಚ್ಚು ಜಾತಿಯ ಹಾವುಗಳಿದ್ದು, ಅವುಗಳಲ್ಲಿ 66 ವಿಷಕಾರಿ ಮತ್ತು 42 ಸೌಮ್ಯ ವಿಷಕಾರಿ, 23 ಪ್ರಭೇದದ ಹಾವುಗಳು ವಿಷಕಾರಿ ಎಂದು ಗುರುತಿಸಲಾಗಿದೆ. ಅದರಲ್ಲೂ ದೇಶದಲ್ಲಿ ನಾಗರಹಾವು, ಸಾಮಾನ್ಯ ಕ್ರೈಟ್, ರಸೆಲ್ಸ್ ವೈಪರ್ ಮತ್ತು ಗರಗಸ-ಸ್ಕೇಲ್ಡ್ ವೈಪರ್‌ ಹಾವುಗಳನ್ನು ಹೆಚ್ಚು ಅಪಾಯಕಾರಿ ಹಾವುಗಳೆಂದು ಗುರುತಿಸಲಾಗಿದೆ. ಸದ್ಯ ವಾಣಿಜ್ಯವಾಗಿ ಲಭ್ಯವಿರುವ ಆಂಟಿ ವೆನಮ್‌, ಶೇ.80 ರಷ್ಟು ಹಾವು ಕಡಿತದಿಂದ ಮರಣ ಪ್ರಮಾಣವನ್ನು ತಪ್ಪಿಸುತ್ತದೆ ಎಂದು ವರದಿಗಳು ಹೇಳಿವೆ.

ಚಿಕಿತ್ಸಾ ವ್ಯವಸ್ಥೆ ಹೇಗೆ?
ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಹಾವಿನ ನಂಜಿನ ಲಕ್ಷಣಗಳು ವ್ಯಕ್ತಿಗೆ ಕಂಡುಬಂದಲ್ಲಿ ತಕ್ಷಣ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ‘ಆ್ಯಂಟಿ ಸ್ನೇಕ್ ವೆನಮ್’ ಒದಗಿಸಲಾಗುತ್ತಿದೆ. 2030ರ ವೇಳೆಗೆ ಹಾವು ಕಡಿತ ಪ್ರಕರಣ ಹಾಗೂ ಮರಣವನ್ನು ಅರ್ಧದಷ್ಟು ಇಳಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಹಾವು ಕಡಿತಕ್ಕೆ ಒಳಗಾದವರಿಗೆ ಅಂಬುಲೆನ್ಸ್‌ ಸೇವೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.

SNAKE
ಸಾಂದರ್ಭಿಕ ಚಿತ್ರ

ʻಕೃಷಿ ಕೆಲಸ ಸೇರಿ ವಿವಿಧ ಸಂದರ್ಭದಲ್ಲಿ ಹಾವು ಕಡಿತಕ್ಕೆ ಒಳಗಾದವರು ಚಿಕಿತ್ಸೆ ಪಡೆಯುವುದು ವಿಳಂಬವಾದಲ್ಲಿ ಜೀವಕ್ಕೆ ತೊಂದರೆಯಾಗುತ್ತದೆ. ಘೋಷಿತ ರೋಗವೆಂದು ಗುರುತಿಸಿದ್ದರಿಂದ ಹಾವು ಕಡಿತದಿಂದ ಉಂಟಾಗುತ್ತಿದ್ದ ಪ್ರಾಣ ಹಾನಿ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಹಾವು ಕಡಿತದಿಂದ ವ್ಯಕ್ತಿ ಮರಣ ಹೊಂದಿದಲ್ಲಿ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ಮಾಡಿಸಲಾಗುತ್ತಿದೆ. ಇದರಿಂದಾಗಿ ಹಾವು ಕಡಿತದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿದೆ’ ಎಂದು ಇಲಾಖೆ ತಿಳಿಸಿದೆ.

ಹಾವು ಕಡಿತವನ್ನು ಏಕೆ ವರದಿ ಮಾಡಬೇಕು?
ಹಾವು ಕಡಿತ ಪ್ರಕರಣಗಳನ್ನು ವರದಿ ಮಾಡುವುದರಿಂದ ನಿಖರ ಸಂಖ್ಯೆ ನಿರ್ಧರಿಸಲು, ಪ್ರಕರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ಸರ್ಕಾರಕ್ಕೆ ಮಾಹಿತಿ ನೆರವು ಪಡೆಯಲು ಅನುಕೂಲವಾಗುತ್ತದೆ. ಇದರಿಂದ ಯಾವ ಪ್ರದೇಶಗಳಲ್ಲಿ ಹಾವು ಕಡಿತ ಹೆಚ್ಚಾಗುತ್ತದೆ ಎಂಬುದನ್ನು ಕಂಡುಕೊಂಡು ʻಆಂಟಿ ವೆನಮ್‌ʼ ಒದಗಿಸಲು ಸಹಾಯಕವಾಗುತ್ತದೆ.

