ನವದೆಹಲಿ: ಕೇಂದ್ರ ಸರ್ಕಾರ ಇಂಟರ್ ನೆಟ್ ಸರ್ವಿಸ್ ಪ್ರೊವೈಡರ್ಸ್ ಗಳಿಗೆ 827 ಪೋರ್ನ್ ತಾಣಗಳನ್ನು ಬ್ಲಾಕ್ ಮಾಡುವಂತೆ ಆದೇಶಿಸಿದೆ. ಉತ್ತರಖಂಡ ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.
ಉತ್ತರಾಖಂಡ ಹೈಕೋರ್ಟ್ ಎಲೆಕ್ಟ್ರಾನಿಕ್ಸ್ ಸಚಿವಾಲಯ 857 ಪೋರ್ನ್ ತಾಣಗಳನ್ನು ಬ್ಲಾಕ್ ಮಾಡುವಂತೆ ಸೂಚಿಸಿತ್ತು. ಸೂಚನೆಯ ಹಿನ್ನೆಲೆಯಲ್ಲಿ 30 ತಾಣಗಳಲ್ಲಿ ಅಶ್ಲೀಲತೆ ಇಲ್ಲ ಎಂದು ಎಲೆಕ್ಟ್ರಾನಿಕ್ಸ್ ಸಚಿವಾಲಯ ದೂರಸಂಪರ್ಕ ಸಚಿವಾಲಯಕ್ಕೆ ವೆಬ್ ಸೈಟ್ ಗಳ ಮಾಹಿತಿ ನೀಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಮಕ್ಕಳ ಪೋರ್ನ್ ಚಿತ್ರಗಳು ತಾಣಗಳಲ್ಲಿ ಇರುವ ಹಿನ್ನೆಲೆಯಲ್ಲಿ ಉತ್ತಾರಖಂಡ ಹೈಕೋರ್ಟ್ ಸೆಪ್ಟೆಂಬರ್ 27 ರಂದು ಈ ತಾಣಗಳನ್ನು ಬ್ಲಾಕ್ ಮಾಡುವಂತೆ ಆದೇಶಿತ್ತು. ಅಕ್ಟೋಬರ್ 8ಕ್ಕೆ ಈ ಆದೇಶ ಎಲೆಕ್ಟ್ರಾನಿಕ್ಸ್ ಸಚಿವಾಲಯಕ್ಕೆ ತಲುಪಿತ್ತು.
Advertisement
ದೂರಸಂಪರ್ಕ ಸಚಿವಾಲಯ ಎಲ್ಲ ಸರ್ವಿಸ್ ಪ್ರೊವೈಡರ್ ಗಳಿಗೆ, ಉತ್ತರಾಖಂಡ ಹೈಕೋರ್ಟ್ ಆದೇಶದ ಅನುಸಾರ ಎಲೆಕ್ಟ್ರಾನಿಕ್ಸ್ ಸಚಿವಾಲಯ ಸಿದ್ಧಪಡಿಸಿದ 827 ಪೋರ್ನ್ ತಾಣಗಳನ್ನು ಈ ಕೂಡಲೇ ಬ್ಲಾಕ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv