ನವದೆಹಲಿ: ದೇಶದ ಹಲವೆಡೆ ಇಂದಿನಿಂದಲೇ ಜಾರಿಗೆ ಬರುವಂತೆ ಕೆಜಿಗೆ ಟೊಮೆಟೋ (Tomato) ದರವನ್ನು 80 ರೂ.ಗೆ ಇಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ (Union Govt) ಕೈಗೊಂಡಿದೆ.
ದೇಶವ್ಯಾಪಿ 500 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಟೊಮೆಟೋ ಬೆಲೆ ಏರಿಕೆಯ ಪರಿಸ್ಥಿತಿ ಮರು ಮೌಲ್ಯಮಾಪನದ ನಂತರ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಕೆಜಿ ಟೊಮೆಟೋವನ್ನು 80 ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಸ್ಪೆಷಲ್ ಟೊಮೆಟೋ ಫೋರ್ಸ್ ರಚಿಸಿ: ಅಖಿಲೇಶ್ ಯಾದವ್
Advertisement
Advertisement
NAFED ಮತ್ತು NCCF ಮೂಲಕ ನೊಯ್ಡಾ, ಲಕ್ನೋ, ಕಾನ್ಪುರ್, ವಾರಣಾಸಿ, ಪಾಟ್ನಾ, ಮುಜಾಫರ್‌ಪುರ, ಅರ್ರಾ ಸೇರಿ ಅನೇಕ ಸ್ಥಳಗಳಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳನ್ನು ಅವಲಂಬಿಸಿ ಟೊಮೆಟೋ ಮಾರಾಟಕ್ಕೆ ಕ್ರಮಕೈಗೊಂಡಿದೆ. ನಾಳೆಯಿಂದ ಹೆಚ್ಚಿನ ನಗರಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಪ್ರಕಟಣೆ ಮೂಲಕ ತಿಳಿಸಿದೆ.
Advertisement
ಮಾನ್ಸೂನ್ ಮಳೆ ಕಾರಣ ಚಿಲ್ಲರೆ ಮಾರುಕಟ್ಟೆಗಳಲ್ಲಿ ಶನಿವಾರದಂದು ಟೊಮೆಟೋ ಬೆಲೆ ಪ್ರಮುಖ ನಗರಗಳಲ್ಲಿ ಪ್ರತಿ ಕೆಜಿಗೆ 250 ರೂ. ಮಾರಾಟವಾಗುತ್ತಿತ್ತು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಅಖಿಲ ಭಾರತ ಸರಾಸರಿ ಬೆಲೆ ಪ್ರತಿ ಕೆಜಿಗೆ 117 ರೂ. ಚಿಲ್ಲರೆ ಗ್ರಾಹಕರಿಗೆ ಪರಿಹಾರ ನೀಡಲು, ದೆಹಲಿ-ಎನ್‌ಸಿಆರ್, ಪಾಟ್ನಾ ಮತ್ತು ಲಕ್ನೋದಂತಹ ಆಯ್ದ ನಗರಗಳಲ್ಲಿ ಕೇಂದ್ರವು ಪ್ರತಿ ಕೆಜಿಗೆ 90 ರೂ.ಗೆ ರಿಯಾಯಿತಿ ದರದಲ್ಲಿ ಟೊಮೆಟೋವನ್ನು ಮಾರಾಟ ಮಾಡುತ್ತಿದೆ. ಮೊಬೈಲ್ ವ್ಯಾನ್‌ಗಳ ಮೂಲಕ ಶನಿವಾರ ದೆಹಲಿ-ಎನ್‌ಸಿಆರ್‌ನಲ್ಲಿ ಸುಮಾರು 18,000 ಕೆಜಿ ಮಾರಾಟವಾಗಿದೆ. ಇದನ್ನೂ ಓದಿ: ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೋ ಖರೀದಿಗೆ ಕೇಂದ್ರ ಸೂಚನೆ
Advertisement
ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ಕೇಂದ್ರದ ಪರವಾಗಿ ಮೊಬೈಲ್ ವ್ಯಾನ್‌ಗಳ ಮೂಲಕ ಟೊಮೆಟೋ ಮಾರಾಟ ಮಾಡುತ್ತಿವೆ.
ದೆಹಲಿ ಮತ್ತು ನೊಯ್ಡಾದ ವಿವಿಧ ಭಾಗಗಳ ಜೊತೆಗೆ ಇಂದು ಲಕ್ನೋ, ಪಾಟ್ನಾ ಮತ್ತು ಮುಜಾಫರ್‌ಪುರದಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೋ ಮಾರಾಟ ಪ್ರಾರಂಭವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಟೊಮೆಟೋ ಕೆಜಿಗೆ 178 ರೂ., ಮುಂಬೈನಲ್ಲಿ ಕೆಜಿಗೆ 150 ರೂ. ಮತ್ತು ಚೆನ್ನೈನಲ್ಲಿ ಕೆಜಿಗೆ 132 ರೂ. ಮಾರಾಟವಾಗುತ್ತಿದೆ. ಹಾಪುರದಲ್ಲಿ ಅತಿ ಹೆಚ್ಚು ಅಂದರೆ 250 ರೂ.ಗೆ ಟೊಮೆಟೋ ಮಾರಾಟವಾಗುತ್ತಿದೆ.
Web Stories