ನವದೆಹಲಿ: ಕರ್ನಾಟಕಕ್ಕೆ (Karnataka) ಈ ಬಾರಿಯ ಬಜೆಟ್‌ನಲ್ಲಿ( Budget) ನಿರಾಸೆಯೇ ಎದುರಾಗಿದೆ. ಯಾವುದೇ ವಿಶೇಷ ಮತ್ತು ಹೊಸ ಯೋಜನೆಗಳು ಪ್ರಕಟವಾಗಿಲ್ಲ. ಎಂದಿನಂತೆ ಹಳೆಯ ರೈಲ್ವೇ ಯೋಜನೆಗಳಿಗೆ (Railway Project) ಒಂದಿಷ್ಟು ಅನುದಾನವನ್ನು ಮೀಸಲಿರಿಸಲಾಗಿದೆ.
ಕರ್ನಾಟಕಕ್ಕೆ ಕೇಂದ್ರ ಮತ್ತೆ ಚೊಂಬು ಕೊಟ್ಟಿದೆ. ನಮ್ಮ ಒಂದೇ ಒಂದು ಬೇಡಿಕೆ ಈಡೇರಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅಶೋಕ್, ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿರಹಿತವಾಗಿ 1.5 ಲಕ್ಷ ಕೋಟಿ ನೆರವನ್ನು ಮೂಲಸೌಕರ್ಯ ಅಭಿವೃದ್ಧಿಗೆ ನೆರವು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. 2021ರಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು. ಅದರ ಯಶಸ್ಸಿನ ಆಧಾರದ ಮೇಲೆ 2ನೇ ಯೋಜನೆಯನ್ನು 2025-39ರವರೆಗೂ ವಿಸ್ತರಿಸಲಾಗಿದೆ. ಹೊಸ ಯೋಜನೆಗಳಿಗಾಗಿ 10 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಇದನ್ನೂ ಓದಿ: Budget 2025| ಕಿತ್ತಾಟ ನಡೆಸಿದ್ರೂ ಮಾಲ್ಡೀವ್ಸ್‌ಗೆ ಅನುದಾನ ಹೆಚ್ಚಳ,ಬಾಂಗ್ಲಾಗೂ ಸಹಾಯ- ಯಾವ ದೇಶಕ್ಕೆ ಎಷ್ಟು ಕೋಟಿ?
ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದೇನು?
* ಗದಗ – ವಾಡಿ ರೈಲ್ವೇ ಮಾರ್ಗ : 549 ಕೋಟಿ ರೂ.
* ತುಮಕೂರು – ಚಿತ್ರದುರ್ಗ ರೈಲ್ವೇ ಮಾರ್ಗ – ದಾವಣಗೆರೆ ಮಾರ್ಗ: 549 ಕೋಟಿ ರೂ.
* ರಾಯದುರ್ಗ – ಕಲ್ಯಾಣದುರ್ಗ- ತುಮಕೂರು ರೈಲ್ವೇ ಮಾರ್ಗ: 434 ಕೋಟಿ ರೂ.
* ಬಾಗಲಕೋಟೆ – ಕುಡಚಿ ರೈಲ್ವೇ ಮಾರ್ಗ: 428 ಕೋಟಿ ರೂ.
* ಬೆಂಗಳೂರು – ವೈಟ್‌ಫೀಲ್ಡ್ – ಕೆಆರ್ ಪುರಂ ರೈಲ್ವೇ ಮಾರ್ಗ: 357 ಕೋಟಿ ರೂ.
* ದೌಂಡ್ – ಕಲಬುರಗಿ ರೈಲ್ವೇ ಮಾರ್ಗದ ವಿದ್ಯುದ್ದೀಕರಣ : 84 ಕೋಟಿ ರೂ.
* ರಾಮನಗರ – ಮೈಸೂರು ರೈಲ್ವೇ ಮಾರ್ಗದ ವಿದ್ಯುದ್ದೀಕರಣ – 10 ಕೋಟಿ ರೂ.
* ಬೆಂಗಳೂರಿನ ಐಐಎಸ್ಸಿ ಅಭಿವೃದ್ಧಿಗೆ ಆದ್ಯತೆ ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ
ಕರ್ನಾಟಕಕ್ಕೆ ನಿರಾಸೆ ಏಕೆ?
* ರಾಯಚೂರು ಏಮ್ಸ್ ನಿರೀಕ್ಷೆ ಇತ್ತು. ಪ್ರಕಟವಾಗಿಲ್ಲ
* ಮೆಟ್ರೋಗೆ ಹೆಚ್ಚಿನ ಅನುದಾನ ನೀಡಿಲ್ಲ