ಕರ್ನಾಟಕದಲ್ಲಿ ಹಾವು ಕಡಿತ ಪ್ರಕರಣಗಳು
2022 – 17
2023 – 19
2024 – 69

ಕರ್ನಾಟಕದಲ್ಲಿ ಹಾವು ಕಡಿತದಿಂದ ಆದ ಸಾವುಗಳು
2022 – 3,425
2023 – 6,596
2024 – 9,529

ಭಾರತದಲ್ಲಿ ಆಂಟಿ ಸ್ನೇಕ್ ವೆನಮ್ (ವಿಷ ನಿರೋಧಕ) ಅನ್ನು ಪ್ರಮುಖ ನಾಲ್ಕು ಜಾತಿಯ ಹಾವುಗಳ ಕಡಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲಿ ಒಟ್ಟು 290ಕ್ಕೂ ಹೆಚ್ಚು ಹಾವಿನ ಪ್ರಭೇದಗಳಿದ್ದು, ಅವುಗಳಲ್ಲಿ ಸಮಾರು 40 ವಿಷಪೂರಿತ ಹಾವುಗಳಿವೆ. ಆದರೆ, ಆಂಟಿ ಸ್ನೇಕ್‌ ವೆನಮ್ ತಯಾರಿಸುವಾಗ ಪ್ರಮುಖ ನಾಲ್ಕು ಹಾವುಗಳ ವಿಷವನ್ನು ಮಾತ್ರ ಬಳಸಲಾಗುತ್ತಿದೆ. ಈಶಾನ್ಯ ರಾಜ್ಯಗಳೂ ಸೇರಿದಂತೆ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಹಾವು ಪ್ರಭೇದ ಇವೆ. ಈ ನಾಲ್ಕು ಜಾತಿಗೆ ಸೇರದ ಹಾವುಗಳಿಂದ ಕಡಿತಕ್ಕೊಳಗಾದವರಿಗೆ ಈಗ ಬಳಸುತ್ತಿರುವ ಆ್ಯಂಟಿ ಸ್ನೇಕ್‌ ವೆನಮ್ ಅಷ್ಟು ಉಪಯುಕ್ತವಾಗುವುದಿಲ್ಲ. ಭಾರತದಂಥ ವಿಸ್ತಾರವಾದ, ವೈವಿಧ್ಯಮಯ ದೇಶದಲ್ಲಿ ಇಲ್ಲಿನ ಪ್ರಾದೇಶಿಕ ಭಿನ್ನತೆ, ಹಾವುಗಳ ವೈವಿಧ್ಯಕ್ಕೆ ತಕ್ಕಂತೆ ಆಂಟಿ ಸ್ನೇಕ್ ವೆನಮ್ ತಯಾರಿಸುವ ದಿಸೆಯಲ್ಲಿ ಅಧ್ಯಯನಗಳು ನಡೆಯಬೇಕಿದೆ ಎನ್ನುವುದು ತಜ್ಞರ ನಿಲುವು. ಹಾವುಗಳ ವಿಷದ ಸಾಮರ್ಥ್ಯವು ಅವುಗಳ ವಯಸ್ಸಿನೊಂದಿಗೆ ಮತ್ತು ವಾತಾವರಣಕ್ಕೆ ತಕ್ಕಂತೆ ಬದಲಾಗಿರುತ್ತದೆ ಎಂದು 2020ರಲ್ಲಿ ಪ್ರಕಟವಾದ ಇಂಡಿಯನ್‌ ಜರ್ನಲ್‌ ಆಫ್‌ ಮೆಡಿಕಲ್‌ ಹೇಳಿದೆ.

