ನವದೆಹಲಿ: ಸೈಕಲ್ ಮೂಲಕವಾಗಿ ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವಿಯಾ ಅವರು ಸಂಸತ್ತಿಗೆ ಬಂದಿದ್ದಾರೆ. ಈ ವೀಡೀಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
2021ರ ನವೆಂಬರ್‌ನಲ್ಲಿ ಭಾರತ ಅಂತರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಹೆಲ್ತ್ ಪೆವಿಲಿಯನ್ ಅನ್ನು ಉದ್ಘಾಟಿಸಲು ಮತ್ತು ಹೆಚ್ಚುತ್ತಿರುವ ಮಾಲಿನ್ಯ, ಆರೋಗ್ಯ ಜಾಗೃತಿ ಮತ್ತು ಫಿಟ್‍ನೆಸ್‍ಗೆ ಜನರನ್ನು ಪ್ರೇರೇಪಿಸಲು ಸೈಕಲ್ ಸವಾರಿ ಮಾಡಿದ್ದರು. ಕೇಂದ್ರ ಸಚಿವರು ಮನೆಯಿಂದ ಸಂಸತ್ತಿಗೆ ಸೈಕಲ್ ಮೂಲಕ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವಾರು ಸಂದರ್ಭಗಳಲ್ಲಿ, ಅವರು ಆರೋಗ್ಯ ಜಾಗೃತಿಗಾಗಿ ಸಂದೇಶವನ್ನು ಕಳುಹಿಸಲು ಸೈಕಲ್ ಸವಾರಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ
Advertisement
#WATCH | Union Health Minister Mansukh Mandaviya rides a bicycle to Parliament in New Delhi pic.twitter.com/OCW3K896WC
— ANI (@ANI) February 2, 2022
Advertisement
2022-23ರ ಕೇಂದ್ರ ಬಜೆಟ್‍ನಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ಘೋಷಣೆಯನ್ನು ಸಚಿವ ಮಾಂಡವಿಯಾ ಮಂಗಳವಾರ ಶ್ಲಾಘಿಸಿದರು. ಇದು ನಾಗರಿಕರ ಜೀವನ ಸೌಕರ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಸ್ವಾವಲಂಬಿ ಭಾರತವನ್ನಾಗಿಸಲು ಮತ್ತು ಉದ್ದೇಶಿತ ಅಂತ್ಯೋದಯ ಯೋಜನೆಗಳನ್ನು ಬಲಪಡಿಸಲು ಬಜೆಟ್ ಪರಿಣಾಮಕಾರಿ ಎಂದು ಸಾಬೀತುಪಡಿಸಿದೆ ಎಂದು ಮಾಂಡವೀಯ ಹೇಳಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