ನವದೆಹಲಿ: ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ (ಎನ್‌ಐಸಿಡಿಪಿ) ಅಡಿಯಲ್ಲಿ 28,500 ಕೋಟಿ ರೂ. ಹೂಡಿಕೆಯೊಂದಿಗೆ 12 ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ (Union Cabinet) ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಸುಮಾರು 12 ಲಕ್ಷ ನೇರ ಉದ್ಯೋಗಗಳು ಮತ್ತು 20 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯ ಎಂದು ತಿಳಿಸಿದೆ.
ಭಾರತವು ‘ಪ್ಲಗ್-ಎನ್-ಪ್ಲೇ’ ಮತ್ತು ‘ವಾಕ್-ಟು-ವರ್ಕ್’ ಪರಿಕಲ್ಪನೆಗಳೊಂದಿಗೆ ವಿಶ್ವದರ್ಜೆಯ ಗ್ರೀನ್‌ಫೀಲ್ಡ್ ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು (Industrial Smart Cities) ನಿರ್ಮಿಸಲು ಸಜ್ಜಾಗಿದೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಮಳೆ ಅವಾಂತರ – 15 ಸಾವು, 20 ಸಾವಿರ ಮಂದಿ ಸ್ಥಳಾಂತರ
Advertisement
Advertisement
ಈ ಯೋಜನೆಗಳು ದೃಢವಾದ ಮತ್ತು ಸುಸ್ಥಿರ ಮೂಲಸೌಕರ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ. ಹೂಡಿಕೆ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ ಎಂದು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
ಬೇಡಿಕೆಗಿಂತ ಮುಂಚಿತವಾಗಿ ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸಲಾಗುವುದು. ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆಗಳನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾದ ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ‘ಪ್ಲಗ್-ಎನ್-ಪ್ಲೇ’ ಪರಿಕಲ್ಪನೆಯು ಅಗತ್ಯ ಮೂಲಸೌಕರ್ಯವು ಸುಲಭವಾಗಿ ಲಭ್ಯವಿರುತ್ತದೆ ಎಂದು ಸೂಚಿಸುತ್ತದೆ. ಇದು ವ್ಯವಹಾರಗಳಿಗೆ ತ್ವರಿತವಾಗಿ ಕಾರ್ಯಾಚರಣೆಗಳನ್ನು ಹೊಂದಿಸಲು ಸುಲಭವಾಗುತ್ತದೆ. ‘ವಾಕ್-ಟು-ವರ್ಕ್’ ಪರಿಕಲ್ಪನೆಯು ಕೆಲಸದ ಸ್ಥಳಗಳಿಗೆ ಸಮೀಪವಿರುವ ವಸತಿ ಪ್ರದೇಶಗಳನ್ನು ರೂಪಿಸುವುದನ್ನು ಒತ್ತಿ ಹೇಳುತ್ತದೆ. ಇದರಿಂದಾಗಿ ಪ್ರಯಾಣದ ಸಮಯವನ್ನು ಕಡಿಮೆಯಾಗುವುದಲ್ಲದೇ, ನಿವಾಸಿಗಳ ಜೀವನದ ಗುಣಮಟ್ಟ ಸುಧಾರಿಸುತ್ತದೆ. ಇದನ್ನೂ ಓದಿ: PMLA ಪ್ರಕರಣಗಳಲ್ಲೂ ಜಾಮೀನು ಒಂದು ನಿಯಮ, ಜೈಲು ಒಂದು ವಿನಾಯಿತಿ – ಸುಪ್ರೀಂಕೋರ್ಟ್
Advertisement
ಎಲ್ಲೆಲ್ಲಿ ಸ್ಮಾರ್ಟ್ ಸಿಟಿ?
* ಉತ್ತರಾಖಂಡದ ಖುರ್ಪಿಯಾ
* ಪಂಜಾಬ್‌ನ ರಾಜಪುರ, ಪಟಿಯಾಲ
* ಉತ್ತರ ಪ್ರದೇಶದ ಆಗ್ರಾವು ಸ್ವಚ್ಛ ಮತ್ತು ಪರಿಸರ ಸ್ನೇಹಿ ಕೈಗಾರಿಕಾ ಅಭಿವೃದ್ಧಿಯನ್ನು ಹೊಂದಿರುತ್ತದೆ
* ಯುಪಿಯಲ್ಲಿ ಪ್ರಯಾಗ್ರಾಜ್
* ಬಿಹಾರದ ಗಯಾ ಕೃಷಿ, ಜವಳಿ ಮತ್ತು ಇಂಜಿನಿಯರಿಂಗ್ ಮೇಲೆ ಕೇಂದ್ರೀಕರಿಸುತ್ತದೆ
* ಮಹಾರಾಷ್ಟ್ರದ ಈಘಿ ಬಂದರು ಕೈಗಾರಿಕಾ ಪ್ರದೇಶ. ಬಂದರು ನೇತೃತ್ವದ ಕೈಗಾರಿಕೀಕರಣದತ್ತ ಗಮನ ಹರಿಸಲಾಗುವುದು
* ಜೋಧಪುರ, ರಾಜಸ್ಥಾನದ ಪಾಲಿ.
* ಆಂಧ್ರಪ್ರದೇಶದ ಕೋಪರ್ತಿ
* ಆಂಧ್ರಪ್ರದೇಶದ ಓರ್ವಕಲ್
* ತೆಲಂಗಾಣದ ಜಹೀರಾಬಾದ್
* ಕೇರಳದ ಪಾಲಕ್ಕಾಡ್
* ಜಮ್ಶೆಡ್‌ಪುರ-ಪುರುಲಿಯಾ-ಅಸನ್ಸೋಲ್