ಕೇರಳದಲ್ಲಿ ʻಸರ್ಪ’ ಸಾಧನೆ
2019ರಲ್ಲಿ ಕೇರಳದ ವಯನಾಡ್‌ನಲ್ಲಿ 5ನೇ ತರಗತಿಯ ಬಾಲಕಿಯೊಬ್ಬಳಿಗೆ ಶಾಲಾ ಕೊಠಡಿಯಲ್ಲಿಯೇ ಹಾವು ಕಚ್ಚಿ, ಆಕೆ ಮೃತಪಟ್ಟಿದ್ದಳು. 2019ರಲ್ಲಿ ರಾಜ್ಯದಲ್ಲಿ ಹಾವು ಕಚ್ಚಿ 130 ಮಂದಿ ಮೃತಪಟ್ಟಿದ್ದರು. 2030ರಲ್ಲಿ ಉತ್ತರಾ ಎನ್ನುವ ಮಹಿಳೆಗೆ ನಿದ್ರೆ ಮಾತ್ರ ನೀಡಿ, ಬೆಡ್ ರೂಮ್‌ ನಲ್ಲಿ ಮಲಗಿದ್ದಾಗ ಅವರ ಮೇಲೆ ಗಂಡನೇ ನಾಗರ ಹಾವನ್ನು ಎಸೆದಿದ್ದ ಹಾವು ಕಚ್ಚಿ ಉತ್ತರಾ ಅವರು ಮೃತಪಟ್ಟರು. ಆ ವರ್ಷ (2020) ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 80. ಈ ಎರಡು ಪ್ರಕರಣಗಳು ಹಾವು ಕಡಿತದ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಪ್ರೇರೇಪಿಸಿತು.

ಇನ್ನೂ 2023ರಲ್ಲಿ ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 40. 2024ರ ಆರಂಭದ ತಿಂಗಳಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 7. ಕೇರಳ ಕ್ರಮೇಣ ಹಾವು ಕಡಿತದ ಶೂನ್ಯ ಸಾವಿನ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ಕೇರಳದ ಈ ಸಾಧನೆಗೆ ಕಾರಣ, ಹಾವಿನ ಬಗ್ಗೆ ಅರಿವು ಮೂಡಿಸುವ ಮತ್ತು ಅವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ರೂಪಿಸಿರುವ ‘ಸರ್ಪ’ (ಸ್ನೇಕ್ ಅವೇರ್‌ನೆಸ್‌ ರನ್ನೂ ಮತ್ತು ಪ್ರೊಟೆಕ್ಷನ್) ಆ್ಯಪ್. ಇದರ ಮೂಲಕ ಸಂತ್ರಸ್ತರು ವೈಜ್ಞಾನಿಕವಾಗಿ ಹಾವನ್ನು ಹಿಡಿಯುವ ತರಬೇತಿ ಪಡೆದವರನ್ನು ಸಂಪರ್ಕಿಸಿ, ಶೀಘ್ರ ಚಿಕಿತ್ಸೆ ಪಡೆಯಬಹುದಾಗಿದೆ.

ಹಾವು ಕಚ್ಚಿದಾಗ ಏನು ಮಾಡಬೇಕು?
* ವಿಚಲಿತಗೊಳ್ಳದೆ ಶಾಂತವಾಗಿರಿ. ಕಡಿತಕೊಳ್ಳಗಾದ ವ್ಯಕ್ತಿಯನ್ನು ಸಮಾಧಾನ ಪಡಿಸಿ
* ಕಚ್ಚಿದ ಜಾಗ ಅಥವಾ ಗಾಯವನ್ನು ಹಾಗೆಯೇ ಬಿಡಿ
* ಕಡಿತದ ಜಾಗದಿಂದ ಬಿಗಿ ಬಟ್ಟೆ/ಆಭರಣ/ಗಡಿಯಾರ/ಉಂಗುರ/ಬೆಲ್ಫ್ ಪಾದರಕ್ಷೆಗಳನ್ನು ತೆಗೆಯಿರಿ
* ಕಡಿತಕ್ಕೆ ಒಳಗಾದ ವೃತ್ತಿಯು ಎಡ ಮಗ್ಗುಲಿಗೆ ಮಲಗುವಂತೆ ಮಾಡಿ. ಬಲಗಾಲು ಬಾಗಿರಲಿ, ಕೈಗಳು ತಲೆಯ ಕೆಳಭಾಗದಲ್ಲಿರಲಿ
* ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿರಿ

