ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ತಮ್ಮ 8ನೇ ಬಜೆಟ್ ಮಂಡಿಸಿದ್ದಾರೆ. ಮಹಿಳೆಯರು, ರೈತರು, ಯುವಜನತೆ, ಬಡವರನ್ನು ಕೇಂದ್ರವಾಗಿಟ್ಟುಕೊಂಡು ಬಜೆಟ್‌ನಲ್ಲಿ ಕೊಡುಗೆ ನೀಡಿದ್ದಾರೆ. ಮಧ್ಯಮ ವರ್ಗದ ಆರ್ಥಿಕ ಸಬಲೀಕರಣಕ್ಕೆ ತೆರಿಗೆ ವಿನಾಯಿತಿ ಗಿಫ್ಟ್ ಕೊಟ್ಟಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಈ ಬಾರಿ ಯಾವ್ಯಾವ ವಸ್ತುಗಳು ಅಗ್ಗ ಮತ್ತು ಯಾವ್ಯಾವುವು ದುಬಾರಿ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಬೆಲೆ ಇಳಿಕೆ
* ಮೊಬೈಲ್
* ಎಲ್‌ಇಡಿ/ಎಲ್‌ಸಿಡಿ ಟಿವಿ
* ಸುಗಂದ ದ್ರವ್ಯ
* ಲಿಥಿಯಂ ಅಯಾನ್ ಬ್ಯಾಟರಿ
* ಲೆದರ್ ಬೆಲ್ಟ್, ಶೂ, ಜಾಕೆಟ್
* ಸಾಗರ ಉತ್ಪನ್ನ
* ಹಡಗುಗಳ ತಯಾರಿಕೆಗೆ ಬಳಸುವ ಕಚ್ಚಾ ವಸ್ತು
* ಕ್ಯಾನ್ಸರ್ ಔಷಧಿ, ಜೀವರಕ್ಷಕ ಔಷಧಿ
* ಸ್ವದೇಶಿ ಬಟ್ಟೆ
ಬೆಲೆ ಏರಿಕೆ
* ಹೆಣೆದ ಬಟ್ಟೆಗಳು
* ಪ್ಯಾನೆಲ್ ಡಿಸ್‌ಪ್ಲೇ ಮೇಲಿನ ಕಸ್ಟಮ್ಸ್ ಸುಂಕ ಹೆಚ್ಚಳ (10%-20%)
* ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಹೆಚ್ಚಳ (10%-15%)