ಏನು ಮಾಡಬಾರದು?
* ಕಡಿತಕ್ಕೊಳಗಾದ ವ್ಯಕ್ತಿ ಗಾಬರಿಯಾಗುವುದಕ್ಕೆ ಅವಕಾಶ ನೀಡಬೇಡಿ
* ಕಚ್ಚಿದ ಹಾವನ್ನು ಹೊಡೆಯಬೇಡಿ ಅಥವಾ ಕೊಳ್ಳಬೇಡಿ. ಹೊಡೆದರೆ ಅದು ಮತ್ತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ
* ಕಡಿತದ ಗಾಯಕ್ಕೆ ವಿಷ ನಿರೋಧಕ ಔಷಧ ಹಾಕಬೇಡಿ
* ರಕ್ತ ಪರಿಚಲನೆ ತಡೆಯುವುದಕ್ಕಾಗಿ ಕಚ್ಚಿರುವ ಸ್ಥಳವನ್ನು ದಾರ, ಬಟ್ಟೆಯಿಂದ ಕಟ್ಟಬೇಡಿ ಗಾಯನಾಗಿರುವ ಭಾಗವನ್ನು ಕತ್ತರಿಸಬೇಡಿ
* ಕಡಿತಕ್ಕೊಳಗಾದ ವ್ಯಕ್ತಿಯನ್ನು ಅಂಗಾತವಾಗಿ ಮಲಗಿಸಬೇಡಿ. ದೇಹದಲ್ಲಿ ಗಾಳಿಯ ಸಂಚಾರವನ್ನು ಇದು ತಡೆಯಬಹುದು
* ಸಾಂಪ್ರದಾಯಿಕ ಅಥವಾ ಅಸುರಕ್ಷಿತವಾದ ಚಿಕಿತ್ಸೆಯನ್ನು ಪಡೆಯಬೇಡಿ ಎಂಬುದು ತಜ್ಞರ ಸಲಹೆ.

Share This Article
Facebook Whatsapp Whatsapp Telegram
Previous Article Belagavi Session Vidhasbaha ಬೆಳಗಾವಿ ಅಧಿವೇಶನ- ಒಂದೇ ದಿನ 15 ಗಂಟೆ ವಿಧಾನಸಭಾ ಕಲಾಪ
Next Article Pavithra Gowda 2 ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾ ಗೌಡ ಬಿಡುಗಡೆ

Latest Cinema News

Kavya Shastri G Parameshwar
`ಗೃಹಸಚಿವರ ಮಾತಿಗೆ ನಾಚಿಕೆಯಾಗ್ಬೇಕು’ ಎಂದ ನಟಿ ಕಾವ್ಯ ಶಾಸ್ತ್ರಿ
Cinema Latest Sandalwood Top Stories Uncategorized
Nimika Ratnakar
ದರ್ಶನ್ ಅಮೇಝಿಂಗ್ ವ್ಯಕ್ತಿ – ಕ್ರಾಂತಿ ಸೆಟ್‍ನ ಮೆಲುಕು ಹಾಕಿದ ಪುಷ್ಪವತಿ
Cinema Latest Sandalwood Top Stories
Sanjay Dutt 3
ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ ಡಬಲ್ ಮರ್ಡರ್ ಅಪರಾಧಿ!
Bollywood Cinema Latest Top Stories
Om Prakash Rao Darshan
ಫೀನಿಕ್ಸ್ ಸಿನಿಮಾದ ಕಥೆ ದರ್ಶನ್ ಅವರಿಗೆ ಮಾಡಿದ್ದು: ಓಂ ಪ್ರಕಾಶ್ ರಾವ್ ಸ್ಫೋಟಕ ಮಾತು
Cinema Latest Sandalwood Top Stories
Salman Khan Tears
ಅಮ್ಮ ಮಗನ ಮಾತುಕತೆ ಕಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್
Cinema Latest Top Stories TV Shows

You Might Also Like

H D Kumaraswamy 2
Bengaluru City

ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ – ಹೆಚ್‌ಡಿಕೆಗೆ ಹೈಕೋರ್ಟ್ ಶಾಕ್

8 minutes ago
Ramesh Lekhak
Latest

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 19 ಮಂದಿ ಸಾವು – ನೇಪಾಳ ಗೃಹ ಸಚಿವ ರಾಜೀನಾಮೆ

38 minutes ago
tree falls near anganwadi pregnant woman dies five others including 4 children seriously injured in yellapur kiravatti
Districts

ಯಲ್ಲಾಪುರ | ಅಂಗನವಾಡಿ ಬಳಿ ಮುರಿದುಬಿದ್ದ ಆಲದಮರ – ಗರ್ಭಿಣಿ ಸಾವು, 4 ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ

1 hour ago
Vijayendra
Latest

ದರಿದ್ರ ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ಅಪಮಾನ, ಹಿಂದೂ ಭಾವನೆಗೆ ಧಕ್ಕೆ: ಬಿ.ವೈ.ವಿಜಯೇಂದ್ರ

2 hours ago
Indian Army
Crime

ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ – ಮತ್ತಿಬ್ಬರು ಅಡಗಿರುವ ಶಂಕೆ, ತೀವ್ರ ಶೋಧ

2 